Hyundai Creta EV:ಪ್ರಮುಖ ಅಟೋಮೊಬೈಲ್ ಕಂಪನಿ ಹ್ಯುಂಡೈ ಮೋಟಾರ್ ಇಂಡಿಯಾ ಹೊಸ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದೆ. ಇದನ್ನು 'ಹ್ಯುಂಡೈ ಕ್ರೆಟಾ ಇವಿ' ಎಂದು ಪರಿಚಯಿಸಿದೆ. ಜನವರಿ 17ರಂದು ಭಾರತ್ ಮೊಬಿಲಿಟಿ ಎಕ್ಸ್‌ಪೋ 2025ರಲ್ಲಿ ಬಿಡುಗಡೆ ಮಾಡಲಿದೆ. ಕಾರಿನ ಲುಕ್ ಹಾಗೂ ಇತರೆ ವಿವರಗಳನ್ನು ಬಹಿರಂಗಪಡಿಸಲಾಗಿದೆ.
ಕ್ರೆಟಾ ಭಾರತದಲ್ಲಿ ಹುಂಡೈ ಮಾರಾಟ ಮಾಡುವ ಜನಪ್ರಿಯ ಕಾರುಗಳಲ್ಲಿ ಒಂದು. ಪ್ರಸ್ತುತ ಅದೇ ಹೆಸರಿನೊಂದಿಗೆ EV ಆವೃತ್ತಿಯನ್ನು ತರುತ್ತಿದೆ. ಸಾಮಾನ್ಯ ಕ್ರೆಟಾ ವಿನ್ಯಾಸದಂತೆಯೇ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಸಹ ವಿನ್ಯಾಸಗೊಳಿಸಲಾಗಿದೆ.
ಕಾರಿನ ಮುಂಭಾಗ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ. ಡಿಜಿಟಲ್ ಕೀ, ಲೆವೆಲ್-2 ಎಡಿಎಎಸ್, 360 ಡಿಗ್ರಿ ಕ್ಯಾಮೆರಾ ಮುಂತಾದ ಸೌಲಭ್ಯಗಳಿವೆ.
ರೂಪಾಂತರಗಳು:ಹ್ಯುಂಡೈ ಮೋಟಾರ್ ಈ ಎಲೆಕ್ಟ್ರಿಕ್ ಕಾರನ್ನು ಎಕ್ಸಿಕ್ಯೂಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸ್ಲೆನ್ಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ತರುತ್ತಿದೆ.
ಬ್ಯಾಟರಿ ಪ್ಯಾಕ್‌ಗಳು:ಎರಡು ರೀತಿಯ ಬ್ಯಾಟರಿ ಪ್ಯಾಕ್‌ಗಳಿವೆ. ಇದರಲ್ಲಿರುವ 42 kWh ಬ್ಯಾಟರಿಯೊಂದಿಗೆ ಕಾರು ಒಂದೇ ಚಾರ್ಜ್‌ನಲ್ಲಿ 390 ಕಿಲೋ ಮೀಟರ್ ಪ್ರಯಾಣಿಸಿದರೆ, 51.4 kWh ಬ್ಯಾಟರಿ ಪ್ಯಾಕ್ ಮೂಲಕ 473 ಕಿಲೋ ಮೀಟರ್ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.
ಡಿಸಿ ಚಾರ್ಜರ್‌ನೊಂದಿಗೆ ಕೇವಲ 58 ನಿಮಿಷಗಳಲ್ಲಿ ಶೇ 10ರಿಂದ ಶೇ 80ರವರೆಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಅದೇ 11kW AC ಹೋಮ್ ಚಾರ್ಜರ್‌ನೊಂದಿಗೆ, ಶೇ 10ರಿಂದ ಶೇ 100 ರಷ್ಟು ಚಾರ್ಜ್ ಮಾಡಲು 4 ಗಂಟೆಗಳು ಬೇಕಾಗುತ್ತದೆ.
ಬೆಲೆ: ಕಾರಿನ ಬೆಲೆಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಈ ವಿವರಗಳನ್ನು ಎಕ್ಸ್‌ಪೋ ಸ್ಥಳದಲ್ಲಿ ಬಹಿರಂಗಪಡಿಸಿದೆ.
ಮಾರುಕಟ್ಟೆಯಲ್ಲಿ ಸ್ಪರ್ಧೆ: ಕ್ರೆಟಾ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಕರ್ವ್, ಮಹೀಂದ್ರ ಬಿಇ 6 ಮತ್ತು ಎಂಜಿ ಝಡ್ಎಸ್ ಇವಿಯಂತಹ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ಇದನ್ನೂ ಓದಿ:ಲೋ ಕಾಸ್ಟ್, ಹೈ ಪರ್ಫಾರ್ಮೆನ್ಸ್: ಯುವಕರಲ್ಲಿ ಹೆಚ್ಚುತ್ತಿದೆ 400ಸಿಸಿ ಬೈಕ್ ಕ್ರೇಜ್