ಕರ್ನಾಟಕ

karnataka

ETV Bharat / technology

ಉಚಿತ ಆಧಾರ್​ ಅಪ್​ಡೇಟ್​ಗೆ 10 ದಿನ ಬಾಕಿ: ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ನಲ್ಲೇ​ ಟ್ರೈ ಮಾಡಿ - Free Aadhaar Update - FREE AADHAAR UPDATE

Free Aadhaar Card Update: ಆಧಾರ್ ಕಾರ್ಡ್ ಅಪ್​ಡೇಟ್​ ಮಾಡಲು ಕೇವಲ 10 ದಿನಗಳು ಮಾತ್ರ ಉಳಿದಿವೆ. ಆಧಾರ್ ಕಾರ್ಡನ್ನು ಸಾಧ್ಯವಾದಷ್ಟು ಬೇಗ ಅಪ್​ಡೇಟ್​ ಮಾಡುವುದು ಒಳಿತು. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕವೂ ಈ ಕೆಲಸ ಮಾಡಿ ಮುಗಿಸಬಹುದು. ಹೇಗೆಂಬುದು ಗೊತ್ತೇ?

MYAADHAAR PORTAL  AADHAAR CARD FREE UPDATE LAST DATE  AADHAAR CARD FREE UPDATE  FREE AADHAAR UPDATE
ಆಧಾರ್​ ಅಪ್​ಡೇಟ್ ಹೇಗೆ ಗೊತ್ತೇ? (ETV Bharat)

By ETV Bharat Tech Team

Published : Sep 4, 2024, 10:37 AM IST

Free Aadhaar Card Update: ಆಧಾರ್ ಕಾರ್ಡ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ದಿನಾಂಕ ಸಮೀಪಿಸುತ್ತಿದೆ. ನೀವು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ಆಧಾರ್ ಕಾರ್ಡ್ ಹೊಂದಿದ್ದರೆ ನಿಮ್ಮ ಆಧಾರ್ ಅನ್ನು ಅಪ್​ಡೇಟ್​ ಮಾಡಬೇಕಾಗುತ್ತದೆ. ಉಚಿತ ಆಧಾರ್​ ಅಪ್‌ಡೇಟ್​​ಗಾಗಿ ಕೊನೆಯ ದಿನಾಂಕ ಸೆಪ್ಟೆಂಬರ್ 14. ಹೀಗಾಗಿ ಅಪ್​ಡೇಟ್‌ಗೆ​ ಇನ್ನುಳಿದಿರುವುದು 10 ದಿನಗಳು ಮಾತ್ರ.

UIDAI ಸಹ ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವಂತೆ ಸಾರ್ವಜನಿಕರಿಗೆ ನಿರಂತರವಾಗಿ ಮನವಿ ಮಾಡುತ್ತಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕವೂ ಆಧಾರ್ ಅನ್ನು ಅಪ್​ಡೇಟ್​ ಮಾಡಿಕೊಳ್ಳಬಹುದು.

ನಿಮ್ಮ ಬಳಿ ಈ ಎರಡು ದಾಖಲೆಗಳಿರಲಿ: ಆಧಾರ್ ನವೀಕರಣಕ್ಕಾಗಿ ನಿಮಗೆ ಎರಡು ಪ್ರಮುಖ ದಾಖಲೆಗಳು ಬೇಕಾಗುತ್ತವೆ. ಮೊದಲನೇದು ಗುರುತಿನ ಚೀಟಿ ಮತ್ತು ಎರಡನೇದು ವಿಳಾಸ ಪುರಾವೆ. ಸಾಮಾನ್ಯವಾಗಿ, ಆಧಾರ್ ನವೀಕರಣಕ್ಕಾಗಿ ಆಧಾರ್ ಕೇಂದ್ರದಲ್ಲಿ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ UIDAI ಪ್ರಕಾರ, ಈ ಸೇವೆ ಜೂನ್ 14ರವರೆಗೆ ಉಚಿತ. ನೀವು ಗುರುತಿನ ಪುರಾವೆಯಾಗಿ ಪ್ಯಾನ್ ಕಾರ್ಡ್ ಮತ್ತು ವಿಳಾಸಕ್ಕಾಗಿ ಮತದಾರರ ಕಾರ್ಡ್ ನೀಡಬಹುದು.

ಮೊಬೈಲ್​​ನಲ್ಲಿ ಆಧಾರ್ ಅಪ್​ಡೇಟ್​ ಹೇಗೆ?: ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು myAadhaar ಪೋರ್ಟಲ್‌ನಲ್ಲಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ದಾಖಲೆಗಳನ್ನು ಉಚಿತವಾಗಿ ಅಪ್​ಡೇಟ್​ ಮಾಡಬಹುದು.

ಹಂತ 1:myAadhaar ಪೋರ್ಟಲ್‌ಗೆ ಹೋಗಿ.

ಹಂತ 2:Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಿ ಕೋಡ್ ನಮೂದಿಸಿ. 'ಸೆಂಡ್ OTP' ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3:ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4:ಸೂಚನೆಗಳನ್ನು ಓದಿದ ನಂತರ ಮುಂದಿನ ಆಯ್ಕೆ ಕ್ಲಿಕ್ ಮಾಡಿ.

ಹಂತ 5:ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪುಟದಲ್ಲಿ ನೀಡಲಾದ 'ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ' ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಆಯ್ಕೆಗೆ ತೆರಳಿ.

ಹಂತ 6: ID ಪುರಾವೆ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಇದರ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ ಏಳು ದಿನಗಳಲ್ಲಿ ಅಪ್​ಡೇಟ್​ ಆಗುತ್ತದೆ.

ಇದನ್ನೂ ಓದಿ:ಉಚಿತವಾಗಿ ಆಧಾರ್ ಕಾರ್ಡ್ ಅಪ್​ಡೇಟ್​ ಮಾಡಲು ಹೀಗೆ ಮಾಡಿ - Aadhaar Card Free Update

ABOUT THE AUTHOR

...view details