ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / state

ದಸರಾ: ಬೈಕ್ ಸವಾರಿ, ಟಾಂಗಾ ಸವಾರಿ, ಪಾರಂಪರಿಕ ನಡಿಗೆಗೆ ಸೆ.30ರೊಳಗೆ ಹೆಸರು ನೋಂದಾಯಿಸಿ - Mysuru Dasara 2024

ಮೈಸೂರು ದಸರಾ-2024ರ ಅಂಗವಾಗಿ ಸಾರ್ವಜನಿಕರಿಗಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ದಸರಾ ಅಂಗವಾಗಿ ಸಾರ್ವಜನಿಕರಿಗಾಗಿ ವಿವಿಧ ಕಾರ್ಯಕ್ರಮ
ದಸರಾ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ (IANS)

ಮೈಸೂರು:ದಸರಾ ಮಹೋತ್ಸವದ ಪ್ರಯುಕ್ತ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಅ.4ರಿಂದ 6ರವರೆಗೆ ಬೆಳಗ್ಗೆ 7ಕ್ಕೆ ನಗರದ ರಂಗಾಚಾರ್ಲು ಪುರಭವನ (ಟೌನ್ ಹಾಲ್​ನಿಂದ)ದ ಆವರಣದಲ್ಲಿ ಆಯೋಜಿಸಲಾಗಿದೆ.

ಜಾವಾ ಮೋಟಾರ್ ಬೈಕ್ ಸವಾರಿ: ಅ.4ರಂದು ಪಾರಂಪರಿಕ ಜಾವಾ ಮೋರ್ಟಾ ಬೈಕ್ ಸವಾರಿ ಏರ್ಪಡಿಸಿದ್ದು, 25ರಿಂದ 50 ವರ್ಷ ವಯೋಮಿತಿಯುಳ್ಳ ವಿದ್ಯಾರ್ಥಿಗಳು/ಯುವಕರು ಹಾಗೂ ಪುರುಷರು ಭಾಗವಹಿಸಬಹುದು. ಮೊದಲು ನೋಂದಣಿ ಮಾಡಿಕೊಳ್ಳುವ 10 ಮಂದಿ ಆಸಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. (ಕಡ್ಡಾಯವಾಗಿ ಜಾವಾ ಬೈಕ್​ ತರಬೇಕು). ಈ ಸ್ಪರ್ಧೆ​ ರಂಗಾಚಾರ್ಲು ಪುರಭವನ (ಟೌನ್​​ ಹಾಲ್​)ದಿಂದ ಪ್ರಾರಂಭವಾಗಿ, ನಾನಾ ಕಡೆ ಸಂಚರಿಸಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಹತ್ತಿರ ಮುಕ್ತಾಯಗೊಳ್ಳಲಿದೆ.

ಪಾರಂಪರಿಕ ಟಾಂಗಾ ಸವಾರಿ:ಅ.5ರಂದು ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿಯನ್ನು ಆಯೋಜಿಸಲಾಗಿದೆ. ಇದನ್ನು 25ರಿಂದ 55 ವರ್ಷ ವಯೋಮಿತಿಯುಳ್ಳ ದಂಪತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಮೊದಲು ನೋಂದಣಿ ಮಾಡಿಕೊಳ್ಳುವ 50 ಜೋಡಿಗಳಿಗೆ ಆದ್ಯತೆಯ ಮೇರೆಗೆ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ. ಟಾಂಗಾ ಸವಾರಿ ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ನಾನಾ ಕಡೆ ಸಂಚರಿಸಿ ರಂಗಾಚಾರ್ಲು ಪುರಭವನ(ಟೌನ್​ ಹಾಲ್​) ಹತ್ತಿರ ಕೊನೆಗೊಳ್ಳಲಿದೆ.

ಪಾರಂಪರಿಕ ನಡಿಗೆ:ಅ.6ರಂದು ಪಾರಂಪರಿಕ ನಡಿಗೆ ಆಯೋಜಿಸಲಾಗಿದೆ. 18ರಿಂದ 50 ವರ್ಷ ವಯೋಮಿತಿಯುಳ್ಳ ವಿದ್ಯಾರ್ಥಿಗಳು/ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು. ಮೊದಲು ನೋಂದಣಿ ಮಾಡಿಕೊಳ್ಳುವ 200 ಮಂದಿ ಆಸಕ್ತರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ. ಈ ನಡಿಗೆ ರಂಗಾಚಾರ್ಲು ಪುರಭವನದಿಂದ ಶುರುವಾಗಿ ನಾನಾ ಕಡೆ ಸಂಚರಿಸಿ ಪುರಭವನದ ಹತ್ತಿರ ಮುಕ್ತಾಯಗೊಳ್ಳಲಿದೆ. ಮೂರು ದಿನ ನಡೆಯುವ ಈ ಕಾರ್ಯಕ್ರಮಗಳಲ್ಲಿ ನುರಿತ ಇತಿಹಾಸ ಹಾಗೂ ಪುರಾತತ್ವ ತಜ್ಞರುಗಳು ಮೈಸೂರಿನ ವಿವಿಧ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡಲಿದ್ದಾರೆ.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸೆ.30ರವರೆಗೆ ದೊಡ್ಡಕೆರೆ ಮೈದಾನದ ಕರ್ನಾಟಕದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರನ್ನು ನೇರವಾಗಿ ಅಥವಾ ದೂರವಾಣಿ ಅಥವಾ ಕಚೇರಿಯ ಇಮೇಲ್ ವಿಳಾಸ commramh@yahoo.in ಮತ್ತು ddheritagemysore@gmail.com ನ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಹಾಗೂ ಕಡ್ಡಾಯವಾಗಿ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸ್ಥಿರ ದೂ. ಸಂ:0821-2424671/ 2424673 ಹಾಗೂ ಉಪ ನಿರ್ದೇಶಕ (ಪರಂಪರೆ) ಡಾ.ಸಿ.ಎನ್.ಮಂಜುಳಾ ಅವರ ಮೊ.ಸಂ:83102 50733 ಮತ್ತು ಪ್ರಥಮ ದರ್ಜೆ ಸಹಾಯಕ ಶಶಿಧರ ಎಸ್ ಅವರ ಮೊ.ಸಂ: 7349057976 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು: ಯುವ ಸಂಭ್ರಮಕ್ಕೆ ಚಾಲನೆ ನೀಡಿದ ನಟ ಶ್ರೀಮುರುಳಿ - Mysuru Dasara

ABOUT THE AUTHOR

...view details