ಬೆಂಗಳೂರು:ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಗೆಳತಿಯ ಮೇಲೆ ಯುವಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಗರದಲ್ಲಿ ವರದಿಯಾಗಿದೆ. ಇಬ್ಬರೂ ಪ್ರತ್ಯೇಕವಾದ ನಂತರ ಸಮಸ್ಯೆೆ ಬಗೆಹರಿಸಲು ಕರೆಸಿಕೊಂಡು ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಆರೋಪಿಸಿ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯ - ಬೆಂಗಳೂರು
ಲಿವಿಂಗ್ ಟುಗೆದರ್‌ನಲ್ಲಿದ್ದು ಬಳಿಕ ಮನಸ್ತಾಪದಿಂದ ಬೇರಾಗಿದ್ದ ಯುವಕ ತನ್ನ ಗೆಳತಿಯನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
![ಬೆಂಗಳೂರು: ಲಿವಿಂಗ್ ಟುಗೆದರ್‌ನಲ್ಲಿದ್ದ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯ ಬೆಂಗಳೂರು](https://etvbharatimages.akamaized.net/etvbharat/prod-images/23-01-2024/1200-675-20572024-thumbnail-16x9-mh.jpg)
Published : Jan 23, 2024, 7:22 AM IST
ಸುದ್ದುಗುಂಟೆಪಾಳ್ಯದ 22 ವರ್ಷದ ಯುವತಿ ನೀಡಿರುವ ದೂರಿನ ಆಧಾರದ ಮೇಲೆ ವಸಂತನಗರದ ನಿವಾಸಿಯಾದ ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರುದಾರ ಯುವತಿಯು 2022 ಸೆಪ್ಟೆಂಬರ್‌ನಿಂದ ಆರೋಪಿ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದೂರವಾಗಿದ್ದರು.
ಜ.19ರಂದು ರಾತ್ರಿ ಆರೋಪಿಯು ಯುವತಿಗೆ ಕರೆ ಮಾಡಿ ನಮ್ಮ ನಡುವಿನ ಮನಸ್ತಾಪ ಬಗೆಹರಿಸೋಣ ಎಂದು ವಸಂತನಗರದಲ್ಲಿರುವ ಮನೆಗೆ ಕರೆಸಿಕೊಂಡಿದ್ದಾನೆ. ಇಬ್ಬರೂ ಮಾತನಾಡುತ್ತಿದ್ದಾಗ ಏಕಾಏಕಿ ಹಲ್ಲೆೆ ನಡೆಸಿ ಬಲವಂತವಾಗಿ ಬಾಯಿ ಮುಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.