ಕರ್ನಾಟಕ

karnataka

ETV Bharat / technology

ಇಂದಿನಿಂದ ಐಫೋನ್​ 16 ಮಾರುಕಟ್ಟೆಯಲ್ಲಿ ಲಭ್ಯ; ಆ್ಯಪಲ್​ ಸ್ಟೋರ್​ಗಳ ಮುಂದೆ ಜನರ ಕ್ಯೂ! - iPhone 16 Sale - IPHONE 16 SALE

iPhone 16 Series Sale Kicks Off: iPhone 16 ಮೊಬೈಲ್‌ ಫೋನ್‌ಗಳ ಮಾರಾಟ ಇಂದಿನಿಂದ ಶುರುವಾಗಿದೆ. ಗ್ರಾಹಕರು ಮುಂಬೈ ಮತ್ತು ದೆಹಲಿಯ ಆ್ಯಪಲ್ ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.

APPLE IPHONE 16  APPLE IPHONE 16 PRICE IN INDIA  APPLE IPHONE 16 FEATURES  APPLE IPHONE 16 SALE START
ಐಫೋನ್​ 16 (ANI)

By ETV Bharat Tech Team

Published : Sep 20, 2024, 10:06 AM IST

iPhone 16 Series Sale Kicks Off: iPhone 16 ಮೊಬೈಲ್‌ ಫೋನ್‌ಗಳ ಮಾರಾಟ ಇಂದಿನಿಂದ ಆರಂಭವಾಗಿದೆ. ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ಆಧಾರದ ಮೇಲೆ Apple Intelligence (AI) ಚಾಲಿತವಾಗಿರುವ ಈ ಫೋನ್‌ಗಳನ್ನು ಖರೀದಿಸಲು ಗ್ರಾಹಕರು ಆ್ಯಪಲ್ ಸ್ಟೋರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮುಂಬೈ, ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಆ್ಯಪಲ್‌ಪ್ರಿಯರು ಖರೀದಿಗೆ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ.

iPhone 16, iPhone 16 Plus, iPhone 16 Pro ಮತ್ತು iPhone Pro Max ಎಂಬ ನಾಲ್ಕು ಮಾದರಿಗಳನ್ನು ಆ್ಯಪಲ್ ಹೊರತಂದಿದೆ. ಇವುಗಳಲ್ಲಿ ಸುಧಾರಿತ ಕ್ಯಾಮೆರಾ ನಿಯಂತ್ರಣ ಬಟನ್ ಮತ್ತು ಆ್ಯಕ್ಷನ್ ಬಟನ್ ಎಂಬೆರಡು ಹೊಸ ಬಟನ್‌ಗಳನ್ನು ಪರಿಚಯಿಸಿದೆ. ಹೊಸ ವಿಶೇಷ ವಿನ್ಯಾಸದ A18 ಚಿಪ್ ಅಳವಡಿಸಲಾಗಿದೆ.

iPhone 16 ಬೆಲೆ, ವೈಶಿಷ್ಟ್ಯಗಳು:

Apple iPhone 16 ಸರಣಿಯಲ್ಲಿ ಹಲವು ವಿಭಿನ್ನ ವೈಶಿಷ್ಟ್ಯಗಳಿವೆ. ಹೊಸ ಸರಣಿಯ ಫೋನ್‌ಗಳು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆ. ಗ್ಲಾಸ್ ಬ್ಯಾಕ್ ಫೋನ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಕಂಪನಿ ತಿಳಿಸಿದೆ.

ಐಫೋನ್ 16 ಡಿಸ್​ಪ್ಲೇ 6.1 ಇಂಚು ಇದೆ. ಇದನ್ನು ವೆನಿಲ್ಲಾ ರೂಪಾಂತರದೊಂದಿಗೆ ವಿನ್ಯಾಸಗೊಳಿಸಲಾಗಿದೆ. iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬ್ರೈಟ್​ನೆಸ್​ ಅನ್ನು 2000 ನಿಟ್‌ಗಳವರೆಗೆ ಹೆಚ್ಚಿಸಬಹುದು.

ಐಫೋನ್ 16 ಪ್ಲಸ್ ಡಿಸ್​ಪ್ಲೇ 6.7 ಇಂಚು ಇದೆ. ಸೂಪರ್ ರೆಟಿನಾ XDR OLED ಡಿಸ್​ಪ್ಲೇ ಹೊಂದಿದೆ. ಹಿಂಭಾಗದಲ್ಲಿ 48 MP ವೈಡ್-ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ನಿಯಂತ್ರಣ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ತೆಗೆಯಲು ಸುಧಾರಿತ ವೈಶಿಷ್ಟ್ಯವಿದೆ.

ಬೆಲೆಗಳ ವಿವರ:ಐಫೋನ್ 16ನಲ್ಲಿ 'AAA ಗೇಮ್ಸ್' ಆಡುವ ಅವಕಾಶವಿದೆ. ಮೊದಲು ಈ ವೈಶಿಷ್ಟ್ಯ ಪ್ರೊ ಮಾದರಿಗಳಲ್ಲಿ ಮಾತ್ರ ಸಿಗುತ್ತಿತ್ತು. ಬೆಲೆಗಳು ಈ ಕೆಳಗಿನಂತಿವೆ.

  • iPhone 16 ಆರಂಭಿಕ ಬೆಲೆ 79,900 ರೂ
  • iPhone 16 Plus ಆರಂಭಿಕ ಬೆಲೆ 89,900 ರೂ
  • iPhone 16 Pro ಆರಂಭಿಕ ಬೆಲೆ 1,19,900 ರೂ
  • iPhone 16 Pro Max ನ ಆರಂಭಿಕ ಬೆಲೆ ರೂ.1,44,900.

ಇದನ್ನೂ ಓದಿ:'ಮೇಡ್ ಇನ್ ಇಂಡಿಯಾ' ಐಫೋನ್ 16ಗಾಗಿ ಹೆಚ್ಚಿತ್ತಿರುವ ಆರ್ಡರ್; ರಫ್ತು ದಾಖಲೆ ಬ್ರೇಕ್​ ಮಾಡಲು ಭಾರತ ಸಿದ್ಧ! - Made In India

ABOUT THE AUTHOR

...view details