ಕರ್ನಾಟಕ

karnataka

ETV Bharat / technology

ಯುದ್ಧಭೂಮಿಯಲ್ಲಿ ಎಫ್16 ಫೈಟರ್ ಜೆಟ್‌ ಪತನ: ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನದ ವಿಶೇಷತೆ ಏನು? - F16 fighter Plane Specialization - F16 FIGHTER PLANE SPECIALIZATION

World's most advanced fighter plane: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಎಫ್ -16 ಯುದ್ಧ ವಿಮಾನ ಪತನಗೊಂಡಿದೆ. ಹಾಗಾದರೆ ವಿಶ್ವದ ಈ ಯುದ್ಧ ವಿಮಾನದ ವಿಶೇಷತೆ ಏನು? ಉಕ್ರೇನ್‌ಗೆ ಆಘಾತ ಏಕೆ? ಎಂಬುದನ್ನು ತಿಳಿಯೋಣಾ ಬನ್ನಿ..

WORLDS MOST ADVANCED FIGHTER PLANE  UKRAINE RUSSIAN WAR  CRASHED F16 PLANE
ಯುದ್ಧಭೂಮಿಯಲ್ಲಿ ಪತನಗೊಂಡ ಎಫ್16 ಫೈಟರ್ ಜೆಟ್‌ (AP)

By ETV Bharat Tech Team

Published : Aug 30, 2024, 5:08 PM IST

ಕೀವ್ (ಉಕ್ರೇನ್):ಕೆಲ ದಿನಗಳ ಮೌನದ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಮಂಗಳವಾರದಿಂದ ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮುಂದುವರಿಸಿದೆ. ಇನ್ನು ಯುಎಸ್ ಒದಗಿಸಿದ F16 ಫೈಟರ್ ಜೆಟ್‌ಗಳನ್ನು ಉಕ್ರೇನ್ ಬಳಸುತ್ತಿದೆ. ಗುರುವಾರದಂದು ನಡೆದ ರಷ್ಯಾದ ಡ್ರೋನ್ ದಾಳಿಯಲ್ಲಿ ಈ ಫೈಟರ್ ಜೆಟ್ ಪತನಗೊಂಡಿದ್ದು, ಉಕ್ರೇನಿಯನ್ ಪೈಲಟ್ ಸಾವನ್ನಪ್ಪಿದ್ದಾರೆ. ವಿಶ್ವದ ಬಲಿಷ್ಠ ಯುದ್ಧ ವಿಮಾನ ಎಂದು ಕರೆಸಿಕೊಳ್ಳುವ ಅಮೆರಿಕದ ಎಫ್-16 ವಿಶೇಷತೆ ಏನು?.. ಇದು ಇತರ ಯುದ್ಧ ವಿಮಾನಗಳಿಗಿಂತ ಏಕೆ ಭಿನ್ನವಾಗಿದೆ?

100 ಯುದ್ಧ ವಿಮಾನಗಳಿಗೆ ಉಕ್ರೇನ್​ ಮನವಿ: ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರಷ್ಯಾದ ಕ್ಷಿಪಣಿ ತಾಣಗಳ ಮೇಲೆ ದಾಳಿ ಮಾಡಲು ಅನುಮತಿ ಕೇಳಿದ್ದಾರೆ. ಇಲ್ಲಿಯವರೆಗೆ ಅಮೆರಿಕ ಈಗಾಗಲೇ 6 ಎಫ್ -16 ಫೈಟರ್ ಜೆಟ್‌ಗಳನ್ನು ಉಕ್ರೇನ್‌ಗೆ ಕಳುಹಿಸಿದೆ. ಆದ್ರೆ 100 ಯುದ್ಧ ವಿಮಾನಗಳನ್ನು ನೀಡುವಂತೆ ಉಕ್ರೇನ್​ ಮನವಿ ಮಾಡಿದೆ.

ಎಫ್16 ಫೈಟರ್ ಜೆಟ್‌ (AP)

ಇನ್ನು ಕೆಲವು ಪೈಲಟ್‌ಗಳು ಮಾತ್ರ ಈ ವಿಶೇಷ ಮಾದರಿಯ ಫೈಟರ್ ಜೆಟ್‌ಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಉಕ್ರೇನ್‌ನ ಆತಂಕ. ಉಕ್ರೇನಿಯನ್ ವಾಯುಪಡೆಯ ಪ್ರಕಾರ, ಗುರುವಾರದ ದಾಳಿಯಲ್ಲಿ ಉಕ್ರೇನಿಯನ್ ಪೈಲಟ್ ಸಾವನ್ನಪ್ಪಿದ್ದಾರೆ. ಹಾಗಾದರೆ ಈ ವಿಮಾನವು ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದೆಯೇ ಅಥವಾ ಪೈಲಟ್‌ನ ತಪ್ಪಿನಿಂದಾಗಿ ಅಪಘಾತಕ್ಕೀಡಾಗಿದೆಯೇ ಎಂಬುದು ಯಕ್ಷ ಪ್ರಶ್ನೆ.

F16 ವಿಮಾನದ ವಿಶೇಷತೆ ಏನು?:1974 ರಲ್ಲಿ F16 ವಿಮಾನವು ಅಮೆರಿಕ ವಾಯುಪಡೆಯನ್ನು ಮೊದಲ ಬಾರಿಗೆ ಪ್ರವೇಶಿಸಿತು. ಕಾಲಕ್ಕೆ ತಕ್ಕಂತೆ ಈ ವಿಮಾನದ ತಂತ್ರಜ್ಞಾನವೂ ಬದಲಾದ ಕಾರಣ ಈ ವಿಮಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಕಲ ವ್ಯವಸ್ಥೆ ಮಾಡಲಾಗಿದೆ. ಇನ್ನು ಇದರ ಬಾಹ್ಯ ವಿನ್ಯಾಸವನ್ನು ಬದಲಾಯಿಸಲಾಗಿಲ್ಲ. ಅದರ ಸುಧಾರಿತ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಕ್ಕಾಗಿ ಇದು ಯುದ್ಧ ವಿಮಾನ ಎಂದು ಪ್ರಸಿದ್ಧವಾಗಿದೆ. ಅನೇಕ ದೇಶಗಳು ಫೈಟರ್ ಜೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದರೂ ಸಹ ಯುದ್ಧಭೂಮಿಯಲ್ಲಿ ದೀರ್ಘಕಾಲ ಹಾರುವ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ F16 ಗೆ ಸಮಾನವಾಗಿಲ್ಲ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (AP)

ಅತ್ಯಾಧುನಿಕ ರಾಡಾರ್: ವಿಮಾನವು 5 ನೇ ತಲೆಮಾರಿನ ರಾಡಾರ್ APG-83 ಅನ್ನು ಹೊಂದಿದ್ದು, ಹಾರಾಟದ ಸಮಯದಲ್ಲಿ ಸಂಭವನೀಯ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಇದು ಒಳಬರುವ ಕ್ಷಿಪಣಿಗಳು ಅಥವಾ ವಿಮಾನಗಳ ವ್ಯಾಪ್ತಿ ಮತ್ತು ಸಾಮರ್ಥ್ಯಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಅಷ್ಟೇ ಅಲ್ಲ ಪೈಲಟ್‌ಗೆ ಎಚ್ಚರಿಕೆಯ ಸಂದೇಶವನ್ನು ಸಹ ನೀಡುತ್ತದೆ. ಇನ್ನು ಈ ವಿಮಾನದಲ್ಲಿರುವ ಮತ್ತೊಂದು ವೈಶಿಷ್ಟ್ಯವೆನೆಂದ್ರೆ ಇದು ಡಿಜಿಟಲ್ ನಕ್ಷೆಯನ್ನು ಸಿದ್ಧಪಡಿಸುತ್ತದೆ. ಕಾಲಕಾಲಕ್ಕೆ ಪೈಲಟ್ ಅನ್ನು ಮುಂಚಿತವಾಗಿ ಎಚ್ಚರಿಸುತ್ತದೆ. ವಿಮಾನಕ್ಕೆ ಜೋಡಿಸಲಾದ ಸಂವೇದಕಗಳು ಗುರಿಯನ್ನು ಪತ್ತೆಹಚ್ಚುತ್ತವೆ ಮತ್ತು ಅದರ ನಕ್ಷೆಯನ್ನು ತಯಾರಿಸುತ್ತವೆ. ಇದು ಪೈಲಟ್‌ನ ಹೆಲ್ಮೆಟ್‌ನಲ್ಲಿ ನೀಡಲಾದ ಮುಂಭಾಗದ ಗ್ಲಾಸ್​ನಲ್ಲಿ ಗೋಚರಿಸುತ್ತದೆ.

ಪೈಲಟ್‌ಗಳಿಗೆ ಸುರಕ್ಷತೆ: F16 ವಿಮಾನ ತಯಾರಕ ಲಾಕ್‌ಹೀಡ್ ಮಾರ್ಟಿನ್ ಅಭಿವೃದ್ಧಿಪಡಿಸಿದ ಆಟೋಮ್ಯಾಟಿಕ್ ಗ್ರೌಂಡ್ ಕೊಲಿಷನ್ ಅವಾಯ್ಡೆನ್ಸ್ ಸಿಸ್ಟಮ್ (ಆಟೋ GCAS) ಪೈಲಟ್​ಗಳಿಗೆ ತುಂಬಾ ಉಪಯುಕ್ತವಾಗಿದೆ. ಪೈಲಟ್ ನಿಯಂತ್ರಣ ಕಳೆದುಕೊಂಡಾಗ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಈ ಸಿಸ್ಟಮ್​ ಸಹಾಯ ಮಾಡುತ್ತದೆ. ಲಾಕ್‌ಹೀಡ್ ಮಾರ್ಟಿನ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಂತ್ರಜ್ಞಾನವು 2014 ರಲ್ಲಿ ಅನುಷ್ಠಾನಗೊಂಡ ನಂತರ ವಿಮಾನ ಸ್ಫೋಟಗಳಂತಹ ಘಟನೆಗಳು 26 ಪ್ರತಿಶತದಷ್ಟು ಕಡಿಮೆ ಮಾಡಿದೆ ಎಂದು ಹೇಳಿದೆ.

ಸಾಟಿಯಿಲ್ಲದ ವೆಪನ್ ಇಂಟಿಗ್ರೇಷನ್: ಲಾಕ್ಹೀಡ್ ಮಾರ್ಟಿನ್ ಪ್ರಕಾರ, F16 ಫೈಟರ್​ ಜೆಟ್​ 180 ರೀತಿಯ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂದು ವಿಶ್ವದ ಯಾವುದೇ ಯುದ್ಧ ವಿಮಾನವು ಈ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಲಾಕ್‌ಹೀಡ್ ಮಾರ್ಟಿನ್ ಹೇಳಿದೆ. ಇಂತಹ ವಿಶ್ವದ ಅತ್ಯಾಧುನಿಕ ವಿಮಾನವನ್ನು ಉಕ್ರೇನ್ ಕಳೆದುಕೊಂಡಿರುವುದು ಮಾತ್ರವಲ್ಲ, ಅದನ್ನು ಚಲಾಯಿಸಲು ತರಬೇತಿ ಪಡೆದ ಪೈಲಟ್ ಅನ್ನು ಕಳೆದುಕೊಂಡಿರುವುದು ಜಗತ್ತೇ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಓದಿ:6 ಹೊಸ 'ದುಷ್ಟ' ಗ್ರಹಗಳನ್ನು ಕಂಡುಹಿಡಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್; ಅದರಲ್ಲೊಂದು ಅತ್ಯಂತ ವಿಶಿಷ್ಟ! - James Webb Space Telescope

ABOUT THE AUTHOR

...view details