ಹೈದರಾಬಾದ್: ಸೈಬರ್ ವಂಚನೆ ಮತ್ತು ಡಿಜಿಟಲ್ ಬಂಧನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದ ಇರುವುದು ಉಚಿತ. ಸೈಬರ್ ಕ್ರೈಂ ಪೊಲೀಸರು ಅಪರಿಚಿತರಿಂದ ಬರುವ ಫೋನ್ ಕರೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಇತ್ತೀಚಿಗಷ್ಟೇ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಅದರಲ್ಲೂ +37052529259, +56322553736, +255901130460, +94777455913, +37127913091 ಮುಂತಾದ ಸಂಖ್ಯೆಗಳ ಫೋನ್ ಬಂದರೆ ಅದನ್ನು ತೆಗೆದುಕೊಳ್ಳಬಾರದು ಎಂದು ಸೈಬರ್ ಕ್ರೈಂ ಪೊಲೀಸರು ಸಲಹೆ ಹಾಗೂ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ:2 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಆದ ಮಾಜಿ ಫೆಮಿನಾ ಮಿಸ್ ಇಂಡಿಯಾ: 99,000 ರೂ. ಸೈಬರ್ ವಂಚನೆ
ಪ್ರಾಥಮಿಕವಾಗಿ, (+371) (ಲಾಟ್ವಿಯಾ), +381 (ಸರ್ಬಿಯಾ), +370 (ಲಿಥುವೇನಿಯಾ), +255 (ಟಾಂಜಾನಿಯಾ), +375 (ಬೆಲಾರಸ್), +563 (ಲೋವಾ) ನಂತಹ ಕೋಡ್‌ಗಳೊಂದಿಗೆ ಪ್ರಾರಂಭವಾಗುವ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಿದರೆ ತಕ್ಷಣ ನಿಮ್ಮ ಫೋನ್ಗಳು ಹ್ಯಾಂಗ್ ಆಗುತ್ತವೆ ಎಂದು ವಿವರಿಸಲಾಗಿದೆ.