Climate Change impact:ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಆತಂಕಕಾರಿ ತಿರುವನ್ನು ಪಡೆದುಕೊಳ್ಳುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಹವಾಮಾನ ಬದಲಾವಣೆಯಿಂದ ಸಾಲ್ಮೊನೆಲ್ಲಾ ಎಂಟೆರಿಕಾ ಎಂಬ ಆಹಾರದಿಂದ ಹರಡುವ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಅಧ್ಯಯನವನ್ನು ಅಮೆರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿಯ ಅಪ್ಲೈಡ್ ಮತ್ತು ಎನ್ವಿರಾನ್ಮೆಂಟಲ್ ಮೈಕ್ರೋಬಯಾಲಜಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಸಾಲ್ಮೊನೆಲ್ಲಾ ಎಂಟೆರಿಕಾವು ಅಮೆರಿಕದಲ್ಲಿ ಪ್ರತಿ ವರ್ಷ 1.2 ಮಿಲಿಯನ್ ಕಾಯಿಲೆಗಳನ್ನು ಉಂಟುಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಲುಷಿತ ತಾಜಾ ಉತ್ಪನ್ನಗಳ ಸೇವನೆಯಿಂದ ಈ ಸೋಂಕು ಉಂಟಾಗುತ್ತದೆ. ಸಾಲ್ಮೊನೆಲ್ಲಾ ಬಹು ಬೆಳೆಗಳಲ್ಲಿ ವಾಸಿಸುತ್ತದೆ ಮತ್ತು ದೀರ್ಘಕಾಲದವರೆಗೆ ಮಣ್ಣಿನಲ್ಲಿ ಇರುತ್ತದೆ. ಸಾಲ್ಮೊನೆಲ್ಲಾ ಇತರ ಜೀವಿಗಳಿಂದ ಉಂಟಾಗುವ ಸಸ್ಯ ಪರಿಸರದಲ್ಲಿನ ಬದಲಾವಣೆಗಳನ್ನು ಬಳಸಿಕೊಳ್ಳುತ್ತದೆ. ಬ್ಯಾಕ್ಟಿರಿಯಾದ ಫೈಟೊಪಾಥೋಜೆನ್‌ಗಳಿಂದ ಸೋಂಕಿತ ಸಸ್ಯಗಳು (ಸಸ್ಯಗಳಲ್ಲಿ ರೋಗವನ್ನು ಉಂಟುಮಾಡುವ ಜೀವಿಗಳು) ಈ ಮಾನವ ಕರುಳಿನ ರೋಗಕಾರಕಗಳಿಗೆ ಪ್ರತಿರೋಧವನ್ನು ಹೆಚ್ಚಿಸುತ್ತವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಸಾಲ್ಮೊನೆಲ್ಲಾ ಎಂಟೆರಿಕಾವು ಬ್ಯಾಕ್ಟೀರಿಯಾ ಸಮುದಾಯದ ಇತರ ಸದಸ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಕುತೂಹಲಕಾರಿಯಾಗಿದೆ. ಇದಲ್ಲದೆ, ತಾಜಾ ಸಸ್ಯಗಳ ಮೇಲೆ ಹೆಚ್ಚಿದ ಆರ್ದ್ರತೆಯ ಪರಿಣಾಮವು ಸಸ್ಯಗಳ ಮೇಲೆ ಸಾಲ್ಮೊನೆಲ್ಲಾ ಅಸ್ತಿತ್ವವನ್ನು ಬೆಂಬಲಿಸುತ್ತದೆ. ಹವಾಮಾನ ಬದಲಾವಣೆಯಿಂದ ಕಚ್ಚಾ ಉತ್ಪನ್ನಗಳ ಸೇವನೆಯಿಂದ ಆಹಾರದಿಂದ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಸ್ಯ ರೋಗಶಾಸ್ತ್ರದ ಪ್ರಾಧ್ಯಾಪಕ ಜೆರ್ರಿ ಬರಾಕ್ ಹೇಳಿದರು.