ಕರ್ನಾಟಕ

karnataka

ETV Bharat / technology

ಆ್ಯಪಲ್​, ಗೂಗಲ್​ ತಮ್ಮ ಫೋನ್‌ಗಳ ಹಾರ್ಡ್​ವೇರ್​ಗೆ ಖರ್ಚು ಮಾಡಿರುವ ಹಣವೆಷ್ಟು? - PRODUCTION COSTS OF MOBILES

ಆ್ಯಪಲ್​ ಮತ್ತು ಗೂಗಲ್​ ತಮ್ಮ ಇತ್ತೀಚಿನ ಫೋನ್​ಗಳ ಹಾರ್ಡ್​ವೇರ್​ಗಾಗಿ ಎಷ್ಟು ಹಣ ಖರ್ಚು ಮಾಡಿವೆ ಎಂಬುದು ಬಹಿರಂಗವಾಗಿದೆ.

APPLE IPHONE 16 PRO  GOOGLE PIXEL 9 PRO  APPLE  GOOGLE
ಆ್ಯಪಲ್​-ಗೂಗಲ್​ ತಮ್ಮ ಮೊಬೈಲ್‌ ಹಾರ್ಡ್​ವೇರ್​ಗಾಗಿ ಖರ್ಚು ಮಾಡಿರುವ ಹಣವೆಷ್ಟು? (Apple and Google)

By ETV Bharat Tech Team

Published : Nov 7, 2024, 11:58 AM IST

ಆ್ಯಪಲ್​ ಮತ್ತು ಗೂಗಲ್​ ಕಂಪನಿಗಳು ತಮ್ಮ ಫೋನ್​ಗಳಾದ ಐಫೋನ್​ ಮತ್ತು ಪಿಕ್ಸೆಲ್ ಹಾರ್ಡ್​ವೇರ್‌ಗಾಗಿ ಎಷ್ಟು ಹಣ ಖರ್ಚು ಮಾಡುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?. ನಿಕೈನ (Nikkei) ಹೊಸ ವರದಿ, ವೆಚ್ಚದ ಕುರಿತು ಮಾಹಿತಿ ನೀಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಆ್ಯಪಲ್​ ಮತ್ತು ಗೂಗಲ್​ ಕಂಪನಿಗಳ ಪ್ರಮುಖ ಫೋನ್‌ಗಳು ದುಬಾರಿಯಾಗಿವೆ. ಅವುಗಳಲ್ಲಿ ಹೆಚ್ಚಿನವುಗಳಿಗೆ ಈಗ 1 ಲಕ್ಷ ರೂಪಾಯಿಗಿಂತಲೂ ಅಧಿಕ ಬೆಲೆ ಇದೆ. ಈ ಕಂಪನಿಗಳು ಬೆಲೆ ಏರಿಕೆಗಳಿಗೆ ಹಣದುಬ್ಬರ ಮತ್ತು ಮೋಸ್ಟ್​ ಪವರ್​ಫುಲ್​ ಚಿಪ್‌ಗಳನ್ನು ತಯಾರಿಸುವ ವೆಚ್ಚಗಳೇ ಕಾರಣವೆಂದು ಹೇಳಿವೆ.

ಗೂಗಲ್ ಪಿಕ್ಸೆಲ್​ 8 ಪ್ರೋಗೆ ಹೋಲಿಸಿದರೆ ಪಿಕ್ಸೆಲ್​ 9 ಪ್ರೋನ BOM ವೆಚ್ಚ ಶೇ 11ರಷ್ಟು ಕಡಿಮೆಯಾಗಿದೆ. ಇದು ಪಿಕ್ಸೆಲ್​ 9 ಪ್ರೋ ಸ್ಮಾಲ್​ ಸ್ಕ್ರೀನ್​ ಮತ್ತು ಬ್ಯಾಟರಿ ಹೊಂದಿರುವುದರಿಂದ ತಾಂತ್ರಿಕವಾಗಿ ಅನ್​ಫೇರ್​ ಹೋಲಿಕೆಯಾಗಿದೆ. ಪಿಕ್ಸೆಲ್​ 9 ಪ್ರೋನ Tensor G4 ಚಿಪ್‌ನ ಬೆಲೆ 80 (ರೂ 6,800) ಡಾಲರ್​ ಎಂದು ಹೇಳಲಾಗುತ್ತದೆ. ಆದರೆ ಸ್ಯಾಮ್​ಸಂಗ್​ M14 ಡಿಸ್‌ಪ್ಲೇ ಮತ್ತು ಕ್ಯಾಮೆರಾ ಕ್ರಮವಾಗಿ 75 ಡಾಲರ್​ (ರೂ 6,300) ಮತ್ತು 61 ಡಾಲರ್​ (ರೂ 5,100) ಬೆಲೆಯಲ್ಲಿದೆ.

ಐಫೋನ್​ 16 ಪ್ರೋನ BOM ಅದರ ಪೂರ್ವವರ್ತಿಯಾದ ಐಫೋನ್​ 15 ಪ್ರೋಗಿಂತ ಶೇ 6ರಷ್ಟು ಹೆಚ್ಚಾಗಿದೆ. A18 ಪ್ರೋ ಚಿಪ್‌ಸೆಟ್‌ಗಾಗಿ Apple 135 ಡಾಲರ್​ (ರೂ 11,400) ಖರ್ಚು ಮಾಡುತ್ತದೆ ಎಂದು ವರದಿ ಹೇಳಿದೆ. ಆದರೆ ಸ್ಕ್ರೀನ್ ಮತ್ತು ಕ್ಯಾಮೆರಾ ಕ್ರಮವಾಗಿ 110 ಡಾಲರ್​ (ರೂ 9,300) ಮತ್ತು 91 ಡಾಲರ್​ (ರೂ 7,700) ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಆ್ಯಪಲ್ ಮತ್ತು ಗೂಗಲ್ ತಮ್ಮ ಇತ್ತೀಚಿನ 'ಪ್ರೊ' ಫೋನ್‌ಗಳನ್ನು ಉತ್ಪಾದನಾ ಬೆಲೆಗಿಂತಲೂ ದ್ವಿಗುಣ ಬೆಲೆಗೆ ಮಾರಾಟ ಮಾಡುತ್ತಿವೆ. ಹೀಗಿದ್ದರೂ ಇದು ಶಿಪ್ಪಿಂಗ್, ಡೆಲಿವರಿ, ರಿಸರ್ಚ್​ ಮತ್ತು ಡೆವಲಪ್​ಮೆಂಟ್​, ಮಾರ್ಕೆಟಿಂಗ್ ಮತ್ತು ಇತರವುಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ:16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಲು ಹೊರಟ ಆಸ್ಟ್ರೇಲಿಯಾ

ABOUT THE AUTHOR

...view details