2025 Honda Activa 110 Launched:ನಮ್ಮ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳಲ್ಲಿ ಹೋಂಡಾ ಆಕ್ಟಿವಾ ಸಹ ಒಂದು. ಜನಪ್ರಿಯ ದ್ವಿಚಕ್ರ ವಾಹನ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಈಗ OBD2B ನಿಬಂಧನೆಗಳ ಅನುಗುಣವಾಗಿ ಅಪ್ಡೇಟ್ ಮಾಡಿ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಇದರ ಜೊತೆ ಈ ವರ್ಷ ತನ್ನ ಸಂಪೂರ್ಣ ಲೈನ್ಅಪ್ ಅಪ್ಡೇಟ್ ಮಾಡಿದೆ.
ಅಪ್ಡೇಟ್ ಮಾಡಿದ ಹೊಸ ಆಕ್ಟಿವಾದಲ್ಲಿ ಬದಲಾಗಿದ್ದೇನು?:ಕಂಪನಿಯು ಹೋಂಡಾ ಆಕ್ಟಿವಾ 110 ಸ್ಕೂಟರ್‌ನ ಫೀಚರ್ಗಳ ಲಿಸ್ಟ್ ಅನ್ನು ಅಪ್ಗ್ರೇಡ್ ಮಾಡಿದೆ. ಇದರಲ್ಲಿ 4.2-ಇಂಚಿನ TFT ಕಲರ್ ಡಿಸ್ಪ್ಲೇ ಹೊಂದಿದೆ. ಇದು ಮೈಲೇಜ್ ಇಂಡಿಕೇಟರ್, ಟ್ರಿಪ್ ಮೀಟರ್, ಇಕೋ-ಇಂಡಿಕೇಟರ್, ಡಿಸ್ಟೆನ್ಸ್ ಟು ಎಮ್ಟಿ ಸೇರಿದಂತೆ ವಿವಿಧ ರೀತಿಯ ಮಾಹಿತಿಗಳನ್ನು ಒದಗಿಸುತ್ತದೆ. ಇದಲ್ಲದೆ ಈ ಹೊಸ ಹೋಂಡಾ ಆಕ್ಟಿವಾ ನಿಮ್ಮ ಡಿವೈಸ್ಗಳನ್ನು ಸಹ ಪ್ರಯಾಣದಲ್ಲಿರುವಾಗ ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಒದಗಿಸಿದೆ.
ಹೋಂಡಾ ಆಕ್ಟಿವಾ 110 ಪವರ್‌ಟ್ರೇನ್:ಈ ಹೊಸ ಹೋಂಡಾ ಆಕ್ಟಿವಾ ಅದೇ ಹಳೆಯ 109.51cc, ಸಿಂಗಲ್-ಸಿಲಿಂಡರ್ PGM-Fi ಎಂಜಿನ್‌ನೊಂದಿಗೆ ಬರುತ್ತದೆ. ಆದರೆ ಈಗ ಅದನ್ನು OBD2B-ನಿಬಂಧನೆಗಳಿಗೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ. ಈ ಎಂಜಿನ್ 7.7bhp ಪವರ್ ಮತ್ತು 9.03Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹೋಂಡಾ ಮೋಟಾರ್‌ಸೈಕಲ್ ಈ ಆಕ್ಟಿವಾವನ್ನು ಐಡ್ಲಿಂಗ್ ಸ್ಟಾಪ್ ಸಿಸ್ಟಮ್‌ನೊಂದಿಗೆ ಸಜ್ಜುಗೊಳಿಸಿದೆ.