ಕರ್ನಾಟಕ

karnataka

ETV Bharat / state

ಬೆಂಗಳೂರು: ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಸಾವು, ಮತ್ತೋರ್ವ ಗಂಭೀರ - Cooker Explosion - COOKER EXPLOSION

ಬೆಂಗಳೂರಿನ ಜೆ.ಪಿ.ನಗರದ 6 ನೇ ಹಂತದ ಮನೆಯಲ್ಲಿ ಮಂಗಳವಾರ ನಡೆದಿದ್ದ ಕುಕ್ಕರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಮೋಹ್ಸೀನ್ ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

cooker-explosion
ಕುಕ್ಕರ್ ಸ್ಫೋಟ (ETV Bharat)

By ETV Bharat Karnataka Team

Published : Aug 14, 2024, 7:01 PM IST

ಬೆಂಗಳೂರು: ಜೆ.ಪಿ.ನಗರದ 6ನೇ ಹಂತದ ಮನೆಯಲ್ಲಿ ಮಂಗಳವಾರ ಸಂಭವಿಸಿದ್ದ ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮೋಹ್ಸೀನ್ (23) ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.

ಕುಕ್ಕರ್ ಸ್ಫೋಟಗೊಂಡ ಬಳಿಕ ಗ್ಯಾಸ್ ಸಿಲಿಂಡರ್ ಸಹ ಸ್ಫೋಟಗೊಂಡು ಮನೆಯಲ್ಲಿದ್ದ ಉತ್ತರ ಪ್ರದೇಶದ ಮೊಹ್ಸೀನ್ ಹಾಗೂ ಖಾದರ್‌ ಖಾನ್ ಗಾಯಗೊಂಡಿದ್ದರು.

ಅನುಮಾನ ಹುಟ್ಟಿಸಿದ ಸ್ಫೋಟ: ಸ್ವಾತಂತ್ರ್ಯೋತ್ಸವದ ಸನಿಹದಲ್ಲೇ ಸಂಭವಿಸಿದ ಸ್ಪೋಟ ಅನುಮಾನಕ್ಕೂ ಕಾರಣವಾಗಿದೆ. ಘಟನಾ ಸ್ಥಳಕ್ಕೆ ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಭಯೋತ್ಪಾದಕ ಕೃತ್ಯವಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ:ಕುಕ್ಕರ್ ಸ್ಫೋಟ: ಸವದತ್ತಿ‌ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ 8 ಜನರಿಗೆ ಗಾಯ - Cooker Blast

ABOUT THE AUTHOR

...view details