Digital Payment Transactions:ಭಾರತದಲ್ಲಿ ಡಿಜಿಟಲ್ ಪಾವತಿ ವಹಿವಾಟುಗಳ ಸಂಖ್ಯೆಯು 2017-18ರ ಆರ್ಥಿಕ ವರ್ಷದಲ್ಲಿ 2,071 ಕೋಟಿಯಿಂದ 2023-24ರ ಆರ್ಥಿಕ ವರ್ಷದಲ್ಲಿ 18,737 ಕೋಟಿಗೆ ಏರಿಕೆಯಾಗಿದೆ. ಇದು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) 44 ಪ್ರತಿಶತಕ್ಕೂ ಹೆಚ್ಚು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ 2024-25 ರ ಕಳೆದ ಐದು ತಿಂಗಳುಗಳಲ್ಲಿ (ಏಪ್ರಿಲ್-ಆಗಸ್ಟ್) ವಹಿವಾಟಿನ ಪ್ರಮಾಣವು 8,659 ಕೋಟಿ ರೂಪಾಯಿಗಳಿಗೆ ತಲುಪಿದೆ. ವಹಿವಾಟಿನ ಮೌಲ್ಯವು FY24 ರಲ್ಲಿ 1,962 ಲಕ್ಷ ಕೋಟಿ ರೂಪಾಯಿಗಳಿಂದ 3,659 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ಇದು 11 ಶೇಕಡಾ CAGR ಆಗಿದೆ. ಹೆಚ್ಚುವರಿಯಾಗಿ, FY25 ರ ಕಳೆದ 5 ತಿಂಗಳುಗಳಲ್ಲಿ, ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆ (DFS) ಪ್ರಕಾರ ಒಟ್ಟು ವಹಿವಾಟಿನ ಮೌಲ್ಯವು 1,669 ರೂ. ಲಕ್ಷ ಕೋಟಿಗೆ ಏರಿಕೆಯಾಗಿದೆ.
UPI ವಹಿವಾಟಿನ ಪ್ರಮಾಣವು FY 2017-18 ರಲ್ಲಿ 92 ಕೋಟಿ ರೂ.ಗಳಿಂದ 2023-24 FY ನಲ್ಲಿ 13,116 ಕೋಟಿ ರೂ.ಗಳಿಗೆ ಅಂದ್ರೆ 129 ಶೇಕಡಾ CAGR ಆಗಿದೆ. UPI ವಹಿವಾಟುಗಳ ಮೌಲ್ಯವು FY 17-18 ರಲ್ಲಿ ರೂ 1 ಲಕ್ಷ ಕೋಟಿಯಿಂದ FY 23-24 ರಲ್ಲಿ ರೂ. 200 ಲಕ್ಷ ಕೋಟಿಗೆ ಏರಿತು, ಇದು 138 ಶೇಕಡಾ CAGR ಬೆಳವಣಿಗೆಯಾಗಿದೆ. ಕಳೆದ 5 ತಿಂಗಳಲ್ಲಿ ಒಟ್ಟು ವಹಿವಾಟಿನ ಮೌಲ್ಯ 101 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. UPI ಈಗ ಪ್ರಮುಖ ಮಾರುಕಟ್ಟೆಗಳಾದ UAE, ಸಿಂಗಾಪುರ್, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ ಸೇರಿದಂತೆ ಏಳು ದೇಶಗಳಲ್ಲಿ ತಡೆರಹಿತ ನೇರ ವಹಿವಾಟುಗಳನ್ನು ಸುಗಮಗೊಳಿಸುತ್ತದೆ.