ಕರ್ನಾಟಕ

karnataka

ETV Bharat / state

ಬಿಜೆಪಿ ಪರ ಅಲೆ ಇದ್ದು ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ: ಯಡಿಯೂರಪ್ಪ

ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಸಂಸದ ರಾಘವೇಂದ್ರ ಏನೋ ಮೋಡಿ ಮಾಡಿರಬೇಕು. ಅವರು ರಾಘವೇಂದ್ರ ಮತ್ತೊಮ್ಮೆ ಸಂಸದರಾಗಬೇಕೆಂದು ಹೇಳಿರುವುದು ಸ್ವಾಗತಾರ್ಹ ವಿಚಾರ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Former CM BS Yeddyurappa spoke to reporters.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

By ETV Bharat Karnataka Team

Published : Jan 27, 2024, 5:53 PM IST

Updated : Jan 27, 2024, 6:02 PM IST

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾಧ್ಯಮದವರ ಜೊತೆ ಮಾತನಾಡಿದರು.

ಶಿವಮೊಗ್ಗ:ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಸಂಸದ ರಾಘವೇಂದ್ರ ಏನೋ ಮೋಡಿ ಮಾಡಿರಬೇಕು ಅದಕ್ಕೆ ಅವರು ಹಾಗೆ ಹೇಳಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪನವರು ಹಿರಿಯರು, ಅವರು ರಾಘವೇಂದ್ರ ಅವರು ಮತ್ತೊಮ್ಮೆ ಸಂಸದರಾಗಬೇಕು ಎಂದು ಹೇಳಿರುವುದು ಸ್ವಾಗತಾರ್ಹ ವಿಚಾರ. ಶಾಮನೂರು ಅವರು ಪಕ್ಷ ಭೇದ ಮರೆತು ರಾಘವೇಂದ್ರ ಅವರ ಅಬಿವೃದ್ಧಿ ಕೆಲಸ ನೋಡಿ ಹಾಗೆ ಹೇಳಿದ್ದಾರೆ. ಇದಕ್ಕೆ ನಾನು ಶಾಮನೂರು ಶಿವಶಂಕರಪ್ಪನವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ:ರಾಜ್ಯದಲ್ಲಿ ವಾತಾವರಣ ಚೆನ್ನಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 28 ಕ್ಕೆ 28 ಗೆದ್ದರೂ ಅಚ್ಚರಿ ಇಲ್ಲ.‌ ವಾತಾವರಣ ದಿನೆ ದಿನೇ ಮೋದಿಯವರ ಹಾಗೂ ಬಿಜೆಪಿ ಪರ ಅಲೆ ಬರುವಂತೆ ಮಾಡುತ್ತಿದೆ. ಇದರಿಂದ ಕಳೆದ ಸಲಕ್ಕಿಂತ ಈ ಬಾರಿ ಹೆಚ್ಚು ಸೀಟುಗಳನ್ನು ಗೆಲ್ಲಬಹುದಾಗಿದೆ ಎಂದರು.‌

ಲೋಕಸಭೆ ಚುನಾವಣೆ ಗೆಲ್ಲುವುದಕ್ಕೆ ಚರ್ಚೆ: ನಾನು ಬೆಂಗಳೂರಿನ ಕಾರ್ಯಕಾರಿಣಿ ಸಭೆಯಲ್ಲಿ ಬೆಳಗ್ಗೆ ಭಾಗವಹಿಸಿ ಬಂದಿದ್ದೇನೆ. ವಿಶೇಷವಾಗಿ ರಾಜ್ಯದಲ್ಲಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಮೊದಲ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಮುಖಂಡರು ಭಾಗಿಯಾಗಿದ್ದರು.

ಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ‌‌. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಏನೂ ಮಾಡಬೇಕು ಎಂಬ ಆಂಶಗಳ ಕುರಿತು ಪ್ರಮುಖ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಪ್ರಾರಂಭವಾಗಿದೆ. ಯಾರ್ಯಾರು ಬಿಜೆಪಿ ಬಿಟ್ಟು ಹೋಗಿದ್ದರೋ ಅವರು ಬಿಜೆಪಿಗೆ ವಾಪಸ್​ ಆಗುತ್ತಿದ್ದಾರೆ. ಜೊತೆಗೆ ಅನೇಕರು ಹೊಸಬರು ಬರುತ್ತಿದ್ದಾರೆ. ಇದರಿಂದ ನಮ್ಮ ಶಕ್ತಿ ಹೆಚ್ಚಾಗುತ್ತಿದೆ. ನಿತೀಶ್ ಕುಮಾರ್​ ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಕಾದು ನೋಡೋಣ ಏನಾಗುತ್ತಿದೆ ಎಂದರು.

ನನ್ನ ಮೊದಲ ಆಯ್ಕೆ ಬಿಜೆಪಿಯೇ: ಗಾಲಿ ಜನಾರ್ದನ ರೆಡ್ಡಿ

''ದೇಶದ ಅಭಿವೃದ್ಧಿ ವಿಚಾರ, ಸಮರ್ಥ ನಾಯಕ, ವಿಶ್ವವನ್ನೇ ಮುನ್ನಡೆಸುವ ಸಾಮರ್ಥ್ಯ ಇರುವ ಪ್ರಧಾನಿ ನರೇಂದ್ರ ಮೊದಿ ಅವರ ವಿಚಾರ ಬಂದಾಗ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ನನ್ನ ಮೊದಲ ಆಯ್ಕೆ ಬಿಜೆಪಿಯೇ ಆಗಿರುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ'' ಎಂದು ಕೆಆರ್​ಪಿಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ''ಮೋದಿಯಂತಹ ನಾಯಕನ ನಾಯಕತ್ವ ದೇಶಕ್ಕೆ ಬೇಕಿದೆ. ಉತ್ತಮ ಕೆಲಸ ಮಾಡುವ ಯಾವುದೇ ವ್ಯಕ್ತಿ ಇದ್ದರೂ ಅವರನ್ನು ಮೆಚ್ಚಬೇಕಾದ್ದದ್ದು ನಮ್ಮ ಧರ್ಮ. ಭಾರತೀಯರಾಗಿರುವ ನಾವು ಮೋದಿಯನ್ನು ಪ್ರಶಂಸಿಸಬೇಕು, ಅಭಿನಂದಿಸಬೇಕು. ಹೀಗಾಗಿ ದೇಶದ ವಿಚಾರ ಬಂದಾಗ ಬಿಜೆಪಿಯವರು ಮುಂದೆ ಬಂದು ಹೊಂದಾಣಿಕೆಯ ಪ್ರಸ್ತಾಪವಿಟ್ಟರೆ ಅದಕ್ಕೆ ನಾನು ಸ್ಪಂದಿಸುತ್ತೇನೆ. ಹೊಂದಾಣಿಕೆ ಆಗುವುದಾದರೆ ಕೇವಲ ಬಿಜೆಪಿಯೊಂದಿಗೆ ಮಾತ್ರ. ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಈ ವಿಷಯವೇ ಅಪ್ರಸ್ತುತ'' ಎಂದು ಅವರು ತಿಳಿಸಿದರು.

ಇದನ್ನೂಓದಿ:ಲೋಕಸಮರ: ರಾಜ್ಯ ಚುನಾವಣಾ ಪ್ರಭಾರಿ, ಕ್ಷೇತ್ರ ಉಸ್ತುವಾರಿ ತಂಡ ರಚಿಸಿದ ಬಿಜೆಪಿ ಹೈಕಮಾಂಡ್

Last Updated : Jan 27, 2024, 6:02 PM IST

ABOUT THE AUTHOR

...view details