Smartphone Exports Hit Record:ಕಳೆದ ನವೆಂಬರ್‌ನಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ರಫ್ತುಗಳಲ್ಲಿ ದಾಖಲೆಯ ಬೆಳವಣಿಗೆ ಕಂಡುಬಂದಿದೆ. ಇದೇ ಮೊದಲ ಬಾರಿಗೆ ದೊಡ್ಡ ವಹಿವಾಟು ನಡೆದಿದೆ. ಕೇವಲ ಒಂದೇ ತಿಂಗಳಲ್ಲಿ 20 ಸಾವಿರು ಕೋಟಿ ರೂಪಾಯಿಗಳ ಗಡಿ ದಾಟಿದೆ. ಸ್ಮಾರ್ಟ್‌ಫೋನ್ ರಫ್ತಿನಲ್ಲಿ ಆಪಲ್ ಅತ್ಯಧಿಕ ಬೆಳವಣಿಗೆ ಕಂಡುಬಂದಿದೆ.
ಉದ್ಯಮದ ಅಂಕಿಅಂಶಗಳ ಪ್ರಕಾರ, ಸ್ಮಾರ್ಟ್‌ಫೋನ್ ರಫ್ತು 20,300 ಕೋಟಿ ರೂ.ಗಳನ್ನು ದಾಟಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 90 ರಷ್ಟು ಬೆಳವಣಿಗೆ ಕಂಡು ಬಂದಿದೆ. ಕಳೆದ ತಿಂಗಳು ರಫ್ತುಗಳಲ್ಲಿ ಆಪಲ್ ಮುಂಚೂಣಿಯಲ್ಲಿದೆ. ಇದರ ನಂತರ ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ದೇಶದಿಂದ ಸ್ಮಾರ್ಟ್‌ಫೋನ್ ರಫ್ತು 10,600 ಕೋಟಿ ರೂ.ರಷ್ಟು ನಡೆದಿತ್ತು. ದೇಶದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2024 ರ ವೇಳೆಗೆ ಏಕ - ಅಂಕಿಯ ವಾರ್ಷಿಕ ಬೆಳವಣಿಗೆಯೊಂದಿಗೆ ಹೊರಹೊಮ್ಮುವ ನಿರೀಕ್ಷೆಯಿದೆ. ಸರ್ಕಾರದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯೊಂದಿಗೆ, FY2025 ರ ಏಳು ತಿಂಗಳುಗಳಲ್ಲಿ (ಏಪ್ರಿಲ್-ಅಕ್ಟೋಬರ್) 10 ಶತಕೋಟಿ ಡಾಲರ್‌ಗೆ ತಲುಪಲು ಆಪಲ್‌ನ ಐಪೋನ್ ಸಿದ್ಧವಾಗಿದೆ, ಇದು ಕೇವಲ 7 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಆಗಿದೆ.
FY2024 ರಲ್ಲಿ ಟೆಕ್ ದೈತ್ಯ ಭಾರತದಲ್ಲಿ 14 ಶತಕೋಟಿ ಡಾಲರ್ ಮೌಲ್ಯದ ಐಫೋನ್‌ಗಳನ್ನು ತಯಾರಿಸಿದೆ/ಅಸೆಂಬಲ್ ಮಾಡಿದೆ. ಅಷ್ಟೇ ಅಲ್ಲ 10 ಶತಕೋಟಿ ಡಾಲರ್ಗಿಂತ ಹೆಚ್ಚು ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, 7 ತಿಂಗಳಲ್ಲಿ ಸ್ಮಾರ್ಟ್‌ಫೋನ್ ಪಿಎಲ್‌ಐ ಯೋಜನೆಗೆ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದರು.