ಕರ್ನಾಟಕ

karnataka

ETV Bharat / state

ಮಂಡ್ಯ: ಅದ್ದೂರಿಯಾಗಿ ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ ಪಡ್ಡೆ ಹೈಕ್ಳು - sunny leone birthday celebration - SUNNY LEONE BIRTHDAY CELEBRATION

ಖ್ಯಾತ ನಟಿ ಸನ್ನಿಲಿಯೋನ್ ಜನ್ಮದಿನವನ್ನು ಮಂಡ್ಯದ ಕಾರ್ಕಳ್ಳಿ ಗ್ರಾಮದ ಯುವಕರು ಸಂಭ್ರಮದಿಂದ ಆಚರಿಸಿದ್ದಾರೆ.

ಅದ್ದೂರಿಯಾಗಿ ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ ಪಡ್ಡೆ ಹೈಕ್ಳು
ಅದ್ದೂರಿಯಾಗಿ ಸನ್ನಿ ಲಿಯೋನ್ ಹುಟ್ಟುಹಬ್ಬ ಆಚರಿಸಿದ ಪಡ್ಡೆ ಹೈಕ್ಳು (ETV Bharat)

By ETV Bharat Karnataka Team

Published : May 15, 2024, 9:59 PM IST

ಮಂಡ್ಯ:ಪಡ್ಡೆ ಹೈಕಳ ಹಾಟ್ ಫೆವರೀಟ್​​ ಸನ್ನಿಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅದೆಷ್ಟೋ ಜನ ಆಕೆಯನ್ನ ಹಾಡಿ ಹೊಗಳಿದರೆ, ಮತ್ತೊಂದಷ್ಟು ಜನ ಆಕೆ ನೀಲಿ ಚಿತ್ರದ ತಾರೆ ಅಂತ ಮೂಗು ಮುರಿಯುತ್ತಾರೆ. ಆದರೆ, ಇಲ್ಲೊಂದು ಗ್ರಾಮದ ಯುವಕರಿಗೆ ಸನ್ನಿ ಅಂದರೆ ಪಂಚ ಪ್ರಾಣ ಹೀಗಾಗಿ ನೆಚ್ಚಿನ ನಟಿಯ ಜನ್ಮದಿನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ಹೌದು, ಖ್ಯಾತ ನಟಿ ಸನ್ನಿಲಿಯೋನ್ ಎಂದರೆ ಜಿಲ್ಲೆಯ ಕಾರ್ಕಳ್ಳಿ ಗ್ರಾಮದ ಯುವಕರಿಗೆ ತುಂಬಾ ಅಚ್ಚುಮೆಚ್ಚು. ಹೀಗಾಗಿ ಆಕೆಯ ಜನ್ಮದಿನವನ್ನು ಗ್ರಾಮದ ಸನ್ನಿ ಬಾಯ್ಸ್ ಯುವಕರು ಅತ್ಯಂತ ಅದ್ದೂರಿಯಾಗಿ ಆಚರಿಸಿದ್ದಾರೆ. ಗ್ರಾಮದ ಯುವಕರೆಲ್ಲರೂ ಒಟ್ಟಾಗಿ ಸೇರಿ ಸನ್ನಿಲಿಯೋನ್ ಅವರ ಬೃಹತ್ ಕಟೌಟ್ ನಿಲ್ಲಿಸಿ ಅದರ ಮುಂಭಾಗ ಕೇಕ್ ಕತ್ತರಿಸಿದ್ದಾರೆ. ಈ ವೇಳೆ, ಸನ್ನಿಗೆ ಹುಟ್ಟುಹಬ್ಬದ ಶುಭಕೋರಿ ಯುವಕರೆಲ್ಲರೂ ಪರಸ್ಪರ ಕೇಕ್ ತಿನ್ನಿಸಿ ಸಂತಸಪಟ್ಟರು.

ಸನ್ನಿಲಿಯೋನ್ ನಟನೆ ಜತೆಗೆ ನೂರಾರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಅವರ ಸಮಾಜಮುಖಿ ಕೆಲಸ ಕಂಡು ನಾವು ಅಭಿಮಾನಿ ಆಗಿದ್ದೇವೆ. ನೀಲಿ ಚಿತ್ರದ ತಾರೆ ಅಂತ ಜನ ಅವರನ್ನು ನೋಡಿ ಮೂಗು ಮುರಿಯುತ್ತಾರೆ. ಆದರೆ, ಅವರಲ್ಲಿರುವ ಒಳ್ಳೆಯ ಗುಣ ಹಾಗೂ ಸಹಾಯ ಮನೋಭಾವವೇ ನಮ್ಮನ್ನು ಇಂದು ಅವರ ಅಭಿಮಾನಿಯನ್ನಾಗಿಸಿದೆ ಎಂದು ಗ್ರಾಮದ ಸನ್ನಿ ಬಾಯ್ಸ್ ಯುವಕರು ತಿಳಿಸಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್, ಥಿಯೇಟರ್‌ಗಳಲ್ಲಿ T20 ವಿಶ್ವಕಪ್ ಪಂದ್ಯಗಳು! - 2024 T20 World Cup

ABOUT THE AUTHOR

...view details