ಕರ್ನಾಟಕ

karnataka

ETV Bharat / technology

ಅತಿಯಾದ ಮೊಬೈಲ್​ ಸ್ಕ್ರೀನ್​ ವೀಕ್ಷಣೆಯಿಂದ ಮೆದುಳಿಗೆ ಹಾನಿ: ಈ 4 ಟಿಪ್ಸ್‌ ಇದಕ್ಕೆ ಪರಿಹಾರ - Mobile Screen Time Affects Brain - MOBILE SCREEN TIME AFFECTS BRAIN

Mobile Screen Time Affects Your Brain: ಮೊಬೈಲ್ ವಿಕಿರಣ ಆರೋಗ್ಯಕ್ಕೆ ಹಾನಿಕಾರಕ. ಆದರೂ ಫೋನ್‌ಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತೇವೆ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿ ಉಪಾಯಗಳಿವೆ.

HEALTHY MOBILE SCREEN USE  SCREEN TIME AFFECTS YOUR BRAIN  MOBILE SCREEN AFFECTS YOUR BRAIN
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 20, 2024, 10:35 AM IST

Mobile Screen Time Affects Your Brain: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌ಗಳಂತಹ ಸಾಧನಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಗಂಟೆಗಳಷ್ಟು ಕಾಲ ಮೊಬೈಲ್​ನಲ್ಲಿಯೇ ಕಳೆಯುತ್ತೇವೆ. ಇಮೇಲ್, ಸ್ನೇಹಿತರು ಮತ್ತು ಕುಟುಂಬಕ್ಕೆ ಸಂದೇಶ ಕಳುಹಿಸುವುದು ಹೀಗೆ ಫೋನ್​ ಅವಶ್ಯಕವಾಗಿದೆ. ಆದರೆ ಇದೇ ಮೊಬೈಲ್‌ ನಮ್ಮ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ.

ಕೆಲವು ಸಂಶೋಧನಾ ಅಧ್ಯಯನಗಳ ಪ್ರಕಾರ, ಮೊಬೈಲ್ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇಂದು ಮಾನಸಿಕ ಆರೋಗ್ಯದಿಂದ ಹಿಡಿದು ಅರಿವಿನ ಸಾಮರ್ಥ್ಯದವರೆಗೂ ಎಲ್ಲವೂ ಮೊಬೈಲ್‌ನಿಂದ ಪ್ರಭಾವಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

  1. ಮೊಬೈಲ್‌ಗೆ​ ಹೆಚ್ಚು ಒಡ್ಡಿಕೊಳ್ಳುವುದೇಕೆ?: ಮೊಬೈಲ್​ ಸ್ಕ್ರೀನ್​ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮೆದುಳಿನ ರಚನೆ ಮತ್ತು ಕಾರ್ಯವನ್ನು ಬದಲಾಯಿಸಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ನಿರ್ದಿಷ್ಟವಾಗಿ ಗಮನ, ಭಾವನೆ, ನಿಯಂತ್ರಣ ಸೇರಿದಂತೆ ಇನ್ನಿತರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಮುಖ ಅಂಶ ಡೋಪಮೈನ್. ಇದು ನಿಮ್ಮನ್ನು ಪ್ರತಿ ಲೈಕ್, ಕಾಮೆಂಟ್, ನೋಟಿಫಿಕೇಶನ್ ಮೂಲಕ ಸೆಳೆಯುತ್ತದೆ. ಏಕೆಂದರೆ ಡೋಪಮೈನ್ ಹಾಗೆ ಮಾಡಲು ಪ್ರೋತ್ಸಾಹಿಸುತ್ತದೆ.
  2. ಮಾನಸಿಕ ಆರೋಗ್ಯ:ಅತಿಯಾಗಿ ಮೊಬೈಲ್​ನಲ್ಲಿ ಸಮಯ ಕಳೆಯುವುದು ಆತಂಕ ಮತ್ತು ಖಿನ್ನತೆಯ ಹೆಚ್ಚಿದ ರೋಗಲಕ್ಷಣಗಳಿಗೆ ಸಂಬಂಧಿಸಿದೆ. ಇದು ಮಕ್ಕಳು ಮತ್ತು ಯುವ ವಯಸ್ಕರಲ್ಲಿ ವಿಶೇಷವಾಗಿ ಪ್ರಚಲಿತವಾಗಿದೆ.
  3. ನಿದ್ರಾಹೀನತೆ:ಮಲಗುವ ಮುನ್ನ ಮೊಬೈಲ್‌ಗೆ ಒಡ್ಡಿಕೊಳ್ಳುವುದರಿಂದ ನಿದ್ರೆಗೆ ಅಡ್ಡಿಯಾಗಬಹುದು. ಇದು ನಿದ್ರಾಹೀನತೆ, ಹಗಲಿನ ಆಯಾಸ ಮತ್ತು ಇತರ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
  4. ಗಮನದ ಕೊರತೆ: ದೀರ್ಘಾವಧಿಯವರೆಗೆ ಮೊಬೈಲ್ ಸ್ಕ್ರೀನ್​ ನೋಡುವುದು ಅಥವಾ ಬಳಸುವುದು ಗಮನದ ಕೊರತೆಗೆ ಕಾರಣವಾಗಬಹುದು. ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಅಲ್ಲದೆ, ನಾವು ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ.
  5. ಮೆಮೊರಿ ಮತ್ತು ಲರ್ನಿಂಗ್​:ಹೆಚ್ಚು ಹೆಚ್ಚು ಸ್ಕ್ರೀನ್​ ಬಳಸುವುದರಿಂದ ಆಲೋಚನೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಮಕ್ಕಳ ಕಲಿಕೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
  6. ನ್ಯೂರೋಪ್ಲ್ಯಾಸ್ಟಿಸಿಟಿ ಮತ್ತು ಮಿದುಳಿನ ಅಭಿವೃದ್ಧಿ:ಅತಿಯಾಗಿ ಮೊಬೈಲ್​ ಸ್ಕ್ರೀನ್ ಬಳಸುವುದರಿಂದ ಭಾವನಾತ್ಮಕ ನಿಯಂತ್ರಣ ಮತ್ತು ಉದ್ವೇಗ ನಿಯಂತ್ರಣಕ್ಕೆ ಜವಾಬ್ದಾರರಾಗಿರುವ ಪ್ರಕ್ರಿಯೆಗಳಲ್ಲಿ ಗ್ರೇ ಮ್ಯಾಟರ್​ ಕಡಿಮೆ ಮಾಡುತ್ತದೆ.
  7. ವೈಟ್ ಮ್ಯಾಟರ್ ಬದಲಾವಣೆ: ದೀರ್ಘಾವಧಿಯ ಮೊಬೈಲ್​ ಬಳಕೆಯಿಂದ ವೈಟ್ ಮ್ಯಾಟರ್ ಟ್ರ್ಯಾಕ್‌ಗಳಲ್ಲಿನ ಬದಲಾವಣೆಗಳು ಕಂಡುಬರುತ್ತವೆ. ಇದು ಮೆದುಳಿನ ಪ್ರದೇಶಗಳ ನಡುವಿನ ಸಂವಹನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
  8. ಮಕ್ಕಳ ಮಿದುಳಿನ ಮೇಲೆ ಪರಿಣಾಮ:ಮಕ್ಕಳ ಮಿದುಳುಗಳು ಅತಿಯಾದ ಮೊಬೈಲ್​ ಸ್ಕ್ರೀನ್​ ವೀಕ್ಷಿಸುವುದರಿಂದ ದುರ್ಬಲವಾಗುತ್ತದೆ ಎಂದು ಸಂಶೋಧನೆ ಸೂಚಿಸುತ್ತವೆ.
  9. ಅರಿವಿನ ಬೆಳವಣಿಗೆ: ಮಿತಿಮೀರಿ ಸ್ಕ್ರೀನ್ ಬಳಕೆಯಿಂದ ಮಕ್ಕಳ ಅರಿವಿನ ಬೆಳವಣಿಗೆಗೆ ಅಡ್ಡಿಯಾಗಬಹುದು. ವಿಶೇಷವಾಗಿ, ಭಾಷೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲಗಳಿಗೆ ಇದು ಹೆಚ್ಚು ಅಡ್ಡಿಯಾಗುವ ಸಾಧ್ಯತೆಯಿದೆ.
  10. ವ್ಯಸನದ ಅಪಾಯ:ಮಕ್ಕಳ ಮೆದುಳುಗಳು ಡೋಪಮೈನ್​ನ (10) ಪ್ರಯೋಜನಕಾರಿ ಪರಿಣಾಮಗಳಿಗೆ ಹೆಚ್ಚು ಒಳಗಾಗುವುದರಿಂದ ಮೊಬೈಲ್​ ಸ್ಕ್ರೀನ್​ಗಳಿಗೆ ಆರಂಭಿಕ ಒಡ್ಡುವಿಕೆಯು ನಂತರದ ಜೀವನದಲ್ಲಿ ವ್ಯಸನದ ಅಪಾಯ ಹೆಚ್ಚಿಸಬಹುದು.

ಪರಿಹಾರವೇನು?:ಮೆದುಳಿನ ಮೇಲೆ ಮೊಬೈಲ್ ಸ್ಕ್ರೀನ್​ ಪರಿಣಾಮಗಳು ಆತಂಕಕಾರಿ. ಆದರೆ ಈ ಸಮಸ್ಯೆಗಳನ್ನು ಪರಿಹರಿಸಲು ನೀವು ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಬೇಕು.

1. ಮೊಬೈಲ್​ ಬಳಕೆ ಕಟ್ರೋಲ್​:ನೀವು ಮತ್ತು ನಿಮ್ಮ ಕುಟುಂಬಕ್ಕೆ ದೈನಂದಿನ ಮೊಬೈಲ್ ಬಳಕೆಯ ಮಿತಿಗಳನ್ನು ಹೊಂದಿಸಿಕೊಳ್ಳಬೇಕು.

2. ಮೈಂಡ್‌ಫುಲ್ ಸ್ಕ್ರೀನ್ ಬಳಕೆಗೆ ಒತ್ತು: ನಿಮ್ಮ ಸ್ಕ್ರೀನ್​ ಬಳಕೆಯ ಸಮಯದ ಬಗ್ಗೆ ತಿಳಿದಿರಲಿ. ಕ್ರೀಡೆ ಮತ್ತು ಇತರ ಉತ್ತೇಜಕ ಚಟುವಟಿಕೆಗಳಿಗೆ ಆದ್ಯತೆ ನೀಡಿ.

3. ನಿಯಮಿತ ವ್ಯಾಯಾಮ:ನಿಯಮಿತ ವ್ಯಾಯಾಮವು ಮೊಬೈಲ್​ ಬಳಕೆ ಸಮಯದ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ನಿದ್ರೆಗೆ ಆದ್ಯತೆ ನೀಡಿ:ಆರೋಗ್ಯಕರ ನಿದ್ರೆಯ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಮೊಬೈಲ್​-ಮುಕ್ತ ಸಮಯದ ದಿನಚರಿ ರಚಿಸಿ.

ಮೊಬೈಲ್ ಪರದೆಯ ಸಮಯಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ನೀವು ಗುರುತಿಸಬೇಕಾಗಿದೆ. ನಮ್ಮ ಮೆದುಳಿನ ಮೇಲೆ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಆರೋಗ್ಯಕರ ಪರದೆಯ ಬಳಕೆಯ ತಂತ್ರಗಳನ್ನು ಕಾರ್ಯಗತಗೊಳಿಸುವುದು ಪ್ರಮುಖವಾಗಿದೆ.

ಇದನ್ನೂ ಓದಿ:ವಿಮಾನಕ್ಕೆ ಇಂಧನವಾಗಿ ಪೆಟ್ರೋಲ್, ಡೀಸೆಲ್ ಬಳಸಲ್ಲ: ಏಕೆ ಗೊತ್ತೇ? - Aviation Turbine Fuel

ABOUT THE AUTHOR

...view details