ಕರ್ನಾಟಕ

karnataka

ETV Bharat / technology

ಐಫೋನ್​ ರಫ್ತಿನಲ್ಲಿ ದಾಖಲೆ ಬರೆದ ಭಾರತ; ₹ 60 ಸಾವಿರ ಕೋಟಿ ಮೌಲ್ಯದ ಸಾಧನಗಳು ಎಕ್ಸ್​ಪೋರ್ಟ್​! - APPLE IPHONE EXPORTS

ಕಳೆದ ಏಳು ತಿಂಗಳಲ್ಲಿ ನಡೆದ ಐಫೋನ್​ ರಫ್ತು ವಾಹಿವಾಟಿನಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದೆ. ಸುಮಾರು 60 ಸಾವಿರ ಕೋಟಿ ಮೌಲ್ಯದ ಐಫೋನ್​ಗಳು ರಫ್ತಾಗಿವೆ.

IPHONE EXPORTS FROM INDIA  APPLE IPHONE EXPORTS RECORD  APPLE
ಐಫೋನ್​ ರಫ್ತು ವಿಷಯದಲ್ಲಿ ದಾಖಲೆ ಬರೆದ ಭಾರತ (IANS)

By ETV Bharat Tech Team

Published : Nov 14, 2024, 1:43 PM IST

Apple iPhone Exports:ಆಪಲ್​ನ ಐಫೋನ್​ ರಫ್ತು ವಿಷಯದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ಸುಮಾರು 60 ಸಾವಿರ ಕೋಟಿ ಮೌಲ್ಯದ ಐಫೋನ್​ಗಳು ಭಾರತದಿಂದ ರಫ್ತು ಆಗಿರುವುದು ಬೆಳಕಿಗೆ ಬಂದಿದೆ.

ಆಪಲ್​ ಪ್ರಸ್ತಕ ಹಣಕಾಸು ವಿಷಯದಲ್ಲಿ ದಾಖಲೆಯೊಂದು ಬರೆದಿದೆ. ಐಫೋನ್ ರಫ್ತು ವಿಷಯದಲ್ಲಿ ಆಪಲ್​ ಭಾರತದಿಂದ ಸುಮಾರು 60 ಸಾವಿರ ಕೋಟಿ ಮೌಲ್ಯದ ಸಾಧನಗಳನ್ನು ರಫ್ತು ಮಾಡಿದೆ. ಆಪಲ್​ ಈ ದಾಖಲೆಯನ್ನು ಬರೀ ಏಳು ತಿಂಗಳಲ್ಲಿ ಮಾಡಿರುವುದು ಗಮನಿಸಬೇಕಾದ ಅಂಶವಾಗಿದೆ.

ಏಪ್ರಿಲ್​ನಿಂದ ಅಕ್ಟೋಬರ್ ಅವಧಿಯಲ್ಲಿ ಉದ್ಯಮದ ಅಂಕಿಅಂಶಗಳ ಪ್ರಕಾರ, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಸುಮಾರು 60 ಸಾವಿರ ಕೋಟಿ (7 ಬಿಲಿಯನ್‌ ಡಾಲರ್​ಗಿಂತ ಹೆಚ್ಚು) ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಅಂದ್ರೆ ಪ್ರತಿ ತಿಂಗಳು ಸುಮಾರು 8,450 ಕೋಟಿ ಮೌಲ್ಯದ ಐಫೋನ್​ಗಳು ರಫ್ತು ಆಗಿವೆ.

ಈ ಬಾರಿ ಕಂಪನಿಯು ತನ್ನ ಐಫೋನ್​ 15 ಮತ್ತು ಐಫೋನ್​ 14 ಸೀರಿಸ್​ ಇತರ ಜನಪ್ರಿಯ ಮಾದರಿಗಳನ್ನು ಹೊರತುಪಡಿಸಿ ಹೊಸದಾಗಿ ಬಿಡುಗಡೆಯಾದ ಐಫೋನ್​ 16 ಮಾದರಿಗಳನ್ನು ಭಾರತದಿಂದ ರಫ್ತು ಮಾಡುತ್ತಿದೆ.

ಕಳೆದ ಹಣಕಾಸು ವರ್ಷದಲ್ಲಿ (FY24) ಆಪಲ್ 10 ಬಿಲಿಯನ್​ ಡಾಲರ್​ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಈ ಹಣಕಾಸು ವರ್ಷದಲ್ಲಿ ತಂತ್ರಜ್ಞಾನದ ದೈತ್ಯ ಆಪಲ್​ ಈಗಾಗಲೇ ಐದು ತಿಂಗಳುಗಳ ಅಂತರದಲ್ಲಿ ಆ ಅಂಕಿ ಅಂಶದ ಶೇಕಡ 70ರಷ್ಟು ಸಾಧಿಸಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಗಳ ಮೇಲೆ ಈ ಹೊಸ ರಫ್ತು ದಾಖಲೆ ಸ್ಥಾಪಿಸಿದೆ.

ಆಪಲ್ ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ 14 ಬಿಲಿಯನ್​ ಡಾಲರ್ ಮೌಲ್ಯದಷ್ಟು ಐಫೋನ್‌ಗಳು ಮತ್ತು ಅದರ ಬಿಡಿಭಾಗಗಳನ್ನು ಉತ್ಪಾದಿಸಿದೆ. 10 ಬಿಲಿಯನ್​ ಡಾಲರ್​ ಮೌಲ್ಯದ ಸಾಧನಗಳನ್ನು ರಫ್ತು ಮಾಡಿದೆ. ಭಾರತದಿಂದ ಐಫೋನ್ ರಫ್ತು 2022-23 ರಲ್ಲಿ 6.27 ಬಿಲಿಯನ್​ ಡಾಲರ್​ದಿಂದ 2023-24 ರಲ್ಲಿ 10 ಬಿಲಿಯನ್​ ಡಾಲರ್​ ಮೌಲ್ಯದವರೆಗೆ ದಾಟಿದೆ. ಒಟ್ಟಾರೆಯಾಗಿ ಕಳೆದ ಹಣಕಾಸು ವರ್ಷದಲ್ಲಿ (FY24) ಐಫೋನ್ ತಯಾರಕರ ಭಾರತದ ಕಾರ್ಯಾಚರಣೆಗಳು 23.5 ಬಿಲಿಯನ್​ ಡಾಲರ್​ ಮೌಲ್ಯವನ್ನು ತಲುಪಿದೆ.

ಜುಲೈದಿಂದ ಸೆಪ್ಟೆಂಬರ್ ಅವಧಿಯಲ್ಲಿ ಟಿಮ್ ಕುಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆಯನ್ನು ಬರೆದಿದೆ. ಇದರ ಬಗ್ಗೆ ಕುಕ್​ ಸಂತಸ ವ್ಯಕ್ತಪಡಿಸಿದ್ದರು.

ಓದಿ:ಲರ್ನ್​ ಅಬೌಟ್: ಹೊಸ ಕಲಿಕಾ ಟೂಲ್​ ಪರಿಚಯಿಸಿದ ಗೂಗಲ್

ABOUT THE AUTHOR

...view details