ನವದೆಹಲಿ: ಜಾಗತಿಕ ಸ್ಮಾರ್ಟ್ ಫೋನ್ ಬ್ರಾಂಡ್ ಐಕ್ಯೂ ಮಂಗಳವಾರ ತನ್ನ ಝಡ್ ಸರಣಿಯ ಝಡ್ 9 ಶ್ರೇಣಿಯ ಅಡಿ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ಮಾರ್ಟ್ ಫೋನ್ ಬ್ರಷ್ ಗ್ರೀನ್ ಮತ್ತು ಗ್ರ್ಯಾಫೀನ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದು ಐಕ್ಯೂ ಇ- ಸ್ಟೋರ್ ಮತ್ತು Amazon ಡಾಟ್ in ಎರಡರಲ್ಲೂ 8 ಜಿಬಿ + 128 ಜಿಬಿಗೆ 17,999 ರೂ ಮತ್ತು 8 ಜಿಬಿ + 256 ಜಿಬಿಗೆ 19,999 ರೂ. ಬೆಲೆ ಶ್ರೇಣಿಗಳಲ್ಲಿ ಲಭ್ಯವಿದೆ. ಮಾರ್ಚ್ 13 ರಿಂದ ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಮತ್ತು ಮಾರ್ಚ್ 14 ರಿಂದ ಇತರ ಎಲ್ಲ ಗ್ರಾಹಕರಿಗೆ ಲಭ್ಯವಿರುತ್ತದೆ.
"ಜೆನ್ ಝಡ್ ಯುವಜನತೆಗಾಗಿ ವಿನ್ಯಾಸಗೊಳಿಸಲಾದ ಈ ಸಾಧನವು ಶೈಲಿ ಮತ್ತು ಕಾರ್ಯಕ್ಷಮತೆಯ ಸಂಯೋಜನೆಯಾಗಿದೆ. ಕಾಲೇಜು ವಿದ್ಯಾರ್ಥಿಗಳು ಹೆಮ್ಮೆಯಿಂದ ಬಳಸಬಹುದಾದ ಪರಿಪೂರ್ಣ ಸ್ಮಾರ್ಟ್ಫೋನ್ ಇದಾಗಿದೆ" ಎಂದು ಐಕ್ಯೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಪುನ್ ಮರ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸ್ಮಾರ್ಟ್ ಫೋನ್ segment -first 50 ಎಂಪಿ ಸೋನಿ ಐಎಂಎಕ್ಸ್ 882 ಒಐಎಸ್ ಹಿಂಭಾಗದ ಕ್ಯಾಮೆರಾ ಹೊಂದಿದೆ. ಹೆಚ್ಚುವರಿಯಾಗಿ 16 ಎಂಪಿ ಮುಂಭಾಗದ ಕ್ಯಾಮೆರಾ ಮತ್ತು 2 ಎಂಪಿ ಬೊಕೆ ಕ್ಯಾಮೆರಾ ಸೆಟಪ್ ಇದರಲ್ಲಿದೆ. ಈ ಸಾಧನವು ಭಾವಚಿತ್ರ ಛಾಯಾಗ್ರಹಣದಲ್ಲಿ (portrait photography) 2x ಜೂಮ್ ಸಾಮರ್ಥ್ಯಗಳನ್ನು ಸಹ ನೀಡುತ್ತದೆ. ಇದು ಚಿತ್ರದ ತೀಕ್ಷ್ಣತೆ ಮತ್ತು ಸಂಯೋಜನೆ ಹೆಚ್ಚಿಸುತ್ತದೆ.