BMW iX Facelift: ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಬಿಎಂಡಬ್ಲ್ಯುನಿಂದ ಹೊಸ ಕಾರು ಬರಲಿದೆ. ಜರ್ಮನ್ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ತನ್ನ ಆಲ್-ಎಲೆಕ್ಟ್ರಿಕ್ SUV BMW iX ನ ಫೇಸ್‌ಲಿಫ್ಟೆಡ್ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಂಪನಿಯು ಈ ಕಾರನ್ನು ಹಲವಾರು ಅಪ್ಡೇಟ್ಗಳೊಂದಿಗೆ ತರಲಿದೆ. ಇದಕ್ಕೆ ಮಿಡ್-ಲೈಫ್-ಸೈಕಲ್ ಅಪ್ಡೇಟ್ ನೀಡಲಾಗಿದೆ. ಈ ಬದಲಾವಣೆಗಳಲ್ಲಿ ಅತಿದೊಡ್ಡ ನವೀಕರಣವೆಂದರೆ ಅದರ ಇಂಟಿರಿಯರ್. ಇದು ತನ್ನ ಎಲ್ಲ ರೂಪಾಂತರಗಳಲ್ಲಿ ಹೆಚ್ಚು ಪವರ್ಫುಲ್ ಆ್ಯಂಡ್ ಎಫಿಶಿಯಂಟ್ ಎಲೆಕ್ಟ್ರಿಕ್ ಮೋಟಾರ್ ಅನ್ನು ನೀಡುತ್ತದೆ.
BMW iX ಫೇಸ್‌ಲಿಫ್ಟ್ ಡಿಸೈನ್: ಈ ಹೊಸ BMW iX ಕಾರಿಗೆ ಹೊಸ ಫ್ರಂಟ್ ಫಾಸಿಯಾ ನೀಡಲಾಗಿದೆ. ಇದು ಮೊದಲಿಗಿಂತ ಸ್ವಲ್ಪ ಹೆಚ್ಚು ಮಜಿಲ್ಸ್ ಲುಕ್ನಲ್ಲಿ ಕಾಣುತ್ತದೆ. ಇದರ ಹೆಡ್‌ಲ್ಯಾಂಪ್‌ಗಳನ್ನು ಸಹ ಮಾರ್ಪಡಿಸಲಾಗಿದೆ. ಹಳೆಯ ಮಾದರಿಯಲ್ಲಿದ್ದ ಐ-ಬ್ರೋ ವಿನ್ಯಾಸಕ್ಕಿಂತ ಭಿನ್ನವಾಗಿದೆ. ಈಗ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಈಗ ಯೂನಿಟ್ನಲ್ಲಿ ಲಂಬವಾಗಿ ಜೋಡಿಸಲಾಗಿದೆ.
ಭಾರೀ ಪರಿಮಾಣದಲ್ಲಿ ಇದ್ದ ಇದರ ಕ್ಲೋಸ್ಡ್ - ಆಫ್ ಗ್ರಿಲ್ ವಿಭಿನ್ನ ಗ್ರಾಫಿಕ್ಸ್ ಅನ್ನು ಹೊಂದಿದೆ. ಆದ್ರೆ ಸಂಪೂರ್ಣ ಮುಂಭಾಗದ ಬಂಪರ್ ಅನ್ನು ಹೆಚ್ಚು ಆ್ಯಂಗ್ಯುಲರ್ ಯೂನಿಟ್ ಆಗಿ ಬದಲಾಯಿಸಲಾಗಿದೆ. ಇದು ಎಸ್ಯುವಿಯ ವಿಜುವಲ್ ಮಾಸ್ ಹೆಚ್ಚಿಸುತ್ತದೆ. ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಅಲಾಯ್ ವೀಲ್‌ಗಳನ್ನು ಹೊರತುಪಡಿಸಿ ಇಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಹಿಂಭಾಗದಲ್ಲಿನ ಬದಲಾವಣೆಗಳಲ್ಲಿ ಟೈಲ್ ಲ್ಯಾಂಪ್‌ಗಳು ಮತ್ತು ಬಂಪರ್ ಸೇರಿವೆ.
BMW iX ಫೇಸ್‌ಲಿಫ್ಟ್ ಇಂಟಿರಿಯರ್: ಈ ಕಾರಿನ ಒಳಭಾಗಕ್ಕೆ ಸಂಬಂಧಿಸಿದಂತೆ ಅದರ ಕ್ಯಾಬಿನ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಇದರ ಮೂಲ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು ಮುಂಭಾಗದ ಸೀಟುಗಳಲ್ಲಿ ದೊಡ್ಡ ಇಂಟಿಗ್ರೇಟೆಡ್ ಹೆಡ್‌ರೆಸ್ಟ್‌ಗಳನ್ನು ಹೊಂದಿದೆ. ಈ ಕಾರಿನ ಆಯ್ದ ರೂಪಾಂತರಗಳಲ್ಲಿ ನೀವು M ಸ್ಪೋರ್ಟ್ಸ್ ಪ್ಯಾಕೇಜ್‌ನೊಂದಿಗೆ M ಮಲ್ಟಿಫಂಕ್ಷನ್ ಸೀಟುಗಳನ್ನು ಸಹ ಆಯ್ಕೆ ಮಾಡಬಹುದು. ಆದರೂ, ಈ ಪ್ಯಾಕ್ ಉನ್ನತ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಇದರ ಜೊತೆಗೆ ಕಾರಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸೆಂಟ್ರಲ್ ಟಚ್‌ಸ್ಕ್ರೀನ್ ಈಗ BMW ಐಡ್ರೈವ್ 8.5 ಸಾಫ್ಟ್‌ವೇರ್ ಅನ್ನು ಒಳಗೊಂಡಿದೆ.