ನವದೆಹಲಿ: ತೈವಾನ್ ಮೂಲದ ತಂತ್ರಜ್ಞಾನ ಕಂಪನಿ ಆಸೂಸ್ ತನ್ನ ಹೊಸ ಡ್ಯುಯಲ್ ಸ್ಕ್ರೀನ್ ಲ್ಯಾಪ್ ಟಾಪ್ 'ಜೆನ್ ಬುಕ್ ಡ್ಯುಯೊ' ಅನ್ನು ಈಗ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಎಂದು ಮಂಗಳವಾರ ತಿಳಿಸಿದೆ. 1,59,990 ರೂ.ಗಳ ಬೆಲೆಯಲ್ಲಿ ಪ್ರಾರಂಭವಾಗುವ ಝೆನ್ ಬುಕ್ ಡ್ಯುಯೊ ಈಗ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಖರೀದಿಗೆ ಲಭ್ಯವಿದೆ.
"ಆಧುನಿಕ ಡ್ಯುಯಲ್ ಸ್ಕ್ರೀನ್ ಒಎಲ್ಇಡಿ ಡಿಸ್ ಪ್ಲೇ, ಬೇರ್ಪಡಿಸಬಹುದಾದ ಬ್ಲೂಟೂತ್ ಕೀಬೋರ್ಡ್ ಮತ್ತು ಬಹುಮುಖ ಕಿಕ್ ಸ್ಟ್ಯಾಂಡ್ನೊಂದಿಗೆ ಝೆನ್ ಬುಕ್ ಡ್ಯುಯೊ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಮರುವ್ಯಾಖ್ಯಾನಿಸುತ್ತದೆ" ಎಂದು ಆಸೂಸ್ ಇಂಡಿಯಾದ ಸಿಸ್ಟಮ್ ಬಿಸಿನೆಸ್ ಗ್ರೂಪ್ನ ಗ್ರಾಹಕ ಮತ್ತು ಗೇಮಿಂಗ್ ಪಿಸಿ ವಿಭಾಗದ ಉಪಾಧ್ಯಕ್ಷ ಅರ್ನಾಲ್ಡ್ ಸು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಝೆನ್ಬುಕ್ ಡ್ಯುಯೊ ಡ್ಯುಯಲ್ 14 ಇಂಚಿನ ಎಫ್ಎಚ್ಡಿ+ ಒಎಲ್ಇಡಿ ಟಚ್ ಸ್ಕ್ರೀನ್ಗಳನ್ನು ಹೊಂದಿದ್ದು, 16:10 ಅನುಪಾತ ಒಳಗೊಂಡಿದೆ. ಇದು 0.2ms ರೆಸ್ಪಾನ್ಸ್ ಟೈಮ್ ಮತ್ತು 60 ಹೆರ್ಟ್ಜ್ ರಿಫ್ರೆಶ್ ರೇಟ್ ನೀಡುತ್ತದೆ. ಕಂಪನಿಯ ಪ್ರಕಾರ, ಇದು ನಯವಾದ ಆಲ್-ಮೆಟಲ್ ವಿನ್ಯಾಸ ಹೊಂದಿದ್ದು, ಇದು ಕೇವಲ 1.35 ಕೆಜಿ (ಕೀಬೋರ್ಡ್ನೊಂದಿಗೆ 1.65 ಕೆಜಿ) ತೂಕ ಹೊಂದಿದ್ದು ಮತ್ತು 14.6 ಎಂಎಂನಷ್ಟು ತೆಳುವಾಗಿದೆ.
ಇದಲ್ಲದೆ ಬಳಕೆದಾರರಿಗೆ ಅಸಾಧಾರಣ ಕಾರ್ಯಕ್ಷಮತೆಯ ಅನುಭವ ನೀಡಲು ಲ್ಯಾಪ್ಟಾಪ್ ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್ 185 ಹೆಚ್, ಇಂಟೆಲ್ ಆರ್ಕ್ ಐಜಿಪಿಯು ಮತ್ತು ಇಂಟೆಲ್ ಎಐ ಬೂಸ್ಟ್ ಎನ್ಪಿಯುಗಳನ್ನು ಒಳಗೊಂಡಿದೆ.
ಝೆನ್ಬುಕ್ ಡ್ಯುಯೊ 2 x ಥಂಡರ್ ಬೋಲ್ಟ್ 4 ಯುಎಸ್ಬಿ ಟೈಪ್-ಸಿ ಪೋರ್ಟ್ಗಳು, ಯುಎಸ್ಬಿ 3.2 ಜೆನ್ 1 (ಟೈಪ್-ಎ), ಎಚ್ಡಿಎಂಐ 2.1 ಮತ್ತು 3.5 ಎಂಎಂ ಕಾಂಬೋ ಆಡಿಯೊ ಜ್ಯಾಕ್ ಸೇರಿದಂತೆ ಸಮಗ್ರ ಪೋರ್ಟ್ ಆಯ್ಕೆಯನ್ನು ಹೊಂದಿದೆ. ಇದು ವಿಭಿನ್ನ ಸಂಪರ್ಕ ಆಯ್ಕೆಗಳನ್ನು ಒದಗಿಸುತ್ತದೆ.
ಆಸೂಸ್ ಝೆನ್ ಬುಕ್ ಡ್ಯುಯೊ ಇತರ ವಿಶೇಷಣಗಳು:
- ಪ್ರೊಸೆಸರ್: ಇಂಟೆಲ್ ಕೋರ್ ಅಲ್ಟ್ರಾ 9 (185H) / ಕೋರ್ ಅಲ್ಟ್ರಾ 7 (155H) / ಕೋರ್ ಅಲ್ಟ್ರಾ 5 (125H)
- ಗ್ರಾಫಿಕ್ಸ್: ಇಂಟೆಲ್ ಆರ್ಕ್ ಗ್ರಾಫಿಕ್ಸ್
- RAM: 32GB LPDDR5x ವರೆಗೆ
- ಸ್ಟೋರೇಜ್: 2TB PCle 4.0 NVMe M.2 SSD ವರೆಗೆ
- ಪೋರ್ಟ್ ಗಳು: 2 x ಥಂಡರ್ ಬೋಲ್ಟ್ 4 USB-C, 1 x USB 3.2 Gen1 ಟೈಪ್-A, 1 x ಪೂರ್ಣ ಗಾತ್ರದ HDMI 2.1, 1x 3.5mm ಆಡಿಯೋ ಜ್ಯಾಕ್
- ಸ್ಪೀಕರ್ ಗಳು: ಡ್ಯುಯಲ್ ಸ್ಪೀಕರ್ಗಳು, ಡಾಲ್ಬಿ ಅಟ್ಮೋಸ್, ಹರ್ಮನ್ ಕಾರ್ಡನ್-ಪ್ರಮಾಣೀಕೃತ
- ಕ್ಯಾಮೆರಾ: ಎಎಸ್ಯುಎಸ್ ಐಸೆನ್ಸ್ ಕ್ಯಾಮೆರಾ, ಆಂಬಿಯೆಂಟ್ ಲೈಟ್ ಮತ್ತು ಕಲರ್ ಸೆನ್ಸರ್ ಹೊಂದಿರುವ ಎಫ್ಎಚ್ಡಿ 3ಡಿಎನ್ಆರ್ ಐಆರ್ ಕ್ಯಾಮೆರಾ
- ಬ್ಯಾಟರಿ: 75W ಲಿಥಿಯಂ-ಪಾಲಿಮರ್ ಬ್ಯಾಟರಿ
- ಚಾರ್ಜಿಂಗ್: 65W ಟೈಪ್-ಸಿ ಪವರ್ ಅಡಾಪ್ಟರ್
- ತೂಕ: 1.35 ಕೆಜಿ (ಕೀಬೋರ್ಡ್ ಇಲ್ಲದೆ), 1.65 ಕೆಜಿ (ಕೀಬೋರ್ಡ್ ನೊಂದಿಗೆ)
ಇದನ್ನೂ ಓದಿ : 2024ರಲ್ಲಿ 55 ಸಾವಿರ ಉದ್ಯೋಗ ಸೃಷ್ಟಿಸಿದ ಎಜ್ಯುಟೆಕ್ ಕಂಪನಿ ಅಪ್ಗ್ರಾಡ್ - UPGRAD