ಕರ್ನಾಟಕ

karnataka

ಭಾರತದಲ್ಲಿ 3600ಕ್ಕೇರಿದ ಡೀಪ್​ಟೆಕ್​ ಸ್ಟಾರ್ಟ್​ಅಪ್​ಗಳ ಸಂಖ್ಯೆ: ವಿಶ್ವದಲ್ಲಿ 6ನೇ ಸ್ಥಾನ - Deeptech Startups

By ETV Bharat Karnataka Team

Published : Jun 20, 2024, 4:56 PM IST

ಭಾರತದಲ್ಲಿ ಸದ್ಯ 3600 ಡೀಪ್​ಟೆಕ್​ ಸ್ಟಾರ್ಟ್​ಅಪ್​ಗಳು ಸಕ್ರಿಯವಾಗಿವೆ ಎಂದು ನಾಸ್ಕಾಮ್ ವರದಿ ಹೇಳಿದೆ.

3600ಕ್ಕೇರಿದ ಡೀಪ್​ಟೆಕ್​ ಸ್ಟಾರ್ಟ್​ಅಪ್​ಗಳ ಸಂಖ್ಯೆ
ಡೀಪ್​ಟೆಕ್​ ಸ್ಟಾರ್ಟ್​ಅಪ್​ಗಳ ಸಂಖ್ಯೆ ಹೆಚ್ಚಳ (IANS (ಸಾಂದರ್ಭಿಕ ಚಿತ್ರ))

ನವದೆಹಲಿ: 3600 ಡೀಪ್​ಟೆಕ್ ಸ್ಟಾರ್ಟ್​ಗಳನ್ನು ಹೊಂದುವ ಮೂಲಕ ಭಾರತವು ಈಗ ಜಾಗತಿಕವಾಗಿ ಅಗ್ರ ಒಂಬತ್ತು ಡೀಪ್​ಟೆಕ್ ಇಕೊಸಿಸ್ಟಮ್​ಗಳ ಪೈಕಿ 6ನೇ ಸ್ಥಾನದಲ್ಲಿದೆ ಎಂದು ನಾಸ್ಕಾಮ್ ವರದಿ ಗುರುವಾರ ತಿಳಿಸಿದೆ. ಭಾರತದ 3600 ಡೀಪ್​ಟೆಕ್​ ಸ್ಟಾರ್ಟ್​ಅಪ್​ಗಳು ಕಳೆದ ವರ್ಷ 850 ದಶಲಕ್ಷ ಡಾಲರ್ ಫಂಡಿಂಗ್ ಪಡೆದುಕೊಂಡಿವೆ.

ನಾಸ್ಕಾಮ್ ಮತ್ತು ಜಿನ್ನೋವ್ ವರದಿಯ ಪ್ರಕಾರ, ಸದ್ಯ ಭಾರತದಲ್ಲಿರುವ 3,600 ಸ್ಟಾರ್ಟ್ಅಪ್​ಗಳ ಪೈಕಿ ಕಳೆದ ವರ್ಷವೊಂದರಲ್ಲಿಯೇ 480 ಕ್ಕೂ ಹೆಚ್ಚು ಸ್ಟಾರ್ಟ್ಅಪ್​​ಗಳು ಆರಂಭವಾಗಿವೆ. ಇದು 2022 ರಲ್ಲಿ ಆರಂಭವಾದ ಸ್ಟಾರ್ಟ್​ಅಪ್​ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದೆ.

2023 ರಲ್ಲಿ ಪ್ರಾರಂಭಿಸಲಾದ ಈ 480 ಸ್ಟಾರ್ಟ್ಅಪ್​​ಗಳ ಪೈಕಿ 100 ಕ್ಕೂ ಹೆಚ್ಚು ಕಂಪನಿಗಳು ಬೌದ್ಧಿಕ ಆಸ್ತಿ ಅಥವಾ ಹೊಸ ಕ್ಷೇತ್ರಗಳಲ್ಲಿ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ ಸೃಜನಶೀಲ ಡೀಪ್ ಟೆಕ್ ಸಂಸ್ಥೆಗಳಾಗಿವೆ. ಗಮನಾರ್ಹವಾಗಿ, ಈ ವರ್ಷ ಸ್ಥಾಪಿಸಲಾದ ಡೀಪ್ ಟೆಕ್ ಸ್ಟಾರ್ಟ್ಅಪ್​ಗಳಲ್ಲಿ 74 ಪ್ರತಿಶತದಷ್ಟು ಕಂಪನಿಗಳು ಎಐ ತಂತ್ರಜ್ಞಾನ ಕೇಂದ್ರಿತವಾಗಿವೆ. ಇದು 2014 ರಿಂದ 2022 ರ ಅವಧಿಯಲ್ಲಿ ಶೇಕಡಾ 62 ರಷ್ಟು ಗಮನಾರ್ಹ ಹೆಚ್ಚಳವಾಗಿದೆ.

ಅಗ್ನಿಕುಲ್, ಗ್ಯಾಲಕ್ಸಿ ಐ, ಹೆಲ್ತ್ ಪ್ಲಿಕ್ಸ್, ಸರ್ವಂ ಎಐ ಮತ್ತು ಪೆಪ್ಟ್ರಿಸ್ ನಂತಹ ಡೀಪ್ ಟೆಕ್ ಸ್ಟಾರ್ಟ್ ಅಪ್ ಗಳು ಹೆಲ್ತ್ ಟೆಕ್, ಸುಸ್ಥಿರತೆ, ಎಐ ಮತ್ತು ಸ್ಪೇಸ್-ಟೆಕ್ ಇತ್ಯಾದಿ ಕ್ಷೇತ್ರಗಳಲ್ಲಿ ಹೊರಹೊಮ್ಮುತ್ತಿವೆ.

"ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಸ್ಪೇಸ್-ಟೆಕ್, ಮುಂದಿನ ಪೀಳಿಗೆಯ ರೊಬೊಟಿಕ್ಸ್ ಮತ್ತು ಇತರ ಕ್ಷೇತ್ರಗಳು ಆಸಕ್ತಿದಾಯಕ ರೀತಿಯಲ್ಲಿ ಒಂದುಗೂಡಲಿವೆ ಮತ್ತು ಶಿಕ್ಷಣ, ಮನರಂಜನೆ, ವಾಣಿಜ್ಯ, ಕೃಷಿ, ಕೈಗಾರಿಕಾ ಉತ್ಪಾದನೆ, ಚಲನಶೀಲತೆ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಇವುಗಳು ಅನ್ವಯವಾಗಲಿವೆ" ಎಂದು ನಾಸ್ಕಾಮ್ ಡೀಪ್ ಟೆಕ್ ಕೌನ್ಸಿಲ್ ಅಧ್ಯಕ್ಷ ಜಯಂದ್ರನ್ ವೇಣುಗೋಪಾಲ್ ಹೇಳಿದರು.

"ಭಾರತವು ತನ್ನ ಡೀಪ್ ಟೆಕ್ ಪ್ರತಿಭೆಯ ನೆಲೆ ಮತ್ತು ಉನ್ನತ ದರ್ಜೆಯ ಸ್ಟೆಮ್ ಪ್ರತಿಭೆಗಳನ್ನು (STEM talent) ಉತ್ಪಾದಿಸುವ ಸಾಂಪ್ರದಾಯಿಕ ಶಕ್ತಿಯೊಂದಿಗೆ ಈ ತಂತ್ರಜ್ಞಾನ ನೇತೃತ್ವದ ಸಾಮಾಜಿಕ ಪರಿವರ್ತನೆ ಪ್ರಕ್ರಿಯೆಯಲ್ಲಿ ಪ್ರಬಲ ಪಾತ್ರ ವಹಿಸಲು ಉತ್ತಮ ಸ್ಥಾನದಲ್ಲಿದೆ" ಎಂದು ಅವರು ಹೇಳಿದರು. ತಂತ್ರಜ್ಞಾನ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ದೇಶವು ಮೂರನೇ ಸ್ಥಾನದಲ್ಲಿದ್ದರೆ, ಡೀಪ್ ಟೆಕ್ ಸ್ಟಾರ್ಟ್ಅಪ್​ಗಳ ವಿಷಯದಲ್ಲಿ ಆರನೇ ಸ್ಥಾನದಲ್ಲಿದೆ.

"ಭಾರತವು ಅಗ್ರ ಮೂರು ಡೀಪ್ ಟೆಕ್ ಸ್ಟಾರ್ಟ್ಅಪ್​ಗಳ ಇಕೊಸಿಸ್ಟಮ್​ನಲ್ಲಿ ಸ್ಥಾನ ಪಡೆಯಬೇಕಾದರೆ, ಡೀಪ್ ಟೆಕ್ ಸ್ಟಾರ್ಟ್ಅಪ್​ಗಳಿಗೆ ರೋಗಿಗಳ ಮಾಹಿತಿಗಳನ್ನು ಒದಗಿಸುವುದು, ಶೈಕ್ಷಣಿಕ ಕ್ಷೇತ್ರಗಳೊಂದಿಗೆ ಬಲವಾದ ಆರ್ &ಡಿ ಪಾಲುದಾರಿಕೆ ಮತ್ತು 2023 ರಲ್ಲಿ ಮಂಡಿಸಲಾದ ಡೀಪ್ ಟೆಕ್ ನೀತಿಯ ಅನುಷ್ಠಾನ ಬಹಳ ಮುಖ್ಯವಾಗಿವೆ." ಎಂದು ನಾಸ್ಕಾಮ್ ಡೀಪ್ ಟೆಕ್ ಮುಖ್ಯಸ್ಥೆ ಕೃತಿಕಾ ಮುರುಗೇಶನ್ ವಿವರಿಸಿದರು.

ಇದನ್ನೂ ಓದಿ: ಎಐ ಸಾಮರ್ಥ್ಯದ ಮೈಕ್ರೊಸಾಫ್ಟ್​ Copilot+ ಪಿಸಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ? - Copilot AI PC Launched

ABOUT THE AUTHOR

...view details