Pinaka Weapon System: ಪಿನಾಕಾ ವೆಪನ್ ಸಿಸ್ಟಮ್ ಅನ್ನು ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಪ್ರವೇಜಿನಲ್ ಸ್ಟಾಫ್ ಕ್ವಾಲಿಟೇಟಿವ್ ರಿಕ್ರ್ಯೂಟಮೆಂಟ್ (PSQR) ಅಡಿಯಲ್ಲಿ ಈ ಪರೀಕ್ಷೆ ನಡೆಯಿತು. ವಿವಿಧ ಫೈರಿಂಗ್ ರೇಂಜ್‌ಗಳಲ್ಲಿ ನಡೆದ ಮೂರು ಹಂತಗಳ ಪರೀಕ್ಷೆಯಲ್ಲಿ ರಾಕೆಟ್‌ನ ಉಡಾವಣಾ ಸಾಮರ್ಥ್ಯ, ನಿಖರತೆ ಮತ್ತು ಸ್ಥಿರತೆಯನ್ನು ಗಮನಿಸಲಾಗಿದೆ.
ಈ ಪರೀಕ್ಷೆ ರಕ್ಷಣಾ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಇದು ಪಿನಾಕಾ ವೆಪನ್ ಸಿಸ್ಟಮ್ ಅನ್ನು ಭಾರತೀಯ ಸೇನೆಗೆ ಸೇರಿಸುವ ಮೊದಲು ಕೊನೆಯ ಹಂತದ ಪರೀಕ್ಷೆಯಾಗಿತ್ತು. ಈ ವೇಳೆ ರಾಕೆಟ್‌ನ ವ್ಯಾಪ್ತಿ, ನಿಖರತೆ, ಸ್ಥಿರತೆ ಮತ್ತು ಏಕಕಾಲದಲ್ಲಿ ಅನೇಕ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು. ಪರೀಕ್ಷೆಗೆ ಎರಡು ಪಿನಾಕಾ ಲಾಂಚರ್‌ಗಳನ್ನು ಬಳಸಲಾಗಿದೆ. ಇದು ಯಶಸ್ವಿಯಾದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ ಮತ್ತು ಭಾರತೀಯ ಸೇನೆಯನ್ನು ಅಭಿನಂದಿಸಿದ್ದಾರೆ. ಗೈಡೆಡ್ ಪಿನಾಕಾ ವೆಪನ್ ಸಿಸ್ಟಮ್ ಅನ್ನು ಸಶಸ್ತ್ರ ಪಡೆಗಳ ಫೈರ್‌ಪವರ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಡಿಆರ್‌ಡಿಒ ಮುಖ್ಯಸ್ಥ ಡಾ.ಸಮೀರ್ ವಿ. ಕಾಮತ್ ಪರೀಕ್ಷೆಯಲ್ಲಿ ಭಾಗವಹಿಸಿದ ತಂಡಗಳನ್ನು ಅಭಿನಂದಿಸಿದರು. ರಾಕೆಟ್ ವ್ಯವಸ್ಥೆಯು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ಮೊದಲು ಅಗತ್ಯವಿರುವ ಎಲ್ಲಾ ಅಗತ್ಯ ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದರು.