ಕರ್ನಾಟಕ

karnataka

ETV Bharat / state

ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದೂಗಳೇ: ವಚನಾನಂದ ಸ್ವಾಮೀಜಿ - Vachanananda Swamiji - VACHANANANDA SWAMIJI

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಿಂದೂ ಧರ್ಮದ ಕುರಿತು ಮಾತನಾಡುತ್ತಾ, ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದೂಗಳೇ ಎಂದು ಹೇಳಿದ್ದಾರೆ.

vachanananda-swamiji
ವಚನಾನಂದ ಸ್ವಾಮೀಜಿ (ETV Bharat)

By ETV Bharat Karnataka Team

Published : Aug 16, 2024, 4:45 PM IST

Updated : Aug 16, 2024, 5:01 PM IST

ವಚನಾನಂದ ಸ್ವಾಮೀಜಿ ಮಾತು (ETV Bharat)

ಹಾವೇರಿ:ಭಾರತದಲ್ಲಿರುವ ಪ್ರತಿಯೊಬ್ಬನೂ ಹಿಂದೂನೇ. ಇಲ್ಲಿರುವ ಮುಸ್ಲೀಮರೂ ಹಿಂದೂಗಳೇ ಎಂದು ಹರಿಹರ ಪಂಚಮಸಾಲಪೀಠದ ವಚನಾನಂದಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಹಾವೇರಿಯಲ್ಲಿ ಇಂದು ಮಾತನಾಡಿದ ಅವರು, ಹಿಂದೂ ಅಂದರೆ ಸತ್ಯ, ಸನಾತನ. ಬೇರೆ ಧರ್ಮಗಳು ಉತ್ಪತ್ತಿಯಾಗುವ ಮುನ್ನ ಇದ್ದಿದ್ದೇ ಹಿಂದೂಧರ್ಮ ಎಂದರು.

ಇದು ಅಖಂಡ ಭಾರತ. ಸನಾತನ ಧರ್ಮ ಹಿಂದೂವಿನ ಭಾಗ. ಆರ್ಯರೂ ಹಿಂದೂ ಭಾಗವೇ. ಹಿಂದೂಗೆ ಗಡಿ ಇಲ್ಲ ಎಂದು ತಿಳಿಸಿದರು.

ಜಗತ್ತಿನ ಸಿದ್ಧಾಂತಗಳು, ತತ್ವಗಳಿಗೆ ಮೂಲ ಹಿಂದೂ. ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ಇರುವುದು ಮೂಲತ: ಹಿಂದೂಗಳೇ. ಸಾಕ್ರೆಟಿಸ್, ತುಕಾರಾಮ್, ನಾಮದೇವ್, ಶಂಕರರು, ಬಸವಣ್ಣ ಎಲ್ಲರೂ ದಯೆಯ ಬಗ್ಗೆ ಹೇಳಿದ್ದರು. ಆಚರಣೆ ಮನೆಯಲ್ಲಿರಬೇಕು. ದೇಶ, ಸಮುದಾಯ ಅಂದಾಗ ನಾವೆಲ್ಲಾ ಹಿಂದೂಗಳು ಎಂದು ವಿವರಿಸಿದರು.

ಬೇರೆ ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ಪ್ರಸ್ತಾಪ ಮಾಡಲ್ಲ. ಹಿಂದೂ ಅಂದರೆ ಶುದ್ದ ಜೀವನ ಪದ್ದತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ತಿಳಿಸಿದರು.

ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಹಾಲು ಕೊಡಿ ಅಂತಾರೆ. ಅದನ್ನು ನೀವು ಮಾಡಿಕೊಂಡು ಹೋಗಿ. ಬೇಡ ಅಂದವರಾರು?. ಹಾಲು ಕೊಡುವ ತಾಯಿ. ಹತ್ಯೆ ಮಾಡ್ತಿದಾರೆ. ಎಷ್ಟು ಜನ ಸ್ವಾಮಿಗಳು ಗೋ ಹತ್ಯೆ ವಿರೋಧಿಸಿದ್ದೀರಿ ಎಂದು ಇದೇ ವೇಳೆ ವಚನಾನಂದ ಸ್ವಾಮೀಜಿ ಪ್ರಶ್ನಿಸಿದರು.

ಅನಾಥ ಮಕ್ಕಳ ಮೇಲೆ ಕರುಣೆ ಇದ್ದರೆ ಹಾಲು ಕೊಡಿ. ಕಲ್ಲು ನಾಗರಕ್ಕೆ ಹಾಲೆರೆಯುವ ಪದ್ಧತಿಯ ಬದಲು ಅನಾಥ ಮಕ್ಕಳಿಗೆ ಹಾಲು ಕೊಡಿ ಎಂಬ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ವಚನಾನಂದ ಸ್ವಾಮಿಜಿ ವಿರೋಧ ವ್ಯಕ್ತಪಡಿಸಿದರು.

ಲಿಂಗಾಯತ ಇರಲಿ, ವೀರಶೈವ ಇರಲಿ ಎಲ್ಲರೂ ಒಂದಾಗಿ ಹೋಗಬೇಕು ಎಂದು ತಿಳಿಸಿದರು. ಕೆಲವರ ಜಾತಿ ಸರ್ಟಿಫಿಕೇಟ್‌ಗಳಲ್ಲಿ ಹಿಂದೂ ಬೌದ್ಧ ಅಂತಿದೆ. ಹಿಂದೂ ಜೈನ ಅಂತಿದೆ. ಅದೇ ರೀತಿ ಹಿಂದೂ, ಲಿಂಗಾಯತ, ವೀರಶೈವ ಹಾಗೂ ಲಿಂಗಾಯತರು ಮೊದಲು ಒಂದಾಗಿ ಎಂದು ಶ್ರೀಗಳು ತಿಳಿಸಿದರು.

ಒಂದಾಗದೇ ಹೇಗೆ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಪ್ರಶ್ನಿಸುತ್ತಾ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಏಕೆ ಸಿಕ್ಕಿಲ್ಲ? ಕೆಲ ಸ್ವಾಮಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ಲಾ? ಹಾಗೆ ಹೇಳುವ ಸ್ವಾಮೀಜಿಗಳಿಗೆ ಅವರ ಸರ್ಟಿಫಿಕೇಟ್ ತೋರ್ಸಿ ಅಂತ ಹೇಳಿ ಎಂದು ಆಗ್ರಹಿಸಿದರು.

ಬಸವಣ್ಣ ಬ್ರಾಹ್ಮಣ, ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು. ನಮ್ಮನ್ನು ಉದ್ಧಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯಿತು. ಇಲ್ಲದಿದ್ದರೆ ಶೂದ್ರರಾಗಿಯೇ ಇರಬೇಕಿತ್ತು ಎಂದು ವಚನಾನಂದ ಶ್ರೀ ತಿಳಿಸಿದರು.

ಇದನ್ನೂ ಓದಿ:ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ

Last Updated : Aug 16, 2024, 5:01 PM IST

ABOUT THE AUTHOR

...view details