3 Months Free Internet:ಎಲ್ಲ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರ ಹೆಚ್ಚಿಸಿರುವುದು ಗೊತ್ತಿರುವ ಸಂಗತಿ. ಈಗ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಪ್ರಮುಖ ಕಂಪನಿಗಳಿಗೆ ಪೈಪೋಟಿ ನೀಡಲು ಕಂಪನಿಯೊಂದು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ. ಈ ಕಂಪನಿಯ ಹೆಸರು ಎಕ್ಸಿಟೆಲ್. ಕಂಪನಿಯು ತನ್ನ ಗ್ರಾಹಕರಿಗೆ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ಒದಗಿಸುವುದರ ಜೊತೆಗೆ 18 ರೀತಿಯ OTT ಚಂದಾದಾರಿಕೆ ನೀಡುತ್ತಿದೆ.
ಕಡಿಮೆ ವೆಚ್ಚ, ಹಲವು ಪ್ರಯೋಜನಗಳು:
- ಈ ಹೊಸ ಎಕ್ಸಿಟೆಲ್ ಕಂಪನಿ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆ ತಂದಿದೆ.
- ಈ ಕೊಡುಗೆಯ ಅಡಿ, ಕಂಪನಿಯು 3 ತಿಂಗಳವರೆಗೆ ಉಚಿತ ಇಂಟರ್ನೆಟ್, 18 ರೀತಿಯ OTT (Netflix, Amazon Prime ನಂತಹ) ಚಂದಾದಾರಿಕೆಯನ್ನು ನೀಡುತ್ತಿದೆ.
- ಎಕ್ಸಿಟೆಲ್ ಕಡಿಮೆ ವೆಚ್ಚದ ರೀಚಾರ್ಜ್ ಯೋಜನೆಯನ್ನು ತರುವುದರ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿರುವು ಗಮನಾರ್ಹ.
ಎಕ್ಸಿಟೆಲ್‌ನ ಹೊಸ ರೀಚಾರ್ಜ್ ಯೋಜನೆ ಈ ಕೆಳಗಿನಂತಿದೆ:
- ಎಕ್ಸಿಟೆಲ್ ಕಂಪನಿಯ ಹೊಸ ರೀಚಾರ್ಜ್ ಆಫರ್ ತಿಂಗಳಿಗೆ ರೂ.499.
- ನೀವು 9 ತಿಂಗಳು ಇಂಟರ್ನೆಟ್ ಬಳಸಿದರೆ, ನಿಮಗೆ 3 ತಿಂಗಳು ಉಚಿತ ಇಂಟರ್ನೆಟ್ ಸಿಗುತ್ತದೆ.
- 18 OTT ಪ್ಲಾಟ್‌ಫಾರ್ಮ್‌ಗಳ ಜೊತೆಗೆ, 150 ಕ್ಕೂ ಹೆಚ್ಚು ಚಾನಲ್‌ಗಳನ್ನು ವೀಕ್ಷಿಸಬಹುದು.
- ಈ ಕೊಡುಗೆ ಈಗಾಗಲೇ ಲಭ್ಯವಿದೆ.