iphone 16 Delivery in 10 Minutes:ಆಪಲ್ ಪ್ರಿಯರು ನಿನ್ನೆಯಿಂದ ಐಫೋನ್ 16 ಅನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ದೇಶಾದ್ಯಂತ ಹಲವು ಆ್ಯಪಲ್ ಸ್ಟೋರ್ ಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಟಾಟಾಗ್ರೂಪ್ ಈ ಮೊಬೈಲ್ ಗಳನ್ನು ವೇಗವಾಗಿ ಡೆಲಿವರಿ ಮಾಡಲು ಹೊಸ ಪ್ಲಾನ್ ಸಿದ್ಧಪಡಿಸಿದೆ. ಐಫೋನ್ 16 ಅನ್ನು ಕೇವಲ ಹತ್ತು ನಿಮಿಷಗಳಲ್ಲಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಾಟಾಗ್ರೂಪ್ ತಮ್ಮ ಅಗತ್ಯ ವಸ್ತುಗಳ ಪೂರೈಕೆ ಅಪ್ಲಿಕೇಶನ್ ಆದ ಬಿಗ್ ಬಾಸ್ಕೆಟ್ನಲ್ಲಿ ಮಾರಾಟ ಪ್ರಾರಂಭಿಸಿದೆ. ಎಲೆಕ್ಟ್ರಾನಿಕ್ಸ್ ಮಾರಾಟ ವಿಭಾಗವು ಕ್ರೋಮಾದೊಂದಿಗೆ ನಿಮಿಷಗಳಲ್ಲಿ ಅವುಗಳನ್ನು ತಲುಪಿಸಲು ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ, ಐಫೋನ್ 16 ಅನ್ನು ಗ್ರಾಹಕರಿಗೆ 10 ನಿಮಿಷಗಳಲ್ಲಿ ಒದಗಿಸಲಾಗುತ್ತದೆ. ಬಿಗ್‌ಬಾಸ್ಕೆಟ್‌ನ ಸಿಇಒ ಹರಿ ಮೆನನ್ ಅವರು ಗ್ರಾಹಕರಿಗೆ ಐಫೋನ್ 16 ಅನ್ನು ತ್ವರಿತವಾಗಿ ತಲುಪಿಸುವ ಕುರಿತು ಮಾತನಾಡಿದರು. ಆಪಲ್ ಗ್ರಾಹಕರು ಇತ್ತೀಚಿನ ತಂತ್ರಜ್ಞಾನವನ್ನು ಯಾವುದೇ ಕಾಯುವಿಕೆ ಇಲ್ಲದೇ ಎಂಜಾಯ್ ಮಾಡುವಂತೆ ನೋಡಿಕೊಳ್ಳುವುದು ನಮ್ಮ ಗುರಿ ಎಂದು ಅವರು ಹೇಳಿದರು.
"ಇದು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ನಮ್ಮ ಮುನ್ನುಗ್ಗುವಿಕೆಯ ಪ್ರಾರಂಭವಾಗಿದೆ. ಸರಕುಗಳ ವೇಗದ ವಿತರಣೆಯ ಜೊತೆಗೆ, ನಾವು ನಮ್ಮ ಗ್ರಾಹಕರಿಗೆ ಯಾವುದೇ ಕಾಯುವ ಅವಧಿಯಿಲ್ಲದೆ ಅತ್ಯಾಧುನಿಕ ತಂತ್ರಜ್ಞಾನವನ್ನು ಆನಂದಿಸಲು ಅನುವು ಮಾಡಿಕೊಡುತ್ತೇವೆ. ನಾವು ಶೀಘ್ರದಲ್ಲೇ ಸುಧಾರಿತ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಚಯಿಸುತ್ತೇವೆ" ಎಂದು ಬಿಗ್‌ಬಾಸ್ಕೆಟ್‌ನ ಸಿಇಒ ಹರಿ ಮೆನನ್ ಹೇಳಿದರು.