ATMOS 2024:ಇಂದಿನಿಂದ ನವೆಂಬರ್ 10ರವರೆಗೆ 'ATMOS 2024' ತಂತ್ರಜ್ಞಾನ ಜಾತ್ರೆ ಹೈದರಾಬಾದ್‌ನ ಬಿಟ್ಸ್ ಪಿಲಾನಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಇದು ವಾರ್ಷಿಕ ATMOS ಈವೆಂಟ್ ಆಗಿದ್ದು ವಿವಿಧ ಚಟುವಟಿಕೆಗಳೊಂದಿಗೆ ಯುವಜನತೆಯನ್ನು ಆಕರ್ಷಿಸಲಿದೆ. ರೋಬೋಟ್ ವಾರ್ಸ್, ಡ್ರೋನ್ ರೇಸಿಂಗ್ ಮತ್ತು ಹ್ಯಾಕಥಾನ್ನಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಟೆಕ್ ಎಕ್ಸ್‌ಪೋ, ಇನ್ನೋವೇಶನ್ಸ್, ರೇಸಿಂಗ್ ಮತ್ತು ಕ್ವಿಜ್ ಸ್ಪರ್ಧೆಗಳಿವೆ.
ಈ ವರ್ಷದ ವಿಶೇಷ ರೊಬೊಟ್ ವಾರ್ಸ್. ರಾಷ್ಟ್ರವ್ಯಾಪಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಯಾರಿಸಿದ 20ಕ್ಕೂ ಹೆಚ್ಚು ರೋಬೋಟ್‌ಗಳನ್ನು ಇದು ಒಳಗೊಂಡಿದೆ. ಡ್ರೋನ್ ರೇಸಿಂಗ್ ಕೂಡ ಪ್ರಮುಖ ಆಕರ್ಷಣೆಯಾಗಲಿದೆ. ಮೇಳದಲ್ಲಿ ವೃತ್ತಿಪರ ಎಫ್ಪಿವಿ ಚಾಲಕರೂ ಭಾಗವಹಿಸಲಿದ್ದಾರೆ.
ಎಟಿವಿ ರೇಸಿಂಗ್‌ನಲ್ಲಿ ವಿದ್ಯಾರ್ಥಿಗಳು ಆಟೋ ಎಕ್ಸ್‌ಪೋ ಮತ್ತು ಟೈಮ್ ಅಟ್ಯಾಕ್ ಸ್ಪರ್ಧೆಯ ಭಾಗವಾಗಿ ತಾವು ನಿರ್ಮಿಸಿದ ವಾಹನಗಳನ್ನು ಓಡಿಸುತ್ತಾರೆ. ದೇಶಾದ್ಯಂತ ಹತ್ತು ಎಟಿವಿ ತಂಡಗಳು ಸ್ಪರ್ಧಿಸಲಿವೆ. ವಿದ್ಯಾರ್ಥಿಗಳ ಕೋಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸುವ ಹ್ಯಾಕಥಾನ್ ಸಹ ಇರುತ್ತದೆ.