IQOO 13 Launched in India:ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ ಲಗ್ಗೆಯಿಟ್ಟಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕ ಐಕ್ಯೂ ತನ್ನ ಹೊಸ 'ಐಕ್ಯೂ 13' ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇತ್ತೀಚೆಗೆ ಈ ಫೋನ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಮಾಹಿತಿ ಈ ಕೆಳಗಿನಂತಿದೆ..
ಈ ಮೊಬೈಲ್ ಪವರ್ಫುಲ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಒಳಗೊಂಡಿದೆ. ಚೀನಾದಲ್ಲಿ ಬಿಡುಗಡೆಯಾದ 'ಐಕ್ಯೂ 13' ಗೆ ಹೋಲಿಸಿದರೆ, ಭಾರತೀಯ ರೂಪಾಂತರವು ಶಕ್ತಿಶಾಲಿಯಾದ ಬ್ಯಾಟರಿ ಹೊಂದಿದೆ. ಈ ಸ್ಮಾರ್ಟ್‌ಫೋನ್ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.
'ಐಕ್ಯೂ 13' ಫೀಚರ್ಗಳು:
- ಡಿಸ್ಪ್ಲೇ: 6.82-ಇಂಚಿನ LTPO AMOLED ಫ್ಲಾಟ್ ಸ್ಕ್ರೀನ್
- ರೆಸಲ್ಯೂಶನ್: 2K
- ರಿಫ್ರೆಶ್ ರೇಟ್: 144Hz
- ಪ್ರೊಸೆಸರ್: Qualcomm Snapdragon 8 Elite
- ರಿಯರ್ ಕ್ಯಾಮೆರಾ: 50MP ಪ್ರಾಥಮಿಕ (ಸೋನಿ IMX921) + 50MP ಅಲ್ಟ್ರಾ-ವೈಡ್ + 50MP ಟೆಲಿಫೋಟೋ
- ಫ್ರಂಟ್ ಕ್ಯಾಮೆರಾ: 32MP
- ಬ್ಯಾಟರಿ: 6,000mAh
- ಚಾರ್ಜಿಂಗ್: 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್
- ಆಪರೇಟಿಂಗ್ ಸಿಸ್ಟಮ್: Android 15 ಆಧಾರಿತ FunTouchOS 15
- ಅಪ್ಡೇಟ್ಸ್: 4 Android ಅಪ್ಡೇಟ್ಸ್, 5 ವರ್ಷಗಳ ಭದ್ರತಾ ಅಪ್ಡೇಟ್ಸ್
- ಪ್ರೊಟೆಕ್ಷನ್: IP68/IP69
ಇದರಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಜೊತೆಗೆ ಕ್ಯೂ2 ಸೂಪರ್ ಕಂಪ್ಯೂಟಿಂಗ್ ಅನ್ನು ಗೇಮಿಂಗ್‌ಗಾಗಿ ನೀಡಲಾಗಿದೆ. ಇದು 2K ಗೇಮ್ ಸೂಪರ್ ರೆಸಲ್ಯೂಶನ್ ಹೊಂದಿದೆ. ಇದು ಗ್ರಾಫಿಕ್ಸ್ ಅನ್ನು ಇನ್ನಷ್ಟು ಸುಧಾರಿಸುತ್ತದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್‌ನಲ್ಲಿರುವ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯು ಫೋನ್ ಅನ್ನು ಹೆಚ್ಚು ಬಿಸಿಯಾಗದಂತೆ ರಕ್ಷಿಸುತ್ತದೆ.