ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮದ ಹಗರಣ: ಯಾವ ಕಂಪನಿಗಳಿಗೆ ಎಷ್ಟೆಷ್ಟು ಕೋಟಿ ವರ್ಗಾವಣೆ?, ಇಲ್ಲಿದೆ ಫುಲ್​​ ಡೀಟೇಲ್ಸ್ - Valmiki corporation scam

ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ 18 ಕಂಪನಿಗಳ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬಯಲಾಗಿದೆ. ಎಷ್ಟೆಷ್ಟು ಹಣ ವರ್ಗಾವಣೆ ಮಾಡಲಾಗಿದೆ ಎಂಬ ಡೀಟೇಲ್ಸ್ ಇಲ್ಲಿದೆ.

By ETV Bharat Karnataka Team

Published : Jul 11, 2024, 3:49 PM IST

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ (https://kmvstdcl.karnataka.gov.in/)

ಬೆಂಗಳೂರು:ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅವ್ಯವಹಾರ ಆರೋಪ ಸಾಕಷ್ಟು ಸದ್ದು ಮಾಡುತ್ತಿದೆ. ಈ ಸಂಬಂಧ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಕುರಿತ ದಾಖಲೆಗಳು 'ಈಟಿವಿ ಭಾರತ್'ಗೆ ದಾಖಲೆ ಲಭ್ಯವಾಗಿದೆ.

ಹಣ ವರ್ಗಾವಣೆಯ ದಾಖಲೆ (ETV Bharat)

ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರನ್ ಮೇ ತಿಂಗಳಲ್ಲಿ ಆತ್ಮಹತ್ಯೆ ಬಳಿಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಿಂದ ಕಳೆದ ಮಾರ್ಚ್ ಮತ್ತು ಏಪ್ರಿಲ್​, ಮೇ ತಿಂಗಳಲ್ಲಿ ಹಂತ - ಹಂತವಾಗಿ 89 ಕೋಟಿ ಹಣವನ್ನು ಹೈದರಾಬಾದ್​ನ ಆರ್​ಬಿಎಲ್ ಬ್ಯಾಂಕ್​ನ ನಿರ್ವಹಣೆಯಲ್ಲಿರುವ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ತದನಂತರ ಐಟಿ, ಸೆಕ್ಯೂರಿಟಿ ಹಾಗೂ ಡಿಟೆಕ್ಟಿವ್ ಸೇರಿದಂತೆ ವಿವಿಧ 18 ಕಂಪನಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಯಾವ ಕಂಪನಿಗೆ?, ಯಾವಾಗ?, ಎಷ್ಟೆಷ್ಟು ಹಣ ವರ್ಗಾವಣೆ ಮಾಡಲಾದ ಮಾಹಿತಿ ಇಲ್ಲಿದೆ.

ಹಣ ವರ್ಗಾವಣೆಯ ದಾಖಲೆ (ETV Bharat)
  • ಮಾರ್ಚ್ 5 - ಜೈಲೆಂಟ್ ಟ್ರೈನಿಂಗ್​ ಅಂಡ್ ಕನ್ಸಲ್​ಟಿಂಗ್ ಸರ್ವಿಸ್ - 4.97 ಕೋಟಿ ರೂ.
  • ಮಾರ್ಚ್ 5 - ಫೀಪ್ಯುಮ್ಸ್ ಮ್ಯಾನೇಜ್​ಮೆಂಟ್ ಪ್ರೈ.ಲಿ. - 5.35 ಕೋಟಿ ರೂ.
  • ಮಾರ್ಚ್​ 7 - ಅಕಾರ್ಡ್ ಬಿಸಿನೆಸ್ ಸರ್ವಿಸ್ - 5.46 ಕೋಟಿ ರೂ.
  • ಮಾರ್ಚ್​ 7 - ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜಿಸ್ ಪ್ರೈ. - 4.53 ಕೋಟಿ ರೂ.
  • ಮಾರ್ಚ್ 7 - ಮನು ಎಂಟರ್ಪ್ರೈಸಸ್ - 5.01 ಕೋಟಿ ರೂ.
  • ಮಾರ್ಚ್ 7 - ವೈಎಂ ಎಂಟರ್​ಪ್ರೈಸಸ್ - 4.98 ಕೋಟಿ ರೂ.
  • ಮಾರ್ಚ್ 11 - ವೋಲ್ಟಾ ಟೆಕ್ನಾಲಜಿಸ್ ಸರ್ವೀಸಸ್ - 5.12 ಕೋಟಿ ರೂ.
  • ಮಾರ್ಚ್ 11 - ನಿತ್ಯಾ ಸೆಕ್ಯುರಿಟಿ ಸರ್ವಿಸ್ - 4.47 ಕೋಟಿ ರೂ.
  • ಮೇ 6 - ಎಂಕ್ಯೂ ಟಾಲೆಂಕ್ಯೂ ಸಾಫ್ಟ್​​ವೇರ್ ಇಂಡಿಯಾ ಪ್ರೈ.ಲಿ. - 5.10 ಕೋಟಿ
  • ಮಾರ್ಚ್ 30 - ಸಿಸ್ಟಮ್ ಅಂಡ್ ಸರ್ವಿಸಸ್ ಕಂಪನಿ - 4‌.55 ಕೋಟಿ ರೂ.
  • ಮಾರ್ಚ್ 30 - ರಾಮ್ ಎಂಟರ್‌ಪ್ರೈಸಸ್ - 5.07 ಕೋಟಿ ರೂ.
  • ಮಾರ್ಚ್ 30 - ಸ್ಕಿಲ್ ಮ್ಯಾಪ್ ಟ್ರೈನಿಂಗ್ ಅಂಡ್ ಸರ್ವಿಸಸ್ ಪ್ರೈ.ಲಿ. - 4‌.84 ಕೋಟಿ ರೂ.
  • ಮಾರ್ಚ್ 30 - ಸ್ವಾಪ್‌ ಡಿಸೈನ್ ಪ್ರೈ.ಲಿ. - 5.15 ಕೋಟಿ ರೂ.
  • ಮಾರ್ಚ್ 30 - ಜಿಎನ್ ಇಂಡಸ್ಟ್ರೀಸ್ - 4.42 ಕೋಟಿ ರೂ.
  • ಮಾರ್ಚ್ 30 - ನಾವೆಲ್ ಸೆಕ್ಯುರಿಟಿ ಸರ್ವಿಸಸ್ ಪ್ರೈ.ಲಿ. - 4‌.56 ಕೋಟಿ ರೂ.
  • ಮಾರ್ಚ್ 30 - ಸುಜಲ್ ಎಂಟರ್‌ಪ್ರೈಸಸ್ - 5.63 ಕೋಟಿ ರೂ.
  • ಮಾರ್ಚ್ 30 - ಗ್ರಾಬ್ ಎ ಗ್ರಬ್ ಸರ್ವಿಸಸ್ ಪ್ರೈ.ಲಿ. - 5.88 ಕೋಟಿ ರೂ.
  • ಏಪ್ರಿಲ್ 23 - ವಿ6 ಬ್ಯುಸಿನೆಸ್ ಸರ್ವಿಸಸ್‌‌‌ - 4.50 ಕೋಟಿ ರೂ.

ಇದನ್ನೂ ಓದಿ:ವಾಲ್ಮೀಕಿ ನಿಗಮ ಹಗರಣ: ಯೂನಿಯನ್ ಬ್ಯಾಂಕ್​ ಮ್ಯಾನೇಜರ್ ಮನೆ ಜಪ್ತಿ ಮಾಡಿದ CBI, ನಾಗೇಂದ್ರ ಆಪ್ತ ED ವಶಕ್ಕೆ

ABOUT THE AUTHOR

...view details