ಹೈದರಾಬಾದ್: ಮನುಷ್ಯರಂತೆ ಇರುವ ಜೀವಿಗಳು ಅನ್ಯಗ್ರಹದಲ್ಲಿದೆಯೇ, ಭೂಮಿಯೊಂದರಲ್ಲಿ ಮಾತ್ರವೇ ಜೀವಿಗಳಿರುವುದಾ ಎಂಬ ಕುತೂಹಲಕ್ಕೆ ಹಲವಾರು ವರ್ಷಗಳಿಂದ ಶೋಧ ನಡೆಯುತ್ತಿದೆ. ಆದರೆ, ಇದುವರೆಗೂ ಈ ಕುರಿತು ನಿಖರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ವಿಜ್ಞಾನಿಗಳು ಇಡೀ ಜಗತ್ತಿನಲ್ಲಿನ ನಮ್ಮಂತೆ ಇರುವ ಜನರಿಲ್ಲ ಎಂದು ವಾದಿಸುತ್ತಾರೆ. ಈ ಸಂಬಂಧ ಅನೇಕ ಸಿದ್ಧಾಂತಗಳನ್ನು ಮುಂದಿಡುತ್ತಾರೆ. ಇದೀಗ ಹಾರ್ವಡ್ ವಿಶ್ವವಿದ್ಯಾಲಯ ಮತ್ತೊಂದು ಹೊಸ ವಾದವನ್ನು ತಂದಿದೆ. ಅದರ ಅನುಸಾರ ನಾವು ಹುಡುಕುತ್ತಿರುವ ಏಲಿಯನ್ಗಳು ಬೇರೆಲ್ಲೋ ಇಲ್ಲ. ನಮ್ಮ ಮಧ್ಯೆ ನಮಗೆ ತಿಳಿಯದಂತೆ ಇದ್ದಾರೆ ಎನ್ನುವ ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದೆ.
2016ರಲ್ಲಿ ಹಾರ್ವಡ್ ವಿಶ್ವವಿದ್ಯಾಲಯ ಮಾನವ ಸಮೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಇತ್ತೀಚಿಗೆ ಈ ಅಧ್ಯಯದಲ್ಲಿ ಅನ್ಯಗ್ರಹ ಜೀವಿಗಳ ಕುರಿತು ಹೊಸ ವಾದ ಮಂಡಿಸಲಾಗಿದೆ. ಗುರುತಿಸಲಾಗದ ಅಸಂಗತ ವಿದ್ಯಮಾನಗಳು (ಯುಎಪಿ) ಕುರಿತು ತಿಳಿಸಲಾಗಿದೆ. ಅಂದರೆ ಯುಎಫ್ಒ ಮತ್ತು ಹಾರುವ ತಟ್ಟೆಗಳನ್ನು ಅನ್ಯಗ್ರಹ ಜೀವಿಗಳ ಜೀವನಕ್ಕೆ ಸಂಬಂಧ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ, ಈ ಅನ್ಯಗ್ರಹ ಜೀವಿಗಳು ಭೂಮಿ ಮತ್ತು ಚಂದ್ರನ ಮೇಲೆ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಏಲಿಯನ್ಗಳು ಭೂಮಿ ಮೇಲಿನ ತಮ್ಮ ಗೆಳೆಯರನ್ನು ಭೇಟಿಯಾಗಲು ಫ್ಲೈಯಿಂಗ್ ಸಾಸರ್ಗಳ ಬಳಕೆ ಮಾಡುತ್ತಿದ್ದಾರೆ ಎಂದಿದ್ದಾರೆ. ಈ ಅಧ್ಯಯನದ ಹೊಸ ಕಲ್ಪನೆಯನ್ನು ಕ್ರಿಪ್ಟೊ - ಟೆರಿಸ್ಟ್ರಿಯಲ್ ಎಂದು ಕರೆಯಲಾಗಿದೆ.
ಕ್ರಿಪ್ಟೊ ಟೆರಿಸ್ಟ್ರಿಯಲ್ ಎಂಬುದು ವಿಶಿಷ್ಟ ಮತ್ತು ನಿಗೂಢ ಅನ್ಯ ಜೀವಿಯಾಗಿದ್ದು, ಇವು ಭವಿಷ್ಯದಲ್ಲಿ ಮತ್ತು ಬುದ್ದಿವಂತ ಡೈನೋಸರ್ಗಳಿಗೆ ಮೊದಲೇ ಭೂಮಿ ಮೇಲೆ ಇದ್ದವು ಎಂದು ತಿಳಿಸಲಾಗಿದೆ. ಆಳವಾದ ಅರ್ಥೈಸುವಿಕೆ ಆಧಾರದ ಮೇಲೆ ಈ ಕಲ್ಪನೆಯನ್ನು ಸಂಶೋಧಕರು ಪ್ರಸ್ತಾಪಿಸಿದ್ದಾರೆ. ಇದು ತಾತ್ಕಲಿಕವಾಗಿ ಈ ಸಿದ್ಧಾಂತವನ್ನು ಬಲಗೊಳಿಸುತ್ತದೆ. ಇದು ಸತ್ಯವಾದರೆ, ಏಲಿಯನ್ಸ್ಗಳು ನಮ್ಮ ಮನೆಯ ಸಮೀಪವೇ ವಾಸಿಸುತ್ತಿವೆ ಎಂಬುದರ ಬಗ್ಗೆ ಆಶ್ಚರ್ಯ ಪಡಬೇಕಿಲ್ಲ.
ನಾಲ್ಕು ಅಂಶಗಳ ಪ್ರತಿಪಾದನೆ: ಅನ್ಯಗ್ರಹ ಜೀವನಗಳ ವಿಧಗಳ ಕುರಿತು ಹೊಸ ಅಧ್ಯಯನದಲ್ಲಿ ನಾಲ್ಕು ಅಂಶವನ್ನು ತಿಳಿಸಲಾಗಿದೆ.
ಮಾನವ ಕ್ರಿಪ್ಟೊ ಟೆರಿಸ್ಟ್ರಿಯಲ್: ಅಭಿವೃದ್ಧಿ ತಂತ್ರಜ್ಞಾನದೊಂದಿಗೆ ಪ್ರಾಚೀನ ಮಾನವ ನಾಗರಿಕತೆ ಆಗಿದೆ. ಬಹಳ ಹಿಂದೆಯೇ ಬಹುತೇಕರು ಸಾವನ್ನಪ್ಪಿದ್ದು, ಇದು ಉಳಿದ ರೀತಿಯಲ್ಲಿ ಮುಂದುವರೆದಿದೆ.
ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್ಸ್: ತಾಂತ್ರಿಕವಾಗಿ ಮುಂದುವರಿದ ಮಾನವ ಹೊರತಾದ ನಾಗರಿಕತೆಯಾಗಿದೆ. ಕೆಲವು ಪ್ರಾಣಿಗಳು ಭೂಗತವಾಗಿ ಎಲ್ಲರಿಂದ ದೂರವಾಗಿ ಅಜ್ಞಾತವಾಗಿ ಬದುಕಲು ವಿಕಸನಗೊಂಡಿವೆ. ಈ ಪ್ರಾಚೀನ ಜೀವಿಗಳು ಮಂಗನಂತಹ ಹೋಮಿನಡ್ ಮಾನವರಾಗಿದ್ದಾರೆ. ಅಥವಾ ಈ ಮೊದಲಿನ ಅಪರಿಚಿತ ಬುದ್ಧಿವಂತ ಡೈನೋಸಾರ್ ರೂಪಗಳಾಗಿವೆ.