ನಾಂಜಿಂಗ್ (ಚೀನಾ): ಆಧುನಿಕ ಮಾನವರು ಮತ್ತು ಅವರ ಇತಿಹಾಸಪೂರ್ವ ಸೋದರಸಂಬಂಧಿಗಳಾದ ನಿಯಾಂಡರ್ತಲ್ಗಳ ನಡುವೆ ಜೀನ್ಗಳ ಸಂಬಂಧವಿರುವ (gene flow) ಬಗ್ಗೆ ಸಾಕಷ್ಟು ಪುರಾವೆಗಳನ್ನು ಚೀನಾ ಮತ್ತು ಅಮೆರಿಕದ ವಿಜ್ಞಾನಿಗಳ ಸಹಯೋಗದ ತಂಡವು ಕಂಡುಹಿಡಿದಿದೆ. ನಿಯಾಂಡರ್ತಲ್ಗಳು ಪ್ರಾಚೀನ ಮಾನವರ ಅಳಿದು ಹೋಗಿರುವ ಜಾತಿಯಾಗಿದ್ದು, ಸುಮಾರು 4 ಲಕ್ಷ ವರ್ಷಗಳ ಹಿಂದೆ ಇವರು ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿದ್ದರು. ಬೇಟೆಗಾರರಾಗಿದ್ದ ಈ ಮಾನವ ತಳಿಯು ಸುಮಾರು 30,000 ವರ್ಷಗಳ ಹಿಂದೆ ಕಣ್ಮರೆಯಾಗಿತ್ತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಧುನಿಕ ಮಾನವರು ಆಫ್ರಿಕಾದಿಂದ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿದಾಗ, ಅವರು ಸಮಯ ಮತ್ತು ವಾಸಸ್ಥಾನ ಎರಡನ್ನೂ ನಿಯಾಂಡರ್ತಲ್ಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ. ಇದು ಸಹಬಾಳ್ವೆ ಮತ್ತು ಸಂಭವನೀಯ ಆನುವಂಶಿಕ ಮಿಶ್ರಣದ (genetic mixing) ಅವಧಿಯನ್ನು ಸೂಚಿಸುತ್ತದೆ.
ನಾಂಜಿಂಗ್ನ ಆಗ್ನೇಯ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ನಿಯಾಂಡರ್ತಲ್ ಜೀನೋಮ್ನಲ್ಲಿ ಮಾನವ-ಅಂತರ್ಗತ ಅನುಕ್ರಮಗಳ ಉಪಸ್ಥಿತಿಯನ್ನು ಅಂದಾಜು ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ನಂತರ ಅವರು ಇದನ್ನು 2,000 ಸಮಕಾಲೀನ ಮಾನವರು ಮತ್ತು ಮೂವರು ನಿಯಾಂಡರ್ತಲ್ಗಳ ವೈವಿಧ್ಯಮಯ ಮಾದರಿಯ ಸಂಪೂರ್ಣ-ಜೀನೋಮ್ ಅನುಕ್ರಮ ದತ್ತಾಂಶಕ್ಕೆ ಹೋಲಿಸಿದರು.