ಹೈದರಾಬಾದ್:ಐಫೋನ್ 14 ಮೊಬೈಲ್ಗಳ ಕ್ಯಾಮೆರಾಗದಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಲು ಆ್ಯಪಲ್ ಸಂಸ್ಥೆಯು ಉಚಿತ ಆಫರ್ ನೀಡಿದೆ. 2023 ರ ಏಪ್ರಿಲ್ 10 ರಿಂದ ಏಪ್ರಿಲ್ 28, 2024 ರ ನಡುವೆ ತಯಾರಿಸಲಾದ ಮೊಬೈಲ್ಗಳನ್ನು ದುರಸ್ತಿ ಮಾಡಿಕೊಡುವುದಾಗಿ ಸಂಸ್ಥೆ ತಿಳಿಸಿದೆ.
ಸಂಸ್ಥೆ ತಿಳಿಸಿದ ನಿಗದಿತ ಅವಧಿಯಲ್ಲಿ ಐಫೋನ್ 14 ಮಾದರಿಯ ಮೊಬೈಲ್ಗಳ ಕ್ಯಾಮೆರಾದಲ್ಲಿ ದೋಷ ಉಂಟಾಗಿದೆ. ಕ್ಯಾಮೆರಾದಿಂದ ತೆಗೆದ ಚಿತ್ರವು ಪ್ರಿವ್ಯೂವ್ (image preview) ಆಗುತ್ತಿಲ್ಲ ಎಂಬುದು ಗ್ರಾಹಕರ ಆರೋಪವಾಗಿದೆ. ಇಂತಹ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಉಚಿತವಾಗಿ ಸೇವೆ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಉಚಿತ ಸೇವೆ ಪಡೆಯಲು ಹೀಗೆ ಮಾಡಿ; ನಿಮ್ಮ iPhone 14 Plus ಮಾದರಿಯ ಕ್ಯಾಮೆರಾದಲ್ಲಿ ದೋಷ ಉಂಟಾಗಿದ್ದರೆ, ಅದನ್ನು ಉಚಿತವಾಗಿ ದುರಸ್ತಿ ಮಾಡಲು ಅಧಿಕೃತ ಸೇವಾ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಬರಬಹುದು. ನಿಮ್ಮ ಮೊಬೈಲ್ ಉಚಿತ ದುರಸ್ತಿಗೆ ಅರ್ಹವಾಗಿದೆಯೇ ಎಂದು ಪರಿಶೀಲಿಸಲು, ನೀವು Apple ನ ನಿಗದಿತ ಪುಟಕ್ಕೆ ಹೋಗಬೇಕು. ಅಲ್ಲಿ ನಿಮ್ಮ ಫೋನ್‌ನ ಸರಣಿ ಸಂಖ್ಯೆಯನ್ನು ನಮೂದಿಸಬೇಕು. ಜೊತೆಗೆ ಈ ಕೆಳಗಿನ ಹಂತಗಳನ್ನೂ ಪೂರೈಸಿ.
ಮೊದಲನೆಯದಾಗಿ, ನಿಮ್ಮ ಫೋನ್‌ನ ಸರಣಿ ಸಂಖ್ಯೆಯನ್ನು ಕಂಡುಕೊಳ್ಳಿ. ಇದಕ್ಕಾಗಿ ನೀವು ಸೆಟ್ಟಿಂಗ್‌ಗೆ ತೆರಳಿ, ಬಳಿಕ ಜನರಲ್, ಅಬೌಟ್ಗೆ (about) ಹೋಗಬೇಕು. ಇಲ್ಲಿ, ನಿಮ್ಮ iPhone 14 Plus ನ ಸರಣಿ ಸಂಖ್ಯೆ ಕಾಣಲಿದೆ. ಈ ಸಂಖ್ಯೆಯನ್ನು ನಿಮ್ಮ ಕ್ಲಿಪ್‌ಬೋರ್ಡ್‌ಗೆ ನಕಲಿಸಲು ದೀರ್ಘವಾಗಿ ಒತ್ತಿರಿ.