Android 15 Update For Samsung:ವಿಶ್ವದಾದ್ಯಂತ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಹೊಸ ಅಪ್‌ಡೇಟ್ ಆಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಗೂಗಲ್ ಪಿಕ್ಸೆಲ್ ಗ್ರಾಹಕರು ಸದ್ಯ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದಾರೆ. ಗೂಗಲ್ ಪಿಕ್ಸೆಲ್ ಫೋನ್ಗಳ ಜೊತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ಸೀರಿಸ್ ಸ್ಮಾರ್ಟ್ಫೋನ್ಗಳು ಪ್ರಚಲಿತ ಆಗಿರುತ್ತವೆ. ಇನ್ನು ಹೊಸ S25 ಸೀರಿಸ್ನ ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ 15 ಆಧಾರಿತ UI 7 ಆಪರೇಟಿಂಗ್ ಸಿಸ್ಟಮ್ ಹೊಂದುವ ನಿರೀಕ್ಷೆಯಿದೆ.
2024 ವರ್ಷ ಕೊನೆಗೊಳ್ಳುವುದಕ್ಕೆ ಕೇವಲ ಎರಡು ತಿಂಗಳುಗಳು ಮಾತ್ರವೇ ಬಾಕಿ ಇದೆ. ಅಷ್ಟರೊಳಗೆ ಸ್ಯಾಮ್ಸಂಗ್ ತಮ್ಮ ಸ್ಮಾರ್ಟ್ಫೋನ್ ಬಿಡುಗಡೆ ಜೊತೆ ಹೊಸ One UI 7 ಅಪ್‌ಡೇಟ್ ಪರಿಚಯಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಸ್ಯಾಮ್ಸಂಗ್ ಸಂಶೋಧನಾ ಕೇಂದ್ರವಾದ SammyFansನಿಂದ ಕೆಲವು ಮಾಹಿತಿಗಳು ಬಹಿರಂಗಗೊಂಡಿವೆ. ಸ್ಯಾಮ್ಸಂಗ್ ಗ್ಯಾಲೆಕ್ಸಿ ಮಾಲೀಕರು ಕೆಲವು ಆಕರ್ಷಕ ಸುದ್ದಿಗಳನ್ನು ಹೊಂದಿದ್ದಾರೆ. Android 15 ಆಧಾರಿತ ಹೊಸ One UI 7.0 ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್ ಬಹಳ ದೂರವಿಲ್ಲ. ಇದು ನಾವು ಯೋಚಿಸಿದ್ದಕ್ಕಿಂತ ಬೇಗ ಬರಲಿದೆ ಎಂದು SammyFans ಹೇಳಿದೆ.
ನಾವು ಎರಡು ವಿಭಿನ್ನ ಮೂಲಗಳಿಂದ ಮಾಹಿತಿಯನ್ನು ಪಡೆದಿದ್ದೇವೆ. ಪ್ರತಿಯೊಂದೂ ನಮ್ಮ ನಿರೀಕ್ಷೆಗಳನ್ನು ಕಂಪನಿ ಪೂರೈಸುತ್ತದೆ. ಸ್ಯಾಮ್ಸಂಗ್ನ ಸಾಫ್ಟ್‌ವೇರ್ ಅಭಿವೃದ್ಧಿ ತಂಡವು One UI 7.0 ಆವೃತ್ತಿಯು ಅಕ್ಟೋಬರ್ 2024 ರ ಅಂತ್ಯದ ವೇಳೆಗೆ ಲಭ್ಯವಿರುತ್ತದೆ ಎಂದು ಘೋಷಿಸಿದೆ ಅಂತಾ SammyFans ಹೇಳಿದೆ.
ಸ್ಯಾಮ್ಸಂಗ್ ಗ್ಯಾಲೆಕ್ಸಿ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ One UI 7.0 ಅಪ್‌ಡೇಟ್ ಪಡೆಯುತ್ತಿವೆ ಎಂಬುದನ್ನು ತಿಳಿಯೋಣ ಬನ್ನಿ..
Galaxy S24 ಅಲ್ಟ್ರಾ
- Galaxy S24+
- Galaxy S24
- Galaxy S23 ಅಲ್ಟ್ರಾ
- Galaxy S23+
- Galaxy S23
- Galaxy S23 FE
- Galaxy S22 ಅಲ್ಟ್ರಾ
- Galaxy S22+
- Galaxy S22
- Galaxy S21 FE
- Galaxy S21 ಅಲ್ಟ್ರಾ
- Galaxy S21+
- Galaxy S21