ದಾವಣಗೆರೆ: ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ಸ್ ಕ್ಯೂಬ್ ಅನ್ನು ಒಂದೆಡೆ ಸೇರಿಸುವ ಮೂಲಕ ನಗರದ ಏಳು ವರ್ಷದ ಬಾಲಕಿಯೊಬ್ಬಳು ವಿಶ್ವದಾಖಲೆ ಮಾಡಿದ್ದಾಳೆ. ನಗರದ ಎಸ್.ಸ್ತುತಿ ಕಣ್ಣುಮುಚ್ಚಿ ಕೇವಲ 26.95 ಸೆಕೆಂಡ್‌ಗಳಲ್ಲಿ ಪಿರಾಮಿಂಕ್ಸ್ ರೂಬಿಕ್ ಕ್ಯೂಬ್ ಅನ್ನು ಅತ್ಯಂತ ವೇಗವಾಗಿ ಒಂದೆಡೆ ಸೇರಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ನಗರದ ಆರಿಜಿನ್ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಸ್ತುತಿ ಗಾಂಧಾರಿ ದಾವಣಗೆರೆ ಎಸ್.ಕೆ.ಪಿ. ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಸುನಿಲ್ ಎಸ್ ಮತ್ತು ಚಂದ್ರಿಕಾ ದಂಪತಿ ಪುತ್ರಿಯಾಗಿದ್ದಾರೆ.
ಕಣ್ಣು ಮುಚ್ಚಿ 26.95 ಸೆಕೆಂಡ್‌ಗಳಲ್ಲಿ ರೂಬಿಕ್ಸ್ ಕ್ಯೂಬ್ ಹೊಂದಿಕೆ: ದಾವಣಗೆರೆ ಬಾಲಕಿಯಿಂದ ವಿಶ್ವದಾಖಲೆ! - Rubiks Cube World Record - RUBIKS CUBE WORLD RECORD
ದಾವಣಗೆರೆ ನಗರದ 7 ವರ್ಷದ ಬಾಲಕಿಯೊಬ್ಬಳು, ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ಸ್ ಕ್ಯೂಬ್ ಅನ್ನು ಒಂದೆಡೆ ಸೇರಿಸುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ದಾವಣಗೆರೆ ಬಾಲಕಿಯಿಂದ ವಿಶ್ವ ದಾಖಲೆ (ETV Bharat)
Published : Aug 13, 2024, 8:30 PM IST
|Updated : Aug 13, 2024, 10:59 PM IST
ಸ್ತುತಿ ಗಾಂಧಾರಿ ಗಾಂಧಾರಿ ಮಿಡ್ ಬ್ರೈನ್ ಆ್ಯಕ್ಟಿವೇಶನ್ನಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ ಭರತನಾಟ್ಯ, ಚೆಸ್ ಆಟದಲ್ಲೂ ಆಸಕ್ತಿ ಹೊಂದಿದ್ದಾರೆ.
ಇದನ್ನೂ ಓದಿ:37 ಸೆಕೆಂಡ್ನಲ್ಲಿ ನೀರೊಳಗೆ 26 ಪಲ್ಟಿ: ವಿಶ್ವ ದಾಖಲೆ ಸೃಷ್ಟಿಸಿದ ಮಂಗಳೂರಿನ ಹುಡುಗ - Boy created a world record
Last Updated : Aug 13, 2024, 10:59 PM IST