ಕರ್ನಾಟಕ

karnataka

ETV Bharat / state

ಬೈಕ್​ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಾಗ ಹರಿದ ಕಾರು: ಸ್ಥಳದಲ್ಲೇ ಯುವಕ ಸಾವು - YOUNG MAN DIED

ಕಾರು ಹರಿದ ಪರಿಣಾಮ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 13, 2024, 5:41 PM IST

ಬೆಂಗಳೂರು: ಕಾರು ಹರಿದ ಪರಿಣಾಮ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಶಿಕುಮಾರ್ (20) ಮೃತ ಬೈಕ್ ಸವಾರ.

ಬಾಗೇಪಲ್ಲಿ ಮೂಲದ ಶಶಿಕುಮಾರ್ ಪೀಣ್ಯ ತಿಗಳರಪಾಳ್ಯದ ಬಳಿ ಫ್ಯಾಕ್ಟರಿಯೊಂದರಲ್ಲಿ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ. ತಾಯಿಯೊಂದಿಗೆ ವಾಸವಾಗಿದ್ದ ಯುವಕ ನಿನ್ನೆ ಎಂದಿನಂತೆ ಕೆಲಸ ಮುಗಿಸಿಕೊಂಡು ಇಂದು ಮುಂಜಾನೆ 3 ಗಂಟೆ ವೇಳೆ ಬೈಕ್​ನಲ್ಲಿ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ತಿಗಳರಪಾಳ್ಯ 14ನೇ ಅಡ್ಡರಸ್ತೆ ಬಳಿ ವೇಗವಾಗಿ ಬೈಕ್ ಓಡಿಸಿಕೊಂಡು ಬರುವಾಗ ಏಕಾಏಕಿ ಬಿಳಿ ಬಣ್ಣದ ಕಾರು ಅಡ್ಡಬಂದ ಪರಿಣಾಮ ಬೈಕ್​ ನಿಯಂತ್ರಿಸಲು ಹೋಗಿ ಸ್ಕಿಡ್ ಆಗಿದೆ. ರಸ್ತೆಯಲ್ಲಿ ಕೆಸರಿದ್ದರಿಂದ 50 ಮೀಟರ್ ವರೆಗೂ ಬೈಕ್ ಜಾರಿಕೊಂಡು ಹೋಗಿ ಯುವಕ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕಾರು ಚಾಲಕ ಆತನ ಮೇಲೆ ಕಾರು ಹರಿಸಿಕೊಂಡು ಹೋಗಿದ್ದಾನೆ. ಇದರಿಂದ ಸ್ಥಳದಲ್ಲೇ ಶಶಿಕುಮಾರ್​ ಸಾವನ್ನಪ್ಪಿದ್ದಾನೆ.

ಉದ್ದೇಶ ಪೂರ್ವಕವಾಗಿ ಬೈಕ್ ಸವಾರನ ಮೇಲೆ ಕಾರು ಹರಿಸಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕಾರಿನ ನೋಂದಣಿ ಸಂಖ್ಯೆಯನ್ನ ಪತ್ತೆ ಮಾಡಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ, ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್ ಸಾವು

ABOUT THE AUTHOR

...view details