ETV Bharat / state

ನನೆಗುದಿಗೆ ಬಿದ್ದ ಹುಬ್ಬಳ್ಳಿ ಸ್ಮಾರ್ಟ್​ ಸಿಟಿ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್: ಗುತ್ತಿಗೆದಾರನಿಗೆ ದಂಡ - MULTI LEVEL CAR PARKING COMPLEX

2020ರಲ್ಲಿ ಕಾಂಪ್ಲೆಕ್ಸ್​ ಕಾಮಗಾರಿ ಆರಂಭಗೊಂಡರೂ ಹೆಚ್ಚು ಪ್ರಗತಿ ಇಲ್ಲದಿರುವುದು ಸ್ಮಾರ್ಟ್​ ಸಿಟಿ ಯೋಜನೆಗೆ ಹಿನ್ನಡೆ ಉಂಟು ಮಾಡಿದೆ. ಈ ಕುರಿತು 'ಈಟಿವಿ ಭಾರತ'ದ ಹುಬ್ಬಳ್ಳಿ ಪ್ರತಿನಿಧಿ ಹೆಚ್.ಬಿ.ಗಡ್ಡದ ಅವರ ವಿಶೇಷ ವರದಿ ಇಲ್ಲಿದೆ.

SMART CITY MULTI-LEVEL PARKING COMPLEX OF HUBBALLI WORK GOES SLOW
ನೆನೆಗುದಿಗೆ ಬಿದ್ದ ಹುಬ್ಬಳ್ಳಿ ಸ್ಮಾರ್ಟ್​ ಸಿಟಿ ಮಲ್ಟಿ-ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ (ETV Bharat)
author img

By ETV Bharat Karnataka Team

Published : Nov 22, 2024, 4:57 PM IST

Updated : Nov 22, 2024, 5:52 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾದ ವಾಹನ ನಿಲುಗಡೆಗೆ ಆನುಕೂಲವಾಗುವ ನಿಟ್ಟಿನಲ್ಲಿ ಮಲ್ಟಿ ಲೆವಲ್ ಕಾರು ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿತ್ತು. ಆದರೆ, ದಶಕಗಳು ಕಳೆದರೂ ಈ ಯೋಜನೆ ಸಫಲವಾಗಿಲ್ಲ. ಹೀಗಾಗಿ ಕಠಿಣ ‌ನಿರ್ಧಾರಕ್ಕೆ ಬಂದಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗುತ್ತಿಗೆದಾರನಿಗೆ ಕೋಟ್ಯಂತರ ರೂ. ದಂಡ ಹಾಕಿ ಹಲವು ನೋಟಿಸ್ ನೀಡಿದ್ದಾರೆ.

ಹುಬ್ಬಳ್ಳಿಯ ಸಾಯಿಬಾಬಾ ದೇಗುಲದ ಎದುರಿನ ಕೋರ್ಟ್‌ ಸರ್ಕಲ್‌ನಲ್ಲಿ ಬಹುಮಟ್ಟದ ಪಾರ್ಕಿಂಗ್‌ ಕಾಂಪ್ಲೆಕ್ಸ್‌ಗಾಗಿ ಹುಬ್ಬಳ್ಳಿ ನಾಗರಿಕರು ಕಾದು ಕುಳಿತಿದ್ದರು. ಆದರೆ, ಆ ಕನಸು ಕನಸಾಗಿಯೇ ಉಳಿದಿದೆ.‌ ಮಾರ್ಚ್ 2020 ರಲ್ಲಿ ಪ್ರಾರಂಭವಾದ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಮಾತ್ರ ಇನ್ನೂ ಕಾಣುತ್ತಿಲ್ಲ. ಕಳೆದ 4 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ‌ ಕಟ್ಟಡ ನೆಲಬಿಟ್ಟು ಎದ್ದಿಲ್ಲ. ಇದು ಸ್ಮಾರ್ಟ್ ಸಿಟಿ ಯೋಜನೆಗೆ ತೀವ್ರ ಹಿನ್ನೆಡೆಯನ್ನುಂಟು ಮಾಡಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೊನೆ ಅಸ್ತ್ರ ಪ್ರಯೋಗ ಮಾಡಿದ್ದಾರೆ.

ನನೆಗುದಿಗೆ ಬಿದ್ದ ಹುಬ್ಬಳ್ಳಿ ಸ್ಮಾರ್ಟ್​ ಸಿಟಿ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ (ETV Bharat)

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ‌ ನಿರ್ದೇಶಕರು ಹೇಳಿದ್ದಿಷ್ಟು: ಸ್ಮಾರ್ಟ್ ಸಿಟಿ ವ್ಯವಸ್ಥಾಪಕ‌ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತ ಜೊತೆ ಮಾತನಾಡಿ, "ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಚ್‌ಡಿಎಸ್‌ಸಿಎಲ್) ಸಾರ್ವಜನಿಕ - ಖಾಸಗಿ ಸಹಭಾಗಿತ್ವ (ಪಿಪಿಪಿ) ಮೋಡ್‌ನಲ್ಲಿ 50 ಕೋಟಿ ವೆಚ್ಚದಲ್ಲಿ (ಎಚ್‌ಡಿಎಸ್‌ಸಿಎಲ್‌ನ 10 ಕೋಟಿ ಷೇರುಗಳನ್ನು ಒಳಗೊಂಡಿದೆ) ನಿರ್ಮಾಣವಾಗುತ್ತಿರುವ ಬಹುಮಹಡಿ ಕಾರು ಪಾರ್ಕಿಂಗ್ ಯೋಜನೆಯಾಗಿದೆ. 2020ರಲ್ಲಿ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್ ಕಾರಣಾಂತರಗಳಿಂದ ಹಲವಾರು ಅವಕಾಶ ನೀಡಲಾಗಿದೆ."

"ಹುಬ್ಬಳ್ಳಿಯ ಸುರೇಶ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿಯಲ್ಲಿ ಅತ್ಯಂತ ಕಳಪೆ ಪ್ರಗತಿ ಇದೆ‌. ಈ ಬಹುಮಹಡಿ‌ ಕಟ್ಟಡ ಒಂದು ಸೇಫ್ ಲೇವಲ್​ಗೆ ಬರುವವರೆಗೆ ಗುತ್ತಿಗೆ ರದ್ದು ಮಾಡಲು ಸಾಧ್ಯವಾಗಿಲ್ಲ. ಈ‌ ಕುರಿತಂತೆ ‌ಬೋರ್ಡ್ ಮಟ್ಟದಲ್ಲಿ ‌ಚರ್ಚೆ ಆಗಿದೆ. ಈ‌ ಕಟ್ಟಡ ಅತ್ಯಂತ ‌ಮಹತ್ವದ ಜಾಗದಲ್ಲಿ ಇರುವುದರಿಂದ ಗುತ್ತಿಗೆ ರದ್ದು‌‌ ಮಾಡಿದರೆ ಸಮಸ್ಯೆ ಆಗುವ ಭೀತಿ ಇದೆ. ಹೀಗಾಗಿ ‌ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರಿಗೆ 2 ಕೋಟಿ 70 ಲಕ್ಷ ದಂಡ ಹಾಕಿ ಕಾಮಗಾರಿ ಕೂಡಲೇ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಶೇ.25ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಸಾಕಷ್ಟು ನೋಟಿಸ್ ಕೂಡ ಜಾರಿ ಮಾಡಲಾಗಿದೆ" ಎಂದರು.

2025ರ ಮಾರ್ಚ್​​​ವರೆಗೂ ಗಡುವು ನೀಡಲಾಗಿದೆ: "ಕಟ್ಟಡದ ಗ್ರೌಂಡ್​ ಲೆವಲ್ ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.‌ ಈ ಜಾಗ ಮಹಾನಗರ ಪಾಲಿಕೆಗೆ ಸೇರಿದ್ದಾಗಿದೆ. ಕಾಮಗಾರಿ ಒಂದು ಹಂತಕ್ಕೆ ತಲುಪಿಸಲು 2025 ಮಾರ್ಚ್​ವರೆಗೆ ಅವಧಿ ನೀಡಲಾಗಿದೆ. ಇದಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ, ಕಾರ್ಯದರ್ಶಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮಹಾನಗರ ಪಾಲಿಕೆಗೆ ವಹಿಸಬೇಕೋ ಅಥವಾ ಖಾಸಗಿ ಸಹಭಾಗಿತ್ವದ ಮತ್ತೊಬ್ಬರಿಗೆ ಕೊಡಬೇಕೋ ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ವಿವರಿಸಿದರು.

ಯೋಜನೆಯ ವೈಶಿಷ್ಟ್ಯಗಳು: ವಾಹನಗಳಿಗೆ ಸ್ಮಾರ್ಟ್ ಕಾರ್ಡ್ ಆಧಾರಿತ ಪ್ರವೇಶ, ಸಾರ್ವಜನಿಕ ಬೈಸಿಕಲ್ ಹಂಚಿಕೆ ಮತ್ತು ಆದಾಯವನ್ನು ಹೆಚ್ಚಿಸಲು ಜಾಹೀರಾತುಗಳಿಗಾಗಿ ಡಿಜಿಟಲ್ ಬಿಲ್‌ಬೋರ್ಡ್‌ಗಳನ್ನು ಯೋಜನೆ ಒಳಗೊಂಡಿರುತ್ತದೆ. ಯೋಜನೆಯ ಒಟ್ಟಾರೆ ನಿರ್ಮಾಣ ಪ್ರದೇಶವು ಸುಮಾರು 1,22,500 ಚದರ ಅಡಿಗಳಷ್ಟಿದೆ. ಇದರಲ್ಲಿ 35,000 ಚದರ ಅಡಿ ಜಾಗವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ಏಕಕಾಲದಲ್ಲಿ 290 ಕಾರುಗಳ ಪಾರ್ಕಿಂಗ್​ಗೆ ಅವಕಾಶ ಕಲ್ಪಿಸುತ್ತದೆ. ಕಾರಿನ ಪ್ರತಿಯೊಂದು ಸ್ಲಾಟ್ ಅನ್ನು 3 ಬೈಕ್‌ಗಳಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವುದು. ಶೇ. 25 ಪ್ರದೇಶವು ವರ್ಟಿಕಲ್ ಗಾರ್ಡನ್ ಅನ್ನು ಹೊಂದಿರುತ್ತದೆ. ಮತ್ತು ಶೇ. 25ರಷ್ಟು ಡಿಜಿಟಲ್ ಜಾಹೀರಾತು ಫಲಕಗಳನ್ನು ಹೊಂದಿರುತ್ತದೆ. ಯೋಜನೆಯು ಪಾರ್ಕಿಂಗ್ ಸಂವೇದಕಗಳು, ಬೂಮ್ ಬ್ಯಾರಿಕೇಡ್‌ಗಳು ಮತ್ತು ಸ್ವಯಂಚಾಲಿತ ಟಿಕೆಟ್ ಮಾರಾಟ ಕಿಯೋಸ್ಕ್‌ಗಳನ್ನು ಸಹ ಒಳಗೊಂಡಿರುತ್ತದೆ.

ಇದನ್ನೂ ಓದಿ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ಆಕ್ಷೇಪಣೆ: ಹು-ಧಾ ಪಾಲಿಕೆ ಆಯುಕ್ತರು ಹೇಳಿದ್ದೇನು? - Hubballi Smart City Projects

Last Updated : Nov 22, 2024, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.