ಕರ್ನಾಟಕ

karnataka

By ETV Bharat Tech Team

Published : 5 hours ago

ETV Bharat / technology

ಚಳಿಗಾಲದ ಮಂಜಿನ ಸವಾಲುಗಳನ್ನು ಹೇಗೆ ಎದುರಿಸುತ್ತದೆ ವಾಯುಯಾನ ಉದ್ಯಮ? - Aviation Industry Winter Challenges

Winter Challenges For Aviation Industry: ಮಳೆಗಾಲ ಮುಗೀತಾ ಬರ್ತಿದೆ. ಮುಂದೆ ಚಳಿಗಾಲ ಆಗಮಿಸುತ್ತದೆ. ಈ ವೇಳೆ ಎಲ್ಲೆಡೆ ದಟ್ಟ ಮಂಜು ಆವರಿಸುವುದು ಸಾಮಾನ್ಯ. ವಿಮಾನದಲ್ಲಿ ಪ್ರಯಾಣಕ್ಕೂ ಮಂಜಿನಿಂದ ಸಮಸ್ಯೆಗಳಿವೆ. ಆದರೆ ಸುಧಾರಿತ ತಂತ್ರಜ್ಞಾನದಿಂದಾಗಿ ವಿಮಾನ ಹಾರಾಟ ಸುಲಭವಾಗಿದೆ. ಮಂಜು ಕವಿದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ಯಾವ ರೀತಿಯ ತಂತ್ರಜ್ಞಾನಗಳನ್ನು ಬಳಸುತ್ತವೆ ಎಂಬುದರ ಕುರಿತು ವಾಯುಯಾನ ಅಧಿಕಾರಿಯೊಬ್ಬರು 'ಈಟಿವಿ ಭಾರತ್‌'ಗೆ ಮಾಹಿತಿ ನೀಡಿದ್ದಾರೆ.

AIR TRAVEL CHALLENGES  AVIATION  FLYING IN FOG  AVIATION INDUSTRY
ವಿಮಾನ ನಿಲ್ದಾಣವೊಂದರದಲ್ಲಿ ಮಂಜು ಆವರಿಸಿರುವುದು (ANI)

Winter Challenges For Aviation Industry:ಇನ್ನೇನು ಚಳಿಗಾಲ ಸಮೀಪಿಸುತ್ತಿದೆ. ಆಗಾಗ್ಗೆ ದಟ್ಟ ಮಂಜು ಕವಿದಿರುತ್ತದೆ. ಇಂಥ ಸಂದರ್ಭದಲ್ಲಿ ರಸ್ತೆ ಪ್ರಯಾಣಕ್ಕೂ ಅನೇಕ ಬಾರಿ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ, ಆಗಸದಲ್ಲಿ ಪ್ರಯಾಣ ಎಷ್ಟು ಕಷ್ಟಕರವಾಗಿರಬಹುದು?. ಹೌದು, ಇದು ವಿಮಾನ ಪ್ರಯಾಣಕ್ಕೂ ಪ್ರಮುಖ ಅಡಚಣೆ.

ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ವಿಮಾನ ನಿಲ್ದಾಣಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ. ಏಕೆಂದರೆ ದಟ್ಟ ಮಂಜು ಆವರಿಸಿ ಸೀಮಿತ ಗೋಚರತೆಯ ಕಾರಣದಿಂದಾಗಿ ಲ್ಯಾಂಡಿಂಗ್​ ಮತ್ತು ಟೇಕಾಫ್​ ಸೇರಿದಂತೆ ಇನ್ನಿತರ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ, ಇದಕ್ಕೆ ಯಾವ ತಂತ್ರಜ್ಞಾನ ಬಳಸಲಾಗುತ್ತದೆ ಎಂಬುದನ್ನು ವಾಯುಯಾನ ತಜ್ಞರಾದ ಸುಭಾಷ್ ಗೋಯಲ್ ವಿವರಿಸಿದ್ದಾರೆ.

ಮಂಜು, ಮಾಲಿನ್ಯ ಅಥವಾ ಬಿರುಗಾಳಿ ಮಳೆಯಿಂದಾಗಿ ಗೋಚರತೆ ತೀರಾ ಕಡಿಮೆಯಾಗುತ್ತದೆ. ಇದಕ್ಕಾಗಿ ಹೆಚ್ಚಿನ ಭಾರತೀಯ ವಿಮಾನ ನಿಲ್ದಾಣಗಳು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅನ್ನು ಬಳಸುತ್ತವೆ. ಇದಕ್ಕಾಗಿ ನಾವು ಮೊದಲು ವರ್ಗ II ILS ಅನ್ನು ಹೊಂದಿದ್ದೇವೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ವರ್ಗ IIIB ILS ಹೊಂದಿದೆ. ಇದು ವಿಶ್ವದ ಅತ್ಯಾಧುನಿಕ ಲ್ಯಾಂಡಿಂಗ್ ವ್ಯವಸ್ಥೆಗಳಲ್ಲಿ ಒಂದು. ವಿಮಾನಗಳು ಕಂಪ್ಯೂಟರ್ ನಿಯಂತ್ರಣದಲ್ಲಿದ್ದರೂ ಪೈಲಟ್​ಗಳ ಪಾತ್ರವೇ ಮಹತ್ವದ್ದಾಗಿರುತ್ತದೆ. ಹೀಗಾಗಿ, ಅಡೆತಡೆಗಳನ್ನು ಎದುರಿಸಲು ವಿಮಾನಯಾನ ಸಂಸ್ಥೆಗಳು ಸಿದ್ಧವಾಗಿವೆ.

ಇನ್ನು ಹೆಚ್ಚುವರಿ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುತ್ತವೆ. ಪ್ರತಿ 15 ನಿಮಿಷಗಳಿಗೊಮ್ಮೆ ಪ್ರಕಟಣೆಗಳನ್ನು ಮಾಡಲಾಗುತ್ತದೆ. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸಂಪರ್ಕ ಸಂಖ್ಯೆಯನ್ನು ಹೊಂದಿರುತ್ತವೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಗೆ(AI) ಧನ್ಯವಾದಗಳು. ಸ್ವಯಂಚಾಲಿತ ಪ್ರಕಟಣೆಗಳು ಯಾವುದೇ ವಿಳಂಬದ ಬಗ್ಗೆ ಪ್ರಯಾಣಿಕರಿಗೆ ತಿಳಿಸುತ್ತವೆ. ಪ್ರಯಾಣಿಕರು ನಿರ್ಗಮಿಸುವ ಮೂರು ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಲು ಸಲಹೆ ನೀಡಲಾಗುತ್ತದೆ.

ಅಂತಾರಾಷ್ಟ್ರೀಯ ವಾಯುಯಾನ ನಿಯಮಗಳ ಪ್ರಕಾರ, ದಟ್ಟವಾದ ಮಂಜು ವಿಮಾನ ಕಾರ್ಯಾಚರಣೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದಲ್ಲಿನ ಪ್ರಗತಿಗಳು ಈ ಅಡಚಣೆಗಳನ್ನು ನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಸುಧಾರಿಸಿವೆ. ಕೆಲವು ವಾರಗಳ ಹಿಂದೆ ವರ್ಗ II ILS ಅನುಷ್ಠಾನಕ್ಕೆ ಮೊದಲು ಮಂಜಿನಿಂದಾಗಿ ಅನೇಕ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.

ಈಗ ನಿಖರವಾದ ಹವಾಮಾನ ಮುನ್ಸೂಚನೆಯೊಂದಿಗೆ ವಾಯುಸಂಚಾರ ನಿಯಂತ್ರಣವು ಮಂಜುಗೆ ಸಂಬಂಧಿಸಿದ ಸಂಭಾವ್ಯ ಸಮಸ್ಯೆಗಳನ್ನು ನಿರೀಕ್ಷಿಸಬಹುದು. ವಿಮಾನ ವೇಳಾಪಟ್ಟಿಯಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಬಹುದು. ವಿಮಾನ ಪ್ರಯಾಣವು ಚಾಲನೆಗಿಂತ ಸಂಖ್ಯಾಶಾಸ್ತ್ರೀಯವಾಗಿ ಸುರಕ್ಷಿತವಾಗಿದೆ. ವಿಶೇಷವಾಗಿ ಮಂಜಿನ ಪರಿಸ್ಥಿತಿಗಳಲ್ಲಿ ವಿಮಾನಗಳು ಸ್ವಯಂಚಾಲಿತವಾಗಿ ಘರ್ಷಣೆಯನ್ನು ತಡೆಯುವ ವ್ಯವಸ್ಥೆಯನ್ನು ಹೊಂದಿರುವುದರಿಂದ ಪ್ರಯಾಣಿಕರು ಭಯಪಡುವ ಅವಶ್ಯಕತೆಯಿಲ್ಲ ಎಂದು ಸುಭಾಷ್ ಗೋಯಲ್ ಹೇಳಿದರು.

ಇದನ್ನೂ ಓದಿ:ಸುನೀತಾ ವಿಲಿಯಮ್ಸ್​ ಕರೆತರಲು ಬಾಹ್ಯಾಕಾಶ ನಿಲ್ದಾಣದತ್ತ ಪಯಣ ಬೆಳೆಸಿದ ನಾಸಾ-ಸ್ಪೇಸ್ ಎಕ್ಸ್ ನೌಕೆ - NASA SpaceX Mission

ABOUT THE AUTHOR

...view details