Gmail New Shield Email Feature: ನಮ್ಮಲ್ಲಿ ಹೆಚ್ಚಿನವರು ವೈಯಕ್ತಿಕ ಅಗತ್ಯಗಳಿಗಾಗಿ ಒಂದು ಇಮೇಲ್ ಐಡಿ ಮತ್ತು ಕಚೇರಿ ಅಗತ್ಯಗಳಿಗಾಗಿ ಮತ್ತೊಂದು ಇಮೇಲ್ ಐಡಿ ಬಳಸುವುದು ಸಹಜ. ನಾವು ಎಲ್ಲೆಂದರಲ್ಲೇ ಲಾಗಿನ್ ಆಗಬೇಕಾದಾಗ ಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸುವುದು ಸಹಜ. ಆಗ ನಮ್ಮ ಮೇಲ್ ಐಡಿ ಸ್ಪ್ಯಾಮ್ಗೆ ಒಳಪಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಾವು ಅನೇಕ ಬಾರಿ ನಮ್ಮ ಇನ್‌ಬಾಕ್ಸ್‌ನಲ್ಲಿ ಅಗತ್ಯ ಮೇಲ್‌ಗಳಿಗಿಂತ ಹೆಚ್ಚಾಗಿ ಈ ಅನಗತ್ಯ ಮೇಲ್‌ಗಳೇ ತುಂಬಿರುತ್ತವೆ. ಇದರೊಂದಿಗೆ ಸಮಸ್ಯೆಯನ್ನು ಪರಿಹರಿಸಲು ಗೂಗಲ್ 'ಶೀಲ್ಡ್ ಇಮೇಲ್' ಎಂಬ ಹೊಸ ವೈಶಿಷ್ಟ್ಯವನ್ನು ತರಲು ಸಿದ್ಧತೆ ನಡೆಸಿದೆ.
ಈ ಫೀಚರ್ ಸಹಾಯದಿಂದ ನೀವು ತಾತ್ಕಾಲಿಕ ಮೇಲ್ ಐಡಿಯನ್ನು ರಚಿಸಬಹುದು. ಇದರರ್ಥ ನೀವು ಎಲ್ಲಿಯಾದರೂ ಲಾಗಿನ್ ಮಾಡಲು ಬಯಸಿದರೆ, ಈ ಸುರಕ್ಷಿತ ಮೇಲ್ ಐಡಿಯನ್ನು ಬಳಸಬಹುದು. ಹೀಗೆ ಕ್ರಿಯೇಟ್ ಮಾಡಿದ ಐಡಿ ಕೇವಲ 10 ನಿಮಿಷ ಮಾತ್ರ ಕೆಲಸ ಮಾಡುತ್ತದೆ ಎಂದು ತಿಳಿಸಲಾಗಿದೆ. ಅದರ ನಂತರ ನೀವು ಅವಶ್ಯಕತೆಗೆ ಅನುಗುಣವಾಗಿ ಇನ್ನೊಂದು ಮೇಲ್ ಐಡಿಯನ್ನು ರಚಿಸಬಹುದು. ಆದರೆ ಈ ಫೀಚರ್ ಬಗ್ಗೆ ಗೂಗಲ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯದಲ್ಲೇ ಸ್ಪಷ್ಟನೆ ಸಿಗಲಿದೆ.
ಈಗಾಗಲೇ ಈ ಫೀಚರ್ ಲಭ್ಯಗೊಳಿಸಿರುವ ಆ್ಯಪಲ್: ಗೂಗಲ್ಗೂ ಮುನ್ನವೇ ಆ್ಯಪಲ್ ತನ್ನ ಬಳಕೆದಾರರಿಗೆ ಈ ರೀತಿಯ ಫೀಚರ್ ಲಭ್ಯವಾಗುವಂತೆ ಮಾಡಿದೆ. ಆ್ಯಪಲ್ ಇದನ್ನು 'ಹೈಡ್ ಮೈ ಇಮೇಲ್' ಎಂಬ ಹೆಸರಿನಲ್ಲಿ ಹೊರ ತಂದಿದೆ. ಆ್ಯಪಲ್ ಬಳಕೆದಾರರು ಈ ವೈಶಿಷ್ಟ್ಯದ ಸಹಾಯದಿಂದ ತಾತ್ಕಾಲಿಕ ಮೇಲ್ ಐಡಿಯನ್ನು ರಚಿಸಬಹುದು. ಅಪ್ಲಿಕೇಶನ್‌ಗೆ ಲಾಗಿನ್ ಆಗಬೇಕಾದರೆ ಈ ತಾತ್ಕಾಲಿಕ ಮೇಲ್ ಐಡಿ ಮೂಲಕ ಎಂಟ್ರಿ ಕೊಡ್ತಾರೆ. ಈ ರೀತಿಯಾಗಿ, ನೀವು ಸ್ಪ್ಯಾಮ್ ಮೇಲ್‌ಗಳ ತೊಂದರೆಯನ್ನು ತಪ್ಪಿಸಬಹುದು.
ಇದನ್ನೂ ಓದಿ:ಎಐ ಬಗ್ಗೆ ನೋಡುತ್ತಿರುವುದೆಲ್ಲವೂ ಸತ್ಯವಲ್ಲ; ಎಐ ಫೌಂಡೇಷನ್ ಮಾಡೆಲ್ ಸೃಷ್ಟಿಸಲು ಭಾರತ ಸಶಕ್ತ: ಮನೀಶ್ ಗುಪ್ತಾ