ಕರ್ನಾಟಕ

karnataka

ETV Bharat / state

ನಾವು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳುತ್ತೇವೆ: ಸಂಸದ ಬಿ.ವೈ.ರಾಘವೇಂದ್ರ - b y raghavendra statement

ನಮ್ಮ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರಿಗೆ ಮತ ಕೇಳುತ್ತೇವೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

ನಾವು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳುತ್ತೇವೆ: ಸಂಸದ ಬಿ.ವೈ.ರಾಘವೇಂದ್ರ
ನಾವು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳುತ್ತೇವೆ: ಸಂಸದ ಬಿ.ವೈ.ರಾಘವೇಂದ್ರ

By ETV Bharat Karnataka Team

Published : Mar 14, 2024, 4:17 PM IST

ಶಿವಮೊಗ್ಗ: ಎದುರಾಳಿ ಅಭ್ಯರ್ಥಿ ಯಾರು ಏನು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೇ, ನಾವು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಮತ ಕೇಳುತ್ತೇವೆ ಎಂದು ಶಿವಮೊಗ್ಗ ಲೋಕಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ‌.ವೈ.ರಾಘವೇಂದ್ರ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆ ಅಧಿಕೃತವಾಗಿ ನನ್ನ ಹೆಸರು ಘೋಷಣೆ ಮಾಡಿದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ಗುರುವಾರ ರಾಯರ ಮಠಕ್ಕೆ ಭೇಟಿ ನೀಡಿ‌ ಪೂಜೆ ಸಲ್ಲಿಸಿದ್ದೇನೆ. ಮಾ.18 ರಂದು‌ ಶಿವಮೊಗ್ಗಕ್ಕೆ ಮೋದಿ ಬರುತ್ತಿದ್ದಾರೆ. ಇಲ್ಲಿ ಬಿಜೆಪಿಗೆ ವಾತಾವರಣ ತುಂಬಾ ಚನ್ನಾಗಿದೆ. ಕಾರ್ಯಕರ್ತರು ಉತ್ಸಾಹದಿಂದ ಇದ್ದಾರೆ. ಪ್ರಜಾಪ್ರಭುತ್ವದ ಹಬ್ಬವನ್ನು ‌ಯಶಸ್ವಿಯಾಗಿ ಮಾಡುತ್ತಾರೆ. ಒಂದು ವರ್ಷದಲ್ಲಿ ಮೂರನೇ ಬಾರಿ ಮೋದಿ ಶಿವಮೊಗ್ಗಕ್ಕೆ ‌ಬರುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ಸೇರಿದಂತೆ ಅಭಿವೃದ್ಧಿ ಕೆಲಸದಿಂದ ಜನರಿಗೆ ಪಕ್ಷದ ಮೇಲೆ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ 370 ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಜತೆಗೆ ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲ್ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗಕ್ಕೆ ಕೈಗಾರಿಕೆಗಳು ಬರಬೇಕು, ಸಾಫ್ಟ್‌ವೇರ್ ಉದ್ಯಮ ಬರಬೇಕು. ಯುವಕರ ಸ್ವಾಭಿಮಾನದ ಬದುಕಿಗೆ ಆದ್ಯತೆ ಕೊಡಲಾಗುವುದು ಕರಾವಳಿ ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್​ನಲ್ಲಿ ಟನಲ್ ನಿರ್ಮಾಣ ಮಾಡಲಾಗುವುದು ಎಂಬ ಭರವಸೆ ನೀಡಿದರು. ಬಳಿಕ ಈಶ್ವರಪ್ಪ ಅವರ ನಾಳೆಯ ಸಭೆಯ ಬಗ್ಗೆ ಪ್ರತಿಕ್ರಿಯಿಸಿ, ಕೆ.ಎಸ್​ ಈಶ್ವರಪ್ಪ ರಾಷ್ಟ್ರ ಭಕ್ತರು ರಾಷ್ಟ್ರದ ಹಿತಕೋಸ್ಕರ ಚಿಂತನೆ ಮಾಡುವರು. ದೇಶ, ಮೋದಿ ಬಿಟ್ಟು ಚಿಂತನೆ ಮಾಡಲ್ಲ, ದೇಶದ ಒಳಿತಿಗಾಗಿ ಚಿಂತನೆ ಮಾಡುತ್ತಾರೆ ಎಂದರು.

ಯಡಿಯೂರಪ್ಪ ಯಾರಿಗೂ ಮೋಸ ಮಾಡಿಲ್ಲ:ಯಡಿಯೂರಪ್ಪ ಜೀವನದಲ್ಲಿ ಪಕ್ಷಕ್ಕೆ ಶಕ್ತಿ ಇಲ್ಲದ ಸಂದರ್ಭದಲ್ಲಿ ಸಂಘಟನೆ ಮಾಡುವ ಕೆಲಸ ಮಾಡಿದ್ದಾರೆ. ಅವರು ಯಾರಿಗೂ ದ್ರೋಹ ಮಾಡುವ ಕೆಲಸ ಮಾಡಿಲ್ಲ. ಯಾವೊಬ್ಬ ಕಾರ್ಯಕರ್ತನಿಗೂ ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಜ್ಯಸಭೆ ಸದಸ್ಯರನ್ನಾಗಿ ಮಾಡುತ್ತೇವೆ ಬನ್ನಿ ಎಂದು ಕರೆದರೂ ಸಹ ನನಗೆ ರಾಜ್ಯಸಭೆ ಬೇಡ ರಾಜಶೇಖರಮೂರ್ತಿ ಅವರನ್ನು ಆಯ್ಕೆ ಮಾಡಿ ಎಂದಿದ್ದರು. ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ಹಳಬರ ಜೊತೆ ಕೆಲಸ ಮಾಡಿದ್ದೆವು. ಆ ನೆನಪು ಇಂದಿಗೂ ಇದೆ. ಹೊಸಬರಿಗೆ ಶುಭ ಕೋರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ಯಡಿಯೂರಪ್ಪನವರಿಂದ ಅನ್ಯಾಯವಾಗಿದೆ ಅಂತ ಬಹಳ ಜನ ನೋವು ತೋಡಿಕೊಳ್ಳುತ್ತಿದ್ದಾರೆ: ಕೆ. ಎಸ್. ಈಶ್ವರಪ್ಪ

ABOUT THE AUTHOR

...view details