BSNL Recharge Plan :ಸರ್ಕಾರಿ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದುಬಾರಿ ರೀಚಾರ್ಜ್ ಯೋಜನೆಗಳು ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಹಾಕುತ್ತಿವೆ. ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್‌ಗಳು ಸಹ ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಒಂದೊಳ್ಳೆ ಪ್ಲಾನ್ ನೀಡಿದೆ.
ಈ ರೀಚಾರ್ಜ್ ಪ್ಲಾನ್ ಅಡಿಯಲ್ಲಿ ಕಂಪನಿಯು ಒಂದು ವರ್ಷದ ಮಾನ್ಯತೆಯ ಯೋಜನೆಯನ್ನು ನೀಡುತ್ತಿದ್ದು, ಇದರ ದೈನಂದಿನ ವೆಚ್ಚ ಸುಮಾರು 3 ರೂ. ಬೀಳಲಿದೆ. ಇದರಲ್ಲಿ ಇನ್ನೂ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ರೀಚಾರ್ಜ್ ಪ್ಲಾನ್ನ ಸಂಪೂರ್ಣ ಇಲ್ಲಿದೆ.
ಬಿಎಸ್ಎನ್ಎಲ್ 1,198 ರೂ. ರೀಚಾರ್ಜ್ ಪ್ಲಾನ್ :ಬಿಎಸ್ಎನ್ಎಲ್ನ ಈ ರೀಚಾರ್ಜ್ ಪ್ಲಾನ್ ವಿಶೇಷವಾಗಿ ದೀರ್ಘಾವಧಿಯ ಮಾನ್ಯತೆಗಾಗಿ ತರಲಾಗಿದೆ. ಇದರಲ್ಲಿ ಕಂಪನಿಯು 365 ದಿನಗಳ ಸಿಂಧುತ್ವ ನೀಡುತ್ತಿದೆ. ಅಂದರೆ ನೀವು ಇಂದು ಈ ರೀಚಾರ್ಜ್ ಮಾಡಿದರೆ 2026ರ ವರೆಗೆ ಮಾನ್ಯತೆಗಾಗಿ ನೀವು ಹೊಸ ರೀಚಾರ್ಜ್ ಮಾಡುವ ಅವಶ್ಯಕತೆಯಿಲ್ಲ.
ಇನ್ನು, ಈ ಪ್ಲಾನ್ ಎರಡು ಸಿಮ್ ಬಳಸುವವರಿಗೂ ಬಹಳ ಉಪಯುಕ್ತವಾಗಿದೆ. ಈ ಯೋಜನೆಯು ಸಿಮ್ ಅನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಉತ್ತಮವಾಗಿದೆ. ಈ ಯೋಜನೆಯಲ್ಲಿ ವ್ಯಾಲಿಡಿಟಿ ಮಾತ್ರವಲ್ಲದೆ ಇತರ ಹಲವು ಪ್ರಯೋಜನಗಳು ಲಭ್ಯ ಇವೆ.