How To Reduce Electricity Bill:ಇಂದಿನ ದಿನಮಾನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಒಂದು ಸಮಸ್ಯೆಯೇ ಅಧಿಕ ವಿದ್ಯುತ್ ಬಿಲ್. ಪ್ರತಿ ತಿಂಗಳು ವಿದ್ಯುತ್ ಬಿಲ್ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದ ಜನಸಾಮಾನ್ಯರಂತೂ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕೆಲವು ಮುಂಜಾಗ್ರತಾ ಕ್ರಮಗಳು ಹೀಗಿವೆ.
ಎಲ್ಇಡಿ ಬಲ್ಬ್ಗಳ ಬಳಕೆ:ಸಾಮಾನ್ಯ ಬಲ್ಬ್ಗಳಿಂದ ನಾವು ಹೆಚ್ಚು ವಿದ್ಯುತ್ ಬಳಸುತ್ತೇವೆ. ಇದರಿಂದ ವಿದ್ಯುತ್ ಬಿಲ್ ಕೂಡ ಅಧಿಕ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ಎಲ್ಇಡಿ ಬಲ್ಬ್ಗಳನ್ನು ಬಳಸುವುದು ಉತ್ತಮ. ಅವುಗಳಿಂದ ಕಡಿಮೆ ವಿದ್ಯುತ್ ಬಳಕೆ ಸಾಧ್ಯವಿದೆ. ಇವುಗಳನ್ನು ಬಳಸಿದರೆ ಬಿಲ್ ಕೂಡ ತಗ್ಗುತ್ತದೆ. ಇದಲ್ಲದೆ, ಅವು ದೀರ್ಘಕಾಲದವರೆಗೂ ಬಾಳಿಕೆ ಬರುತ್ತವೆ.
ಅನ್‌ಪ್ಲಗ್ ಮಾಡುವುದು ಉತ್ತಮ: ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದ ನಂತರ ಅನೇಕರು ಅನ್‌ಪ್ಲಗ್ ಮಾಡದೆ ಬಿಡುತ್ತಾರೆ. ಸ್ವಿಚ್ ಆಫ್ ಮಾಡಿದ್ರೂ ಸಹ ನಾವು ಅನ್‌ಪ್ಲಗ್ ಮಾಡದೇ ಇದ್ದರೆ ವಿದ್ಯುತ್ ಪ್ರವಾಹ ಅದರೊಳಗೆ ಹರಿಯುತ್ತಿರುತ್ತದೆ. ಅದಕ್ಕಾಗಿಯೇ ಸೆಲ್ ಫೋನ್ ಚಾರ್ಜರ್‌ಗಳು, ಟಿವಿಗಳು, ಕಂಪ್ಯೂಟರ್‌ಗಳು, ವೈ-ಫೈ ರೂಟರ್‌ಗಳು, ಐರನ್ ಬಾಕ್ಸ್‌ಗಳು, ವಾಷಿಂಗ್ ಮಷಿನ್‌ಗಳು ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿದ ತಕ್ಷಣ ಅನ್‌ಪ್ಲಗ್ ಮಾಡುವುದು ಒಳಿತು. ಇದರಿಂದ ಕರೆಂಟ್ ಬಿಲ್ ಕಡಿಮೆ ಬರುವ ಸಾಧ್ಯತೆ ಹೆಚ್ಚು.
ಎಸಿ ನಿರ್ವಹಣೆ:ಹೀಟಿಂಗ್, ವೆಂಟಿಲೇಷನ್, ಏರ್ ಕಂಡಿಷನ್ ನಿರ್ವಹಣೆಯಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು. ಏರ್ ಫಿಲ್ಟರ್ ಅನ್ನು ನಿಯಮಿತವಾಗಿ ಬದಲಾಯಿಸಬೇಕು. ವರ್ಷಕ್ಕೊಮ್ಮೆಯಾದರೂ ಇವುಗಳನ್ನು ಮೆಕ್ಯಾನಿಕ್ನಿಂದ ಸರ್ವಿಸ್ ಮಾಡಿಸಬೇಕು. ಎಸಿಯನ್ನು ಸರಿಯಾಗಿ ನಿರ್ವಹಿಸಿದರೆ, ಅದು ಕಡಿಮೆ ವಿದ್ಯುತ್ ಬಳಸುತ್ತದೆ. ಇದು ದೀರ್ಘ ಬಾಳಿಕೆಯನ್ನೂ ನೀಡುತ್ತದೆ. ಅಲ್ಲದೆ, ತೀರಾ ಅಗತ್ಯ ಇರುವ ಸಂದರ್ಭಗಳಲ್ಲಿ ಮಾತ್ರ ಎಸಿ ಬಳಸುವುದು ಉತ್ತಮ.
ಪವರ್ ಸ್ಟ್ರಿಪ್‌ಗಳ ಬಳಕೆ:ಟಿವಿ, ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಪವರ್ ಸ್ಟ್ರಿಪ್‌ಗಳಿಗೆ ಪ್ಲಗ್ ಮಾಡಬೇಕು. ಅಲ್ಲದೆ ಅಂತಹ ವಸ್ತುಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇಡಬಾರದು. ಕಂಪ್ಯೂಟರ್ ಬಳಸಿದ ತಕ್ಷಣ ಅದನ್ನು ಆಫ್ ಮಾಡಿ. ಇಲ್ಲದಿದ್ದರೆ ಅವುಗಳು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿದ್ದರೆ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಇದರಿಂದ ಬಿಲ್ ಕೂಡ ಹೆಚ್ಚಾಗುತ್ತದೆ.