ಕರ್ನಾಟಕ

karnataka

ETV Bharat / technology

ಉಗ್ರರಿಂದ ತಂತ್ರಜ್ಞಾನದ ದುರುಪಯೋಗ; ಮುಂಬೈ ದಾಳಿಯಿಂದ ಟೆಸ್ಲಾ ಟ್ರಕ್​ ಸ್ಫೋಟದವರೆಗಿನ ಸಾಕ್ಷ್ಯಗಳಿವು - TECHNOLOGY MISUSED BY TERRORISTS

Technology Misused By Terrorists: ಅಮೆರಿಕದಲ್ಲಿ ಟೆಸ್ಲಾ ಕಂಪನಿಯ ಸೈಬರ್​ಟ್ರಕ್​ ಸ್ಫೋಟ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಈ ಸ್ಫೋಟಕ್ಕೆ​ ಉಗ್ರರು ತಂತ್ರಜ್ಞಾನವನ್ನು ಬಳಸಿದ್ದರು. ಉಗ್ರರು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡ ಕುರಿತ ಮಾಹಿತಿ ಇಲ್ಲಿದೆ..

TECHNOLOGY MISUSED  ARTIFICIAL INTELLIGENCE CHATBOT  BOMB MAKING FROM YOU TUBE  DRONES
ಭಯತ್ಪಾದಕರು (IANS)

By ETV Bharat Tech Team

Published : Jan 13, 2025, 12:05 PM IST

Technology Misused By Terrorists : ಇತ್ತೀಚೆಗೆ ಸಂಭವಿಸಿದ ಟೆಸ್ಲಾ ಕಂಪನಿಯ ಸೈಬರ್​ಟ್ರಕ್​ ಸ್ಫೋಟ ಅಮೆರಿಕವನ್ನೇ ಬೆಚ್ಚಿ ಬೀಳಿಸಿತ್ತು. ಲಾಸ್ ವೇಗಾಸ್‌ನ ಟ್ರಂಪ್ ಇಂಟರ್​ನ್ಯಾಷನಲ್ ಹೋಟೆಲ್‌ನ ಹೊರಗೆ ಈ ಸ್ಫೋಟ ಸಂಭವಿಸಿತ್ತು. ಆದ್ರೆ ಈ ಬ್ಲಾಸ್ಟ್​ ಹಿಂದೆ ಚಾಟ್​ಬಾಟ್​ ಚಾಟ್​ಜಿಪಿಟಿಯ ತಂತ್ರಜ್ಞಾನವನ್ನು ಬಳಸಲಾಗಿತ್ತು. ಭಯೋತ್ಪಾದಕರು ಮತ್ತು ಉಗ್ರಗಾಮಿಗಳು ದಾಳಿಗಳನ್ನು ನಡೆಸಲು ಸುಧಾರಿತ ತಂತ್ರಜ್ಞಾನಗಳನ್ನು ದುರುಪಯೋಗಪಡಿಸಿಕೊಂಡು ಅನೇಕ ಕೃತ್ಯಗಳನ್ನು ನಡೆಸುತ್ತಿದ್ದಾರೆ.

ಮುಂಬೈ ಅಟ್ಯಾಕ್ ​:2008ರ ಮುಂಬೈ ದಾಳಿ ಇಡೀ ರಾಷ್ಟ್ರವಷ್ಟೇ ಅಲ್ಲದೆ ವಿಶ್ವವೇ ಬೆಚ್ಚಿಬಿದ್ದಿತ್ತು. ಈ ದಾಳಿಯಲ್ಲಿ ಪೊಲೀಸರು ಮತ್ತು ನಾಗರೀಕರು ಸೇರಿ ಸುಮಾರು 175 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಮಾರಕ ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಭಯೋತ್ಪಾದಕರು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ಸ್ ಮತ್ತು ಸ್ಯಾಟಲೈಟ್​ ಫೋನ್‌ಗಳಂತಹ ತಂತ್ರಜ್ಞಾನಗಳನ್ನು ಬಳಸಿದ್ದರು.

ಭಯೋತ್ಪಾದಕರು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ಸ್ ಹ್ಯಾಂಡ್‌ಸೆಟ್ ಸಹಾಯದಿಂದ ಅರೇಬಿಯನ್ ಸಮುದ್ರದಾದ್ಯಂತ ಪಾಕಿಸ್ತಾನದ ಕರಾಚಿಯಿಂದ ಮುಂಬೈಗೆ ನ್ಯಾವಿಗೇಟ್​ ಮಾಡಿದ್ದರು. ಉಗ್ರರು ಸಮುದ್ರ ಮಾರ್ಗವಾಗಿ ಸಾಗುತ್ತಿರುವಾಗ ತಮ್ಮ ಸಹಚರರೊಂದಿಗೆ ಸ್ಯಾಟಲೈಟ್​ ಫೋನ್ ಬಳಸಿ ಸಂಪರ್ಕ ಸಾಧಿಸಿದ್ದರು. ಅವರು ತಮ್ಮ ಟಾರ್ಗೆಟ್​ ಯಾವುದು ಅನ್ನೋದನ್ನು ಅರಿತುಕೊಂಡಿದ್ದರು. ತಮ್ಮ ಗುರಿ ತಲುಪಲು ಉಗ್ರರು ಗೂಗಲ್ ಅರ್ಥ್‌ನಿಂದ ಸ್ಯಾಟಲೈಟ್​ ಫೋಟೋಗಳನ್ನು ಡೌನ್​ಲೋಡ್​ ಮಾಡಿಕೊಂಡಿದ್ದರು. ಈ ಮೂಲಕ ಅವರು ಸುಲಭವಾಗಿ ತಮ್ಮ ಟಾರ್ಗೆಟ್ ಪ್ರದೇಶವನ್ನು ತಲುಪಲು ಅನುಕೂಲವಾಗಿತ್ತು.

ಎರಡು ಐಷಾರಾಮಿ ಹೋಟೆಲ್‌ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಮೂರು ದಿನಗಳ ಕಾಲ ದಾಳಿ ನಡೆದಿತ್ತು. ಈ ದಾಳಿಯ ಉದ್ದಕ್ಕೂ ಇಂಟರ್ನೆಟ್ ಫೋನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನ ನಿರ್ವಾಹಕರು ತಮ್ಮ ದಾಳಿಕೋರರೊಂದಿಗೆ ಕಮ್ಯುನಿಕೇಟ್​ ಮಾಡುತ್ತಲೇ ಇದ್ದರು. ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಉಗ್ರಗಾಮಿ ಗುಂಪು ಲಷ್ಕರ್-ಎ-ತೈಬಾ ದಾಳಿಗಳನ್ನು ನಿರ್ದೇಶಿಸಲು ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (VoIP) ಫೋನ್ ಸೇವೆಯನ್ನು ಬಳಸುತ್ತಿತ್ತು ಎಂಬುದು ತನಿಖೆ ಮೂಲಕ ತಿಳಿದುಬಂದಿತ್ತು.

ಸಾಮಾಜಿಕ ಜಾಲತಾಣ​ ವೀಕ್ಷಿಸಿ ಬಾಂಬ್ ತಯಾರಿಕೆ :ಕೆಲ ಸಾಮಾಜಿಕ ಮಾಧ್ಯಮಗಳಿಂದ ಜನರಿಗೆ ಅಪಾಯ ಇದೆ ಎಂಬುದನ್ನು ಕೆಲವೊಂದು ಸನ್ನಿವೇಶಗಳು ಸಾಕ್ಷಿಯಾಗಿವೆ. ಏಕೆಂದ್ರೆ 2017ರ ಯುಕೆಯ ಮ್ಯಾಂಚೆಸ್ಟರ್ ಬಾಂಬ್​ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದರು. ಆರೋಪಿ ಸಲ್ಮಾನ್ ಅಬೇದಿ ಈ ಬಾಂಬ್ ತಯಾರಿಸುವುದನ್ನು ಸಾಮಾಜಿಕ ಮಾಧ್ಯಮವೊಂದರl್ಲಿ ಟ್ಯುಟೋರಿಯಲ್ ವಿಡಿಯೋಗಳಿಂದ ಕಲಿತಿದ್ದನು ಎಂದು ವರದಿಯಾಗಿದೆ.

ಡ್ರೋನ್‌ಗಳು : ಇತ್ತೀಚೆಗೆ ಯುದ್ಧದಲ್ಲಿ ಡ್ರೋನ್​ ದಾಳಿಗಳು ಹೆಚ್ಚುತ್ತಿವೆ. ಬೊಕೊ ಹರಾಮ್, ಹಮಾಸ್, ಹೆಜ್ಬುಲ್ಲಾ, ಹೌತಿ ಬಂಡುಕೋರರು ಮತ್ತು ಐಎಸ್‌ಐಎಲ್ ಸೇರಿದಂತೆ ಅನೇಕ ಸಂಘಟನೆಗಳು ಯುದ್ಧದಲ್ಲಿ ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಗುಪ್ತಚರ, ಕಣ್ಗಾವಲು ಮತ್ತು ಎಲೆಕ್ಟ್ರಾನಿಕ್ ಯುದ್ಧ ಕ್ರಮಗಳಿಗಾಗಿ ಸಣ್ಣ ಡ್ರೋನ್‌ಗಳನ್ನು ಬಳಸಲಾಗುತ್ತದೆ. ಅಂದಾಜಿನ ಪ್ರಕಾರ 65 ಸಂಘಟನೆಗಳು ಈಗ ಡ್ರೋನ್‌ಗಳನ್ನು ಉಪಯೋಗಿಸುತ್ತಿದ್ದಾರೆ.

2017 ರಲ್ಲಿ ಐಎಸ್‌ಐಎಲ್ ಉತ್ತರ ಇರಾಕ್‌ನಲ್ಲಿ ಪೆಶ್ಮೆರ್ಗಾ ಮತ್ತು ಫ್ರೆಂಚ್ ವಿಶೇಷ ಪಡೆಗಳ ವಿರುದ್ಧ ಡ್ರೋನ್ ದಾಳಿಗಳನ್ನು ಯಶಸ್ವಿಯಾಗಿ ನಡೆಸಿತು.

2019 :2019 ರಲ್ಲಿ ಹೌತಿ ಬಂಡುಕೋರರು ಸೌದಿ ಆಯಿಲ್​ ರಿಫೈನೆರಿಯಸ್​ ಅನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಈ ಮೂಲಕ ವಿಶ್ವದ ತೈಲ ಪೂರೈಕೆಯ ಸುಮಾರು ಶೇಕಡ 6ರಷ್ಟು ನಷ್ಟು ಭಾಗವನ್ನು ನಾಶಮಾಡಲು ಡ್ರೋನ್‌ಗಳು ಸಹಾಯ ಮಾಡಿದಾಗ ಸುದ್ದಿಯಾಗಿದ್ದರು.

2023-24 ಹಮಾಸ್ ಮತ್ತು ಇಸ್ರೇಲ್ ಸಂಘರ್ಷ :ಅಕ್ಟೋಬರ್ 2023 ರಲ್ಲಿ ಗಾಜಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಹೌತಿಗಳು ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ 90ಕ್ಕೂ ಹೆಚ್ಚು ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.

2023 :ಅಕ್ಟೋಬರ್ 07, 2023 ಇಸ್ರೇಲ್ ವಿರುದ್ಧದ ಭಯೋತ್ಪಾದಕ ದಾಳಿಯಲ್ಲಿ ಹಮಾಸ್ ಹೆಚ್ಚಿನ ಸಂಖ್ಯೆಯಲ್ಲಿ ಡ್ರೋನ್‌ಗಳನ್ನು ಬಳಸಿತು.

ಭಯೋತ್ಪಾದಕರಿಂದ 3D-ಪ್ರಿಂಟೆಡ್​ ಗನ್ಸ್​ ಬಳಕೆ : 2019 ರಿಂದ 2022ರ ವರೆಗೆ ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರು 3D-ಪ್ರಿಂಟೆಡ್​ ಗನ್ಸ್​ ತಯಾರಿಸುವ ಅಥವಾ ತಯಾರಿಸಲು ಪ್ರಯತ್ನಿಸಿದ ಉದಾಹರಣೆಗಳಿವೆ.

ಅಕ್ಟೋಬರ್ 9, 2019 :ಜರ್ಮನಿಯ ಹಾಲೆಯಲ್ಲಿರುವ ಸಿನಗಾಗ್‌ನಲ್ಲಿ ಯೋಮ್ ಕಿಪ್ಪೂರ್‌ನಲ್ಲಿ ಭಕ್ತರ ಮೇಲೆ ದಾಳಿ ಅಥವಾ ಹತ್ಯಾಕಾಂಡ ನಡೆಸಲು ಬಂದೂಕುಧಾರಿಯೊಬ್ಬ ಪ್ರಯತ್ನಿಸಿದ್ದನು. ಆಗ ಆ ಉಗ್ರ 3D-ಪ್ರಿಂಟೆಡ್​ ಗನ್​ ಸೇರಿದಂತೆ 3D-ಪ್ರಿಂಟೆಡ್​ ಯುನಿಟ್ಸ್ ಬಳಸಿಕೊಂಡು ಮನೆಯಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಭಯೋತ್ಪಾದಕನೊಬ್ಬ ಮಾರಕ ದಾಳಿ ನಡೆಸಿದ್ದು ಇದೇ ಮೊದಲಾಗಿತ್ತು.

ಆಗಸ್ಟ್ 2020 ಯುಕೆಯ ಪಾಲ್ಟನ್ ದಾಳಿ : ಸ್ಫೋಟಕಗಳು ಮತ್ತು 3D-ಪ್ರಿಂಟೆಡ್​ ಗನ್ಸ್​ ತಯಾರಿಸಲು ಯತ್ನಿಸಿದ್ದಕ್ಕಾಗಿ 33 ವರ್ಷದ ವೈಟ್​ ನ್ಯಾಶನಲ್​ಲಿಸ್ಟ್​ ಡೀನ್ ಮಾರಿಸ್​ರನ್ನು ಬಂಧಿಸಲಾಯಿತು. ಅವರು ಬ್ಯಾಲಿಯೆಟ್‌ನ ಪ್ರಣಾಳಿಕೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು. ಜೂನ್ 2021 ರಲ್ಲಿ ಅವರನ್ನು ದೋಷಿ ಎಂದು ಘೋಷಿಸಲಾಯಿತು.

ಮಣಿಪುರ ಸಂಘರ್ಷ :ಸೆಪ್ಟೆಂಬರ್ 2024ರಲ್ಲಿ ನಡೆದ ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಪೊಲೀಸರ ಪ್ರಕಾರ, ಶಂಕಿತ ಕುಕಿ ದಂಗೆಕೋರರು ಹೈಟೆಕ್ ಡ್ರೋನ್‌ಗಳನ್ನು ಬಳಸಿಕೊಂಡು ಆರ್‌ಪಿಜಿಗಳನ್ನು (ರಾಕೆಟ್ ಚಾಲಿತ ಗ್ರೆನೇಡ್‌ಗಳು) ಹಾರಿಸಿದ್ದರು. ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಬಾಂಬ್‌ಗಳನ್ನು ಎಸೆಯಲು ಡ್ರೋನ್‌ಗಳ ಬಳಕೆಯು ಮಣಿಪುರ ಸಂಘರ್ಷದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಗುರುತಿಸಿದೆ ಎಂದು ಪೊಲೀಸರು ಹೇಳಿದರು.

ಭಯೋತ್ಪಾದಕ ಪ್ರಚಾರಕ್ಕೆ AI ಬಳಕೆ : ಸಾಮಾಜಿಕ ಮಾಧ್ಯಮ ಮತ್ತು ಎಐ ಮೂಲಭೂತೀಕರಣದಲ್ಲಿ ವಿಭಿನ್ನ. ಆದರೆ ಪೂರಕ ಪಾತ್ರ ವಹಿಸುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಉಗ್ರಗಾಮಿ ಸಂದೇಶಗಳು ಹರಡುತ್ತವೆ ಮತ್ತು ಎಐ ಮಾನಸಿಕ ದುರ್ಬಲತೆಗಳನ್ನು ಬಳಸಿಕೊಳ್ಳುವ ಮೂಲಕ ಡೀಪ್​ಫೇಕ್​ ವಿಡಿಯೋಗಳು ಮತ್ತು ವೈಯಕ್ತಿಕಗೊಳಿಸಿದ ಸಂದೇಶಗಳನ್ನು ಒಳಗೊಂಡಂತೆ ಅತ್ಯಾಧುನಿಕ ಪ್ರಚಾರವನ್ನು ರಚಿಸುವ ಮೂಲಕ ಇದನ್ನು ಹೆಚ್ಚಿಸುತ್ತದೆ.

ಉಗ್ರಗಾಮಿ ಸಂಘಟನೆಗಳು ಸಂವಾದಾತ್ಮಕ ನೇಮಕಾತಿಗಾಗಿ ಎಐ ಅನ್ನು ಬಳಸಿಕೊಂಡಿವೆ. 2021 ರಲ್ಲಿ ನಡೆದ ಘಟನೆಯೊಂದರಲ್ಲಿ 19 ವರ್ಷದ ಜಸ್ವಂತ್ ಸಿಂಗ್ ಚೈಲ್ 1919 ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಬಯಸಿದ್ದರು. ವಿಂಡ್ಸರ್ ಕೋಟೆಯಲ್ಲಿ ರಾಣಿ ಎಲಿಜಬೆತ್ II ರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದನು. ಚೈಲ್ ಸರಾಯ್ ಎಂಬ ಸ್ನೇಹಿತನೊಂದಿಗೆ 5 ಸಾವಿರಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದನು. ಅದು ನಂತರ ರೆಪ್ಲಿಕಾ ಅಪ್ಲಿಕೇಶನ್ ಬಳಸಿ ಅವನು ರಚಿಸಿದ ಜನರೇಟಿವ್ AI ಚಾಟ್‌ಬಾಟ್ ಎಂದು ತಿಳಿದುಬಂದಿತ್ತು.

ಡೀಪ್​ ಫೇಕ್​ ಟೆಕ್ನಾಲಜಿ :ಎಐ ಲೋಕದ ಯುದ್ಧದಲ್ಲಿ ಪ್ರಮುಖವೆಂದ್ರೆ ಅದು ಡೀಪ್​ ಫೇಕ್​ ಟೆಕ್ನಾಲಜಿ. ಈ ತಂತ್ರಜ್ಞಾನದಿಂದ ಜಾಗತಿಕ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವ ಮತ್ತು ಸಂಘರ್ಷದ ನೈಜತೆಗಳನ್ನು ಮರೆಮಾಚುವ ಗುರಿಯನ್ನು ಹೊಂದಿದೆ. ಉಗ್ರಗಾಮಿ ನೇಮಕಾತಿಗಳಿಗೆ ಡೀಪ್‌ಫೇಕ್‌ ತಂತ್ರಜ್ಞಾನ ಪ್ರಬಲ ಸಾಧನವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. 2016 ರಲ್ಲಿ ಶೇಕಡ 90 ರಷ್ಟು ಉಗ್ರಗಾಮಿಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ನೇಮಕ ಮಾಡಿಕೊಂಡಿರುವುದು ಗಮನಾರ್ಹ.

ಸಾಮಾಜಿಕ ಮಾಧ್ಯಮ ಬಳಕೆ :ಉಗ್ರರು ಮೇನ್​ಸ್ಟ್ರೀಮ್​ ಪ್ಲಾಟ್​ಫಾರ್ಮ್​ಗಳಾದ ಫೇಸ್‌ಬುಕ್, ಟಂಬ್ಲರ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಇದರ ಮೂಲಕ ಈ ಗುಂಪುಗಳು ಜಾಗತಿಕ ಪ್ರೇಕ್ಷಕರನ್ನು ತಲುಪಲು ಮತ್ತು ಸಂಭಾವ್ಯ ನೇಮಕಾತಿಗಳೊಂದಿಗೆ ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿಗಳ ಲೈವ್​ : ಉಗ್ರರು ತಮ್ಮ ಭಯಂಕರ ಕೃತ್ಯಗಳನ್ನು ಬಹಿರಂಗಗೊಳಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಇದರ ಮೂಲಕ ಜನರಲ್ಲಿ ಆತಂಕ ಮೂಡುತ್ತದೆ. ಮಾರ್ಚ್ 2019 ರಲ್ಲಿ ನ್ಯೂಜಿಲೆಂಡ್‌ನ ಎರಡು ಮಸೀದಿಗಳಲ್ಲಿ ಗನ್​ಮ್ಯಾನ್​ವೊಬ್ಬ 51 ಜನರನ್ನು ಕೊಂದಿದ್ದನು. ಈ ಭಯಾನಕ ದಾಳಿಯ ನೇರಪ್ರಸಾರ ಫೇಸ್​ಬುಕ್​ನಲ್ಲಿ ಸ್ಟ್ರೀಮ್​ ಆಗಿತ್ತು. ಬಳಿಕ ಈ ಘಟನೆ ವಿಶ್ವದಾದ್ಯಂತ ಆತಂಕ ಸೃಷ್ಟಿಸಿತ್ತು.

ಉಗ್ರರ ನೇಮಕಾತಿಗೆ ಆನ್‌ಲೈನ್ ಟೂಲ್ಸ್ ​:ಇತ್ತೀಚಿನ ದಿನಗಳಲ್ಲಿ ಉಗ್ರಗಾಮಿ ಗುಂಪುಗಳ ಆನ್‌ಲೈನ್ ಬಳಕೆ ಒಂದು ಸವಾಲಾಗಿ ಪರಿಣಮಿಸಿದೆ. 1990ರ ದಶಕದ ನಂತರ ಇಂಟರ್ನೆಟ್​ ವೇಗವಾಗಿ ಅಭಿವೃದ್ಧಿಯತ್ತ ಸಾಗಿತು. ಇದರಿಂದಾಗಿ ಉಗ್ರರು ಸಹ ಕಾಲಕ್ಕೆ ತಕ್ಕಂತೆ ಅಪ್​ಡೇಟ್​ ಆಗುತ್ತಲೇ ಟೆಕ್ನಾಲಜಿಯನ್ನು ಬಳಸುತ್ತಿದ್ದಾರೆ. ಉಗ್ರರು ಈಗ ವೆಬ್‌ಸೈಟ್‌ಗಳು, ರೇಡಿಯೋ ಪ್ರಸಾರಗಳು, ಸಿಡಿಗಳು, ಫೋಟೋ ರಿಪೋರ್ಟ್ಸ್​, ಧರ್ಮೋಪದೇಶಗಳು, ಪಠ್ಯಪುಸ್ತಕಗಳು, ಮಕ್ಕಳ ಬಣ್ಣ ಪುಸ್ತಕಗಳು, ಪೋಸ್ಟರ್‌ಗಳು, ಸುದ್ದಿಪತ್ರಗಳು, ಇನ್ಫೋಗ್ರಾಫಿಕ್ಸ್ ಮತ್ತು ನಿಯತಕಾಲಿಕೆಗಳು ಸೇರಿದಂತೆ ವಿವಿಧ ಸ್ವರೂಪಗಳನ್ನು ತಮ್ಮ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಡಾರ್ಕ್ ವೆಬ್ :ಡಾರ್ಕ್ ವೆಬ್ ಅನಾಮಧೇಯ ವಹಿವಾಟು ಮತ್ತು ಸಂವಹನಗಳಿಗೆ ಸ್ವರ್ಗವಾಗಿದೆ. ಇದು ಗುಪ್ತಚರ ಸಂಸ್ಥೆಗಳಿಗೆ ಸವಾಲುಗಳನ್ನು ಹಾಕುತ್ತದೆ. ದೊಡ್ಡ ವೇದಿಕೆಗಳು ತಮ್ಮ ಪತ್ತೆ ಸಾಮರ್ಥ್ಯಗಳನ್ನು ಸುಧಾರಿಸಿದಂತೆ, ಭಯೋತ್ಪಾದಕರು ಸಣ್ಣ, ಕಡಿಮೆ ನಿಯಂತ್ರಿತ ಮತ್ತು ವಿಕೇಂದ್ರೀಕೃತ ಸ್ಥಳಗಳಿಗೆ (Dweb) ಸ್ಥಳಾಂತರಗೊಳ್ಳುತ್ತಾರೆ. ಅಲ್ಲಿ ಪತ್ತೆ ಹೆಚ್ಚು ಸಂಕೀರ್ಣವಾಗಿದೆ. ಈ ಸಣ್ಣ ವೇದಿಕೆಗಳು ಸಾಮಾನ್ಯವಾಗಿ ದೊಡ್ಡದಾದವುಗಳಂತಹ ಭದ್ರತಾ ಪರಿಣತಿ ಮತ್ತು ಬಲವಾದ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ. ಅಷ್ಟೇ ಅಲ್ಲ, ಇದು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ.

ಓದಿ:ಈಕೆ ಒಂದೂವರೆ ಕೋಟಿಯ ಎಐ ಗರ್ಲ್​ಫ್ರೆಂಡ್ ​: ಈ ಆರಿಯಾಳೊಂದಿಗೆ ಓಪನ್​ ಆಗಿಯೇ ಮಾತನಾಡಬಹುದು!

ABOUT THE AUTHOR

...view details