ನವದೆಹಲಿ: ಭಾರತದಲ್ಲಿ ಬಳಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆ್ಯಪಲ್ ತನ್ನ ಸ್ಮಾರ್ಟ್ಫೋನ್ಗಳಲ್ಲಿ ಹಲವಾರು ಭಾರತೀಯ ಭಾಷೆಗಳನ್ನು ಬಳಸುವ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
ತನ್ನ ಹೊಸ ಐಒಎಸ್ ಅಪ್ಡೇಟ್ ಮೂಲಕ ಹೊಸ ಭಾರತೀಯ ಫಾಂಟ್ಗಳು ಮತ್ತು ಸಂಖ್ಯೆಗಳು, ಇನ್ಪುಟ್ಗಾಗಿ ಬಹುಭಾಷಾ ಕೀಬೋರ್ಡ್, ಸುಧಾರಿತ ಭಾಷೆ ಆಧರಿತ ಹುಡುಕಾಟ ಮತ್ತು ಬಹುಭಾಷಾ ಸಿರಿ ಅಸಿಸ್ಟಂಟ್ ಬೆಂಬಲದೊಂದಿಗೆ ಫೋನ್ ಮತ್ತು ಸಂವಹನದಾದ್ಯಂತ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.
"ಐಒಎಸ್ 18 ಅಪ್ಡೇಟ್ ಐಫೋನ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ವೈಯಕ್ತಿಕ, ಸಮರ್ಥ ಮತ್ತು ಬುದ್ಧಿವಂತ ಸಾಧನವನ್ನಾಗಿ ಮಾಡುತ್ತದೆ. ಇದು ಹೆಚ್ಚಿನ ಕಸ್ಟಮೈಸೇಶನ್ ಆಯ್ಕೆಗಳು, ಫೋಟೋ ಅಪ್ಲಿಕೇಶನ್ನ ಅತಿದೊಡ್ಡ ಮರುವಿನ್ಯಾಸ, ಮೇಲ್ನಲ್ಲಿ ತಮ್ಮ ಇನ್ ಬಾಕ್ಸ್ ಅನ್ನು ನಿರ್ವಹಿಸಲು ಹೊಸ ಮಾರ್ಗಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುವ ಪ್ರಮುಖ ಅಪ್ಡೇಟ್ ಆಗಿದೆ" ಎಂದು ಆ್ಯಪಲ್ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ಅಪ್ಡೇಟ್ನಲ್ಲಿ ಬಳಕೆದಾರರು ಈಗ ಅರೇಬಿಕ್, ಅರೇಬಿಕ್ ಇಂಡಿಕ್, ಬಾಂಗ್ಲಾ, ದೇವನಾಗರಿ, ಗುಜರಾತಿ, ಗುರುಮುಖಿ, ಕನ್ನಡ, ಮಲಯಾಳಂ, ಮೀಟಿ, ಒಡಿಯಾ, ಓಲ್ ಚಿಕಿ, ತೆಲುಗು ಹೀಗೆ 12 ಭಾರತೀಯ ಭಾಷೆಗಳಲ್ಲಿ ಭಾರತೀಯ ಸಂಖ್ಯೆಗಳೊಂದಿಗೆ ಲಾಕ್ ಸ್ಕ್ರೀನ್ನಲ್ಲಿ ಟೈಮ್ ಅನ್ನು ಕಸ್ಟಮೈಸ್ ಮಾಡಬಹುದು ಮತ್ತು ತಮ್ಮ ಕಾಂಟ್ಯಾಕ್ಟ್ ಪೋಸ್ಟರ್ಗಳಿಗೆ ಗ್ರಾಹಕರು ತಾವು ಬಯಸುವ ಲುಕ್ ನೀಡಲು ಫಾಂಟ್ ಬಣ್ಣ ಮತ್ತು ಕಾಂಟ್ರಾಸ್ಟ್ಗಳನ್ನು ಸರಿ ಹೊಂದಿಸಬಹುದು.
ಐಒಎಸ್ 18 ಭಾರತೀಯ ಇಂಗ್ಲಿಷ್ನಲ್ಲಿ ಲೈವ್ ವಾಯ್ಸ್ಮೇಲ್ ಟ್ರಾನ್ಸ್ ಸ್ಕ್ರಿಪ್ಷನ್, ಲೈವ್ ಕಾಲರ್ ಐಡಿ ಬೆಂಬಲ, ಜೊತೆಗೆ ಸ್ಮಾರ್ಟ್ ಕಾಲ್ ಹಿಸ್ಟರಿ ಹುಡುಕಾಟ ಮತ್ತು ಹೊಸ ಫೋನ್ ಕೀಪ್ಯಾಡ್ ಹುಡುಕಾಟ ಮತ್ತು ಡಯಲಿಂಗ್ ವೈಶಿಷ್ಟ್ಯಗಳನ್ನು ಕೂಡ ಪರಿಚಯಿಸಿದೆ. ಹೊಸ ಅಪ್ಡೇಟ್ನಿಂದ ಬಳಕೆದಾರರು ಈಗ ಬಹುಭಾಷಾ ಕೀಬೋರ್ಡ್ ಅನ್ನು ಬಳಸಲು ಸಾಧ್ಯವಾಗಲಿದೆ.
ಐಫೋನ್ 12 ಮತ್ತು ನಂತರದ ಫೋನ್ ಬಳಕೆದಾರರು ಈಗ ಇಂಗ್ಲಿಷ್ನಲ್ಲಿ ಲ್ಯಾಟಿನ್ ಅಕ್ಷರಗಳೊಂದಿಗೆ ಮತ್ತು ತ್ರಿಭಾಷಾ ಮುನ್ಸೂಚನೆ ಟೈಪಿಂಗ್ ಅನುಭವಕ್ಕಾಗಿ ಎರಡು ಹೆಚ್ಚುವರಿ ಭಾರತೀಯ ಭಾಷೆಗಳೊಂದಿಗೆ ಫೊನೆಟಿಕ್ ಆಗಿ ಟೈಪ್ ಮಾಡಬಹುದು. ಇದು ಮೆಸೇಜ್ಗಳು, ನೋಟ್ಗಳು ಮತ್ತು ಬಳಕೆದಾರರು ಕೀಬೋರ್ಡ್ ಬಳಸಬಹುದಾದ ಕಡೆಯೆಲ್ಲ ಲಭ್ಯವಿದೆ. ಬಹುಭಾಷಾ ಕೀಬೋರ್ಡ್ ಕ್ವಿಕ್ ಪಾಥ್ ಮತ್ತು ಎಮೋಜಿ ಪ್ರಿಡಿಕ್ಷನ್ ಅನ್ನು ಸಹ ಬೆಂಬಲಿಸುತ್ತದೆ.
ಇದನ್ನೂ ಓದಿ : ಟಿಎನ್ಟಿಗಿಂತ ದುಪ್ಪಟ್ಟು ಶಕ್ತಿಶಾಲಿ 'ಸೆಬೆಕ್ಸ್ 2' ಸ್ಪೋಟಕ ಸಿದ್ಧ: ಭಾರತದ ಸಮರ ಸನ್ನದ್ಧತೆಗೆ ಮತ್ತೊಂದು ಗರಿ - Sebex 2 Explosives Technology