BSNL Recharge Plan: ದುಬಾರಿ ರೀಚಾರ್ಜ್‌ಗಳಿಂದಾಗಿ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಟ್ರಾಯ್ ಆದೇಶದ ನಂತರ ಖಾಸಗಿ ಟೆಲಿಕಾಂ ಕಂಪೆನಿಗಳು ಕಾಲಿಂಗ್ ಮತ್ತು ಎಸ್ಎಮ್ಎಸ್ ಯೋಜನೆಗಳನ್ನು ಮಾತ್ರ ಹೊರತಂದಿವೆ. ಆದರೆ ಆ ರೀಚಾರ್ಜ್ ಬೆಲೆಗಳೂ ಸಹ ತುಂಬಾ ದುಬಾರಿಯಾಗಿವೆ. ಸರ್ಕಾರಿ ದೂರಸಂಪರ್ಕ ಕಂಪೆನಿ ಬಿಎಸ್ಎನ್ಎಲ್ ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಏಕೈಕ ಸರ್ಕಾರಿ ಕಂಪೆನಿಯಾದ ಬಿಎಸ್ಎನ್ಎಲ್ ಈ ಕೈಗೆಟುಕುವ ರೀಚಾರ್ಜ್ ಪ್ಲಾನ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಇದು ಕೇವಲ 900 ರೂ.ಗಿಂತ ಕಡಿಮೆ ಬೆಲೆಯಲ್ಲಿ 6 ತಿಂಗಳ ಮಾನ್ಯತೆಯೊಂದಿಗೆ ಡೇಟಾ ಮತ್ತು ಕಾಲಿಂಗ್ ಬೆನಿಫಿಟ್ಸ್ ನೀಡುತ್ತಿದೆ.
ಬಿಎಸ್ಎನ್ಎಲ್ ₹897 ರೀಚಾರ್ಜ್ ಪ್ಲಾನ್:ನೀವು ದೀರ್ಘಾವಧಿಯ ಸಿಂಧುತ್ವ, ಕಾಲ್, ಡೇಟಾ ಮತ್ತು ಎಸ್ಎಮ್ಎಸ್ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ಹುಡುಕುತ್ತಿದ್ದರೆ, ಬಿಎಸ್ಎನ್ಎಲ್ನ 897 ರೂ. ರೀಚಾರ್ಜ್ ನಿಮಗೆ ಉಪಯುಕ್ತವಾಗಬಹುದು.
ಕೇವಲ 897 ರೂ.ಗೆ ಬಿಎಸ್ಎನ್ಎಲ್ 180 ದಿನಗಳ ಸಿಂಧುತ್ವದೊಂದಿಗೆ ಬರುತ್ತದೆ. ಬಳಕೆದಾರರು ಈ ಪೂರ್ಣ ಸಿಂಧುತ್ವ ಅವಧಿಯಲ್ಲಿ ದೇಶಾದ್ಯಂತ ಫ್ರೀ ಕಾಲಿಂಗ್ ಬೆನಿಫಿಟ್ಸ್ ಪಡೆಯಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಗ್ರಾಹಕರು ಪ್ರತಿದಿನ 100 ಎಸ್ಎಮ್ಎಸ್ಗಳನ್ನೂ ಸಹ ಪಡೆಯುತ್ತಾರೆ. ಈ ರೀಚಾರ್ಜ್ ಪ್ಲಾನ್ನ ಬೆನಿಫಿಟ್ಸ್ಗಳು ಇಲ್ಲಿಗೆ ಮುಗಿಯುವುದಿಲ್ಲ. ಇದರೊಂದಿಗೆ ಸರ್ಕಾರಿ ಕಂಪೆನಿಯು 90GB ಡೇಟಾ ಸಹ ನೀಡುತ್ತಿದ್ದು, ಇದನ್ನು 180 ದಿನಗಳವರೆಗೆ ಬಳಸಬಹುದಾಗಿದೆ.
ಇದನ್ನೂ ಓದಿ:ಅತ್ಯಂತ ಕೈಗೆಟುಕುವ ದರದಲ್ಲಿ ಮಾಸಿಕ ರೀಚಾರ್ಜ್ ಪ್ಲಾನ್ ಘೋಷಿಸಿದ Jio