HarmonyOS Next:ಗೂಗಲ್ ಆಂಡ್ರಾಯ್ಡ್ನಿಂದ ನಾವು ಅಧಿಕಾರ ರೂಪದಿಂದ ದೂರ ಹೋಗುತ್ತಿದ್ದೇವೆ ಎಂದು Huaweiಅಧಿಕೃತವಾಗಿ ಹೇಳಿದೆ. ಏಕೆಂದರೆ ಕಂಪನಿ ತನ್ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ HarmonyOS Next ಅನ್ನು ಚೀನಾದಲ್ಲಿ ಘೋಷಿಸಿದೆ. ಕಂಪನಿ ಈ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರೊಜೆಕ್ಟ್ನಿಂದ (AOSP) ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಕರ್ನಲ್ ಮತ್ತು ಸಿಸ್ಟಮ್ ಆರ್ಕಿಟೆಕ್ಚರ್ನಲ್ಲಿ ನಿರ್ಮಿಸಲಾಗಿದ್ದು, ಹೊಸ HarmonyOS Next ಆಪರೇಟಿಂಗ್ ಸಿಸ್ಟಮ್ Huaweiನ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ವಾಚ್ಗಳಿಗೆ ಶಕ್ತಿ ನೀಡುವುದು.
HarmonyOS Next ಆಪರೇಟಿಂಗ್ ಸಿಸ್ಟಮ್ನ ಬೀಟಾ ಪರೀಕ್ಷೆಯನ್ನು Huawei ಕಂಪನಿ ಚೀನಾದಲ್ಲಿ ಕಿರಿನ್ ಮತ್ತು ಕುನ್ಪೆಂಗ್ ಚಿಪ್ಗಳಿಂದ ನಡೆಸಲ್ಪಡುವ ಸಾಧನಗಳಿಗೆ ಪ್ರಾರಂಭಿಸಿದೆ. ಹೋಮ್ ಮತ್ತು ಲಾಕ್ ಸ್ಕ್ರೀನ್ ಕಸ್ಟಮೈಸೇಶನ್ ಆಪ್ಷನ್ಗಳು, ವೇಗವಾದ ಅನಿಮೇಷನ್ಗಳು, ಆ್ಯಪ್ ಲಾಂಚ್ ಸ್ಪೀಡ್, ಎಐ ವೈಶಿಷ್ಟ್ಯಗಳು ಸೇರಿದಂತೆ ಇನ್ನಿತರ ಫೀಚರ್ಗಳ ಜೊತೆ ಬರಲಿದೆ.
ಪ್ರಮುಖ ಚೀನಿ ಶಾಪಿಂಗ್, ಪೇಮೆಂಟ್ ಮತ್ತು ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಸೇವೆಗಳನ್ನು ಬಳಸಲು HarmonyOS Nextನಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೊಸ ಆಪರೇಟಿಂಗ್ ಸಿಸ್ಟಮ್ಗಾಗಿ ಸ್ಥಳೀಯ ಆ್ಯಪ್ಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು Huawei ಕಂಪನಿ AliPay, JD.com, Taobao, Douyin ಮತ್ತು Xiaohongshuಗೆ ಮಾಹಿತಿ ಹಂಚಿಕೊಂಡಿದೆ. HarmonyOS Next ಸುಮಾರು 15 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ಹೊಂದಿದೆ. ಹೆಚ್ಚಿನವು ಆದಷ್ಟು ಬೇಗ ಬರಲಿವೆ ಎಂದು ಕಂಪನಿ ಹೇಳಿದೆ.
HarmonyOS Next ಅನ್ನು ಸಪೋರ್ಟ್ ಮಾಡುವ ಸಾಧನಗಳು:
ಸ್ಮಾರ್ಟ್ಫೋನ್ಗಳು :Huawei Mate 60, Huawei Mate 60 Pro, Huawei Mate 60 Pro+, Huawei Mate 60 RS ಅಲ್ಟಿಮೇಟ್ ಡಿಸೈನ್, Huawei Mate X5, Huawei Mate X5 Tibet version, Huawei Pura 70, Huawei Pura 70 Pro, Huawei Pura 70 Pro+, Huawei Pura 70 Ultra, Huawei Pocket 2, Huawei Pocket 2 ಆರ್ಟ್ ಕಸ್ಟಮೈಸ್ ವರ್ಸನ್.