ಹೈದರಾಬಾದ್: ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿವಹಿಸುವ ನಾವು, ಅನೇಕ ಬಾರಿ ನಮ್ಮ ಮೆಚ್ಚಿನ ವಾಹನಗಳ ಬಗ್ಗೆ ಚಿಂತಿಸುವುದೇ ಇಲ್ಲ. ಬೇಸಿಗೆಯಲ್ಲಿ ದೇಹಕ್ಕೆ ಬೇಕಾಗುವಂತೆ ವಾಹನಗಳ ಆರೈಕೆಗೂ ಮುಂದಾಗಬೇಕು. ಅದರಲ್ಲೂ ಬೇಸಿಗೆಯಲ್ಲಿ ವಾಹನದಿಂದ ಬರುವ ಹೊಗೆ, ಬೆಂಕಿ ಪ್ರಕರಣ, ದ್ವಿಚಕ್ರವಾಹನದ ಟೈರ್‌ಗಳು ಸ್ಪೋಟಗೊಳ್ಳುವ ವಿಚಾರದ ಕುರಿತು ಅಸಡ್ಡೆ ಬೇಡ. ಬಹುತೇಕ ಮಂದಿ ವಾಹನದ ಇಂಜಿನ್ನಿಂದ ಬೆಂಕಿ ಕಾಣಿಸಿಕೊಳ್ಳುವುದರಿಂದ ಬೆಂಕಿ ಅನಾಹುತದಂತಹ ಘಟನೆ ನಡೆಯುತ್ತದೆ ಎಂದು ಭಾವಿಸುತ್ತಾರೆ. ಆದರೆ, ತಜ್ಞರು ಹೇಳುವ ಪ್ರಕಾರ, ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಅನೇಕ ಕಾರಣಗಳಿವೆ.
ಈ ರೀತಿ ಸುರಕ್ಷತಾ ಕ್ರಮ ನಡೆಸಿ:ಕಾರ್ ಇಂಜಿನ್ನಲ್ಲಿ ಕೂಲಿಂಗ್ ವ್ಯವಸ್ಥೆ ಇರಲಿ. ರೇಡಿಯೇಟರ್ಗೆ ಹೆಚ್ಚಿನ ನೀರು ಹಾಕಬೇಡಿ. ಈ ವೇಳೆ ಕಾರಿನ ಕೂಲೆಂಟ್ (ತಂಪಾಗಿಸುವಿಕೆ) ಕಡಿಮೆ ಇದ್ದರೆ, ಅದನ್ನು ಡಿಸ್ಟಿಲ್ಟ್ ವಾಟರ್ನೊಂದಿಗೆ ಸರಿಪಡಿಸಿ. ಏನಾದರೂ ಸೋರಿಕೆ ಇದ್ದರೆ, ಅದನ್ನು ಸರಿ ಮಾಡಿ. ಇಂಜಿನ್ ಹೆಚ್ಚು ಬಿಸಿಯಾದರೆ, ಕೂಲೆಂಟ್ ಸೋರಿಕೆ ಆಗುತ್ತಿದ್ಯಾ ಎಂದು ಗಮನಿಸಿ, ಮೆಕಾನಿಕ್ ಸಂಪರ್ಕಿಸಿ.
ಕೂಲೆಂಟ್ ರೀತಿಯಲ್ಲಿ ಕಾರಿನ ಇಂಜಿನ್ ಆಯಿಲ್ಗಳನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು. ಅಲ್ಲಿ ಏನಾದರೂ ಸೋರಿಕೆ ಇದ್ದರೆ, ವಾಹನವೂ ಅಧಿಕ ಬಿಸಿಯಾಗುತ್ತದೆ. ಈ ಅಧಿಕ ಶಾಖದಿಂದಲೇ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇರುತ್ತದೆ. ಇಂಜಿನ್ ಆಯಿಲ್ ಕಡಿಮೆ ಇದ್ದರೂ ಶಾಖ ಹೆಚ್ಚುತ್ತದೆ. ನಿಲ್ಲಿಸಿದಂತೆ ನಿರಂತರವಾಗಿ ಕಾರನ್ನು ಚಲಾಯಿಸುವುದು ಕೂಡ ಇಂಜಿನ್ ಬಳಲಿಕೆಗೆ ಕಾರಣವಾಗುತ್ತದೆ.
ಕಾರುಗಳ ಟೈರ್‌ಗಳು ಸರಿಯಾದ ಪರಿಸ್ಥಿತಿಯಲ್ಲಿದೆಯಾ ಎಂಬುದನ್ನು ಕೂಡ ಗಮನಿಸಬೇಕು. ತಜ್ಞರು ಶಿಫಾರಸು ಮಾಡಿದಂತೆ ಟೈರ್‌ಗಳು ಗಾಳಿ ತುಂಬಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಕಾರಿಗೆ ಮತ್ತೆ ಪ್ರತ್ಯೇಕವಾಗಿ ಲೈಟ್, ಹಾರ್ನ್ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಅನಗತ್ಯವಾಗಿ ಅಳವಡಿಸಬೇಡಿ. ಪ್ರತ್ಯೇಕ ಲೈಟ್ಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಹೆಚ್ಚು ಬಾಳಿಕೆ ಬಾರದ ತಂತಿಗಳ ಅಳವಡಿಕೆಯು ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಮತ್ತು ಬೆಂಕಿಗೆ ಕಾರಣವಾಗಬಹುದು.
ದ್ವಿಚಕ್ರದ ಬಗ್ಗೆ ಜಾಗ್ರತೆ ಇರಲಿ:ಬೇಸಿಗೆಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಕಾರಿನಂತೆ ದ್ವಿಚಕ್ರ ವಾಹನದ ಬಗ್ಗೆ ಕೂಡ ಕಾಳಜಿ ಹೊಂದುವುದು ಅಗತ್ಯ. ದ್ವಿಚಕ್ರ ವಾಹನದಲ್ಲಿನ ಏನಾದರೂ ಸಣ್ಣ ಸೋರಿಕೆ ಕೂಡ ಬೆಂಕಿಗೆ ಕಾರಣವಾಗುತ್ತದೆ. ಯಾವುದೇ ಸಣ್ಣ ಪ್ರಮಾಣದ ರಿಪೇರಿಯನ್ನು ತಕ್ಷಣಕ್ಕೆ ಮಾಡಿಸಿ.