2024 KTM 250 Duke:ಬೈಕ್ ಪ್ರಿಯರಿಗೆ ಸಂತಸದ ಸುದ್ದಿ. ಪ್ರೀಮಿಯಂ ಮತ್ತು ಸ್ಪೋರ್ಟ್ಸ್ ಬೈಕ್‌ಗಳ ತಯಾರಕ ಕೆಟಿಎಂ ಇಂಡಿಯಾ ತನ್ನ ವರ್ಷಾಂತ್ಯದ ಕೊಡುಗೆ ಪ್ರಕಟಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಈ ಹಿನ್ನೆಲೆ ಕಂಪನಿಯು ತನ್ನ '2024 KTM 250 Duke' ಪರ್ಫಾರ್ಮೆನ್ಸ್ ಬೈಕ್ ಮೇಲೆ ವರ್ಷಾಂತ್ಯದ ಕೊಡುಗೆಯಾಗಿ ಭಾರೀ ರಿಯಾಯಿತಿ ನೀಡುತ್ತಿದೆ ಎಂದು ಬಹಿರಂಗಪಡಿಸಿದೆ. ಈ ಬೈಕಿನ ಬೆಲೆ ರೂ.20,000 ಇಳಿಕೆಯಾಗಿದ್ದು, ಇದೀಗ ರೂ. 2.25 ಲಕ್ಷಕ್ಕೆ ಮಾರಾಟವಾಗುತ್ತಿದೆ. ಈ ಕೊಡುಗೆಯು ಡಿಸೆಂಬರ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಅಕ್ಟೋಬರ್‌ನಲ್ಲಿ ಅಪ್ಡೇಟ್ ವರ್ಶನ್ ಬಿಡುಗಡೆ:ಹಿಂದಿನ ಮಾದರಿಯನ್ನು ಅಪ್ಡೇಟ್ ಮಾಡಿ '2024 KTM 250 ಡ್ಯೂಕ್' ಬೈಕ್ ಅನ್ನು ಇತ್ತೀಚೆಗೆ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. KTM 250 ಡ್ಯೂಕ್ ಹಳೆಯ ಮಾದರಿಯಲ್ಲಿ TFT ಡಿಸ್ಪ್ಲೇ ಮತ್ತು ಹೆಡ್‌ಲೈಟ್‌ನಂತಹ ವಿಷಯಗಳನ್ನು ನವೀಕರಿಸುವ ಮೂಲಕ ವಿನ್ಯಾಸಗೊಳಿಸಲಾಗಿದೆ. ಇವುಗಳ ಜೊತೆಗೆ, ಕಂಪನಿಯು ಈ '2024 KTM 250 ಡ್ಯೂಕ್' ಮಾದರಿಯಲ್ಲಿ 'ಸ್ಟ್ರೀಟ್' ಮತ್ತು 'ಟ್ರ್ಯಾಕ್' ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಅಳವಡಿಸಿದೆ.
ಸ್ಮಾರ್ಟ್ಫೋನ್ನೊಂದಿಗೂ ಕನೆಕ್ಟ್ ಮಾಡಿಕೊಳ್ಳಬಹುದು:ಇದನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸುವ ಆಯ್ಕೆಯನ್ನು ಸಹ ಹೊಂದಿದೆ. ಇದು TFT ಡ್ಯಾಶ್‌ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್ ಸಹ ಸಪೋರ್ಟ್ ಮಾಡುತ್ತದೆ. ಆದರೆ, ಕಂಪನಿಯು ಈ ಬೈಕ್ ಅಪ್ಡೇಟ್ ಮಾಡಿದರೂ ಸಹ ಅದರಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ಅಂದರೆ ಅದರ ಹಿಂದಿನ ಮಾದರಿಯಂತೆಯೇ ಯಾಂತ್ರಿಕ ಲಕ್ಷಣಗಳನ್ನು ಹೊಂದಿದೆ.