Electric Speedboat:ಕ್ಯಾಂಡೆಲಾ ತನ್ನ ಹೈಟೆಕ್ ಹೈಡ್ರೋಫಾಯಿಲ್ ಎಲೆಕ್ಟ್ರಿಕ್ ಬೋಟ್ 'ಕ್ಯಾಂಡೆಲಾ ಸಿ-8'ನೊಂದಿಗೆ ಹೊಸ ವಿಶ್ವದಾಖಲೆ ಸ್ಥಾಪಿಸಿದೆ. ಈ ಬೋಟ್ DC ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಪ್ರೊಪಲ್ಷನ್ ದಕ್ಷತೆ ಪ್ರದರ್ಶಿಸುವ ವಿನ್ಯಾಸ ನೀಡಲಾಗಿದೆ.
ಎಲೆಕ್ಟ್ರಿಕ್ ಬೋಟ್ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನಡುವೆ ವೇಗವಾಗಿ ಸಂಚರಿಸಿ ದಾಖಲೆ ಬರೆದಿದೆ. ವಿದ್ಯುತ್ ಬೋಟ್‌ವೊಂದು ಬಾಲ್ಟಿಕ್ ಸಮುದ್ರ ದಾಟಿದ್ದು ಇದೇ ಮೊದಲು. ಒಂದು ಮೀಟರ್ ಎತ್ತರದ ಅಲೆಗಳ ಮೇಲೂ ಇದು ಸಾಗಬಲ್ಲದು.
ಹೈಡ್ರೋಫಾಯಿಲ್ ತಂತ್ರಜ್ಞಾನ:ಕ್ಯಾಂಡೆಲಾ C-8 ರನ್ನಿಂಗ್ ವೇಳೆ ಬೋಟ್ ಅನ್ನು ನೀರಿನಿಂದ ಮೇಲಕ್ಕೆತ್ತಲು ಕಂಪ್ಯೂಟರ್-ಕಂಟ್ರೋಲ್ಡ್ ಹೈಡ್ರೋಫಾಯಿಲ್‌ಗಳನ್ನು ಬಳಸಲಾಗುತ್ತದೆ. ಹೀಗಾಗಿ ಕ್ಯಾಂಡೆಲಾ C-8 ಇತರ ದೋಣಿಗಳಿಗಿಂತ ಕಡಿಮೆ ಅಂದರೆ, ಶೇ.80ಕ್ಕಿಂತ ಕಡಿಮೆ ವಿದ್ಯುತ್ ಬಳಸುತ್ತದೆ. ಈ ಎಲೆಕ್ಟ್ರಿಕ್ ಬೋಟ್ ಸ್ವೀಡನ್‌ನಿಂದ ಫಿನ್‌ಲ್ಯಾಂಡ್‌ಗೆ 150 ನಾಟಿಕಲ್ ಮೈಲು (278 ಕಿಮೀ) ದೂರ ಕ್ರಮಿಸಿದೆ.
ಸಂತೋಷ ವ್ಯಕ್ತಪಡಿಸಿದ ಕ್ಯಾಂಡೆಲಾ ಸಂಸ್ಥಾಪಕ: ಇಂದು ಎಲೆಕ್ಟ್ರಿಕ್ ಕ್ರೂಸ್‌ಗಳಿಂದ ಇದು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುವಲ್ಲಿ ನಮ್ಮ ಮಿಷನ್ ಯಶಸ್ವಿಯಾಗಿದೆ ಎಂದು ಕ್ಯಾಂಡೆಲಾದ ಸಿಇಒ ಮತ್ತು ಸಂಸ್ಥಾಪಕ ಗುಸ್ತಾವ್ ಹ್ಯಾಸೆಲ್‌ಸ್ಕಾಗ್ ಹರ್ಷ ವ್ಯಕ್ತಪಡಿಸಿದರು. ತಮ್ಮ ಹೈಡ್ರೋಫಾಯಿಲ್ ತಂತ್ರಜ್ಞಾನದಿಂದ ಚಾಲಿತ ಎಲೆಕ್ಟ್ರಿಕ್ ಬೋಟ್ ಡೀಸೆಲ್‌ನಂತಹ ಶಕ್ತಿಯ ನೆರವಿನಿಂದ ಚಾಲಿತ ದೋಣಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಾಧನೆಯನ್ನು ಇತ್ತೀಚಿನ C-8 ಕ್ಯಾಂಡೆಲಾ ಬೋಟ್ 69 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಸಾಧಿಸಿದೆ ಎಂದು ಅವರು ಹೇಳಿದರು.