ಕರ್ನಾಟಕ

karnataka

ETV Bharat / technology

ಒಂಟಿತನ ಕಾಡುತ್ತಿದೆಯಾ? ನಿಮಗೆ ಸಂಗಾತಿಯಾಗಬಲ್ಲದು ಎಐ; ಹೊಸ ಆವಿಷ್ಕಾರ - AI For Mental Health - AI FOR MENTAL HEALTH

ಒಂಟಿತನ ಕಾಡುತ್ತಿದ್ದವರಿಗೆ ಎಐ ಸಂಗಾತಿಯಾಗಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಂಟಿತನ ಕಾಡುತ್ತಿದೆಯಾ? ನಿಮಗೆ ಸಂಗಾತಿಯಾಗಬಲ್ಲದು ಎಐ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : May 27, 2024, 12:33 PM IST

ನವದೆಹಲಿ: ಮಾನವರ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂದು ರೊಬೊಟಿಕ್ಸ್ ತಜ್ಞರು ಹೇಳಿದ್ದಾರೆ. ಒಂಟಿತನದಿಂದ ಮಾನವರಲ್ಲಿ ಇತರ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ಗಮನಾರ್ಹ.

ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯದ ಟೋನಿ ಪ್ರೆಸ್ಕಾಟ್ 'ದಿ ಸೈಕಾಲಜಿ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್' ಹೆಸರಿನ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಸಾಮಾಜಿಕ ಸಂಪರ್ಕದ ರೂಪದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮಾನವರೊಂದಿಗೆ ಸಂಬಂಧ ಸಾಧಿಸಬಹುದು ಎಂದು ಈ ಪುಸ್ತಕದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಜನರು ಒಂಟಿತನವನ್ನು ಅನುಭವಿಸಿದಾಗ, ಅವರ ಆತ್ಮವಿಶ್ವಾಸ ಪಾತಾಳಕ್ಕೆ ಕುಸಿಯುತ್ತದೆ. ಇದರ ಪರಿಣಾಮದಿಂದ ಅವರು ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತದೆ. ಆದರೆ ಎಐ ತಂತ್ರಜ್ಞಾನವು ಈ ಒಂಟಿತನದ ಸರಣಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅವರ ಸಾಮಾಜಿಕ ಸಂಪರ್ಕಗಳನ್ನು ಮತ್ತೆ ಬೆಳೆಸಿಕೊಳ್ಳಲು ಮತ್ತು ಸುಧಾರಿಸಲು ಒಂದು ಮಾರ್ಗವನ್ನು ನೀಡುತ್ತದೆ ಎಂದು ಕಾಗ್ನಿಟಿವ್ ರೊಬೊಟಿಕ್ಸ್ ಪ್ರಾಧ್ಯಾಪಕ ಟೋನಿ ಹೇಳಿದರು.

ತಮ್ಮ ಜೀವನದಲ್ಲಿ ಒಂಟಿತನ ಕಾಡುತ್ತಿದೆ ಎಂದು ಅನೇಕರು ಹೇಳುತ್ತಾರೆ. ಇಂಥವರೊಂದಿಗೆ ಪರಸ್ಪರ ಸಾಮಾಜಿಕ ಸಂವಹನವನ್ನು ಉತ್ತೇಜಿಸುವ ಮತ್ತು ವೈಯಕ್ತಿಕಗೊಳಿಸುವ ಎಐ ಒಡನಾಟ ಏರ್ಪಡಿಸುವುದರಿಂದ ಲಾಭವಾಗಬಹುದು ಎಂದು ಟೋನಿ ಹೇಳಿದರು.

"ಎಐ ಒಡನಾಟವು ಸ್ವಯಂ-ಮೌಲ್ಯದ ಭಾವನೆಗಳನ್ನು ಮೇಲ್ಮಟ್ಟಕ್ಕೆ ಏರಿಸುವ ಮೂಲಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಕಾಪಾಡಿಕೊಳ್ಳಲು ಅಥವಾ ಸುಧಾರಿಸಲು ಸಹಾಯ ಮಾಡುವ ಮೂಲಕ ಒಂಟಿತನದ ಚಕ್ರವನ್ನು ಮುರಿಯಲು ಸಹಾಯ ಮಾಡುತ್ತದೆ. ಹೀಗಿರುವಾಗ ಎಐಗಳೊಂದಿಗಿನ ಸಂಬಂಧಗಳು ಮಾನವ ಮತ್ತು ಇತರ ಕೃತಕ ಬುದ್ಧಿಮತ್ತೆಗಳೊಂದಿಗಿನ ಒಡನಾಟವನ್ನು ಹೊಂದಲು ಜನರಿಗೆ ಸಹಾಯ ಮಾಡಬಹುದು" ಎಂದು ಅವರು ಹೇಳಿದರು. ಮನೋವಿಜ್ಞಾನ ಮತ್ತು ಎಐ ಸಹಭಾಗಿತ್ವವು ನೈಸರ್ಗಿಕ ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ ಎಂದು ಅವರು ತಿಳಿಸಿದರು.

ಕೃತಕ ಬುದ್ಧಿಮತ್ತೆ ಅಥವಾ ಎಐ ಇದು ಮಾನವ ಬುದ್ಧಿಮತ್ತೆ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಅನುಕರಿಸುವ ಕಂಪ್ಯೂಟರ್​ಗಳು ಮತ್ತು ಯಂತ್ರಗಳನ್ನು ಶಕ್ತಗೊಳಿಸುವ ತಂತ್ರಜ್ಞಾನವಾಗಿದೆ. ಸ್ವಂತವಾಗಿ ಅಥವಾ ಇತರ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲ್ಪಟ್ಟ ಎಐ ಮಾನವ ಬುದ್ಧಿಮತ್ತೆ ಅಥವಾ ಮಾನವ ಹಸ್ತಕ್ಷೇಪದ ಅಗತ್ಯವಿರುವ ಕಾರ್ಯಗಳನ್ನು ತಾನಾಗಿಯೇ ನಿರ್ವಹಿಸಬಹುದು. ಕಂಪ್ಯೂಟರ್ ವಿಜ್ಞಾನದ ಕ್ಷೇತ್ರವಾಗಿರುವ ಎಐ ಯಂತ್ರ ಕಲಿಕೆ ಮತ್ತು ಡೀಪ್ ಲರ್ನಿಂಗ್​ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ವರ್ಷಕ್ಕೆ ಶೇ 5ರಷ್ಟು ಪ್ಲಾಸ್ಟಿಕ್ ಮಾಲಿನ್ಯ ತಗ್ಗಿಸಿದರೆ ಸ್ವಚ್ಛವಾಗಲಿವೆ ಸಮುದ್ರಗಳು: ವರದಿ - REDUCING PLASTIC POLLUTION

ABOUT THE AUTHOR

...view details