ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್​​; ನೈಋತ್ಯ ರೈಲ್ವೆಗೆ ಹಂಚಿಕೆಯಾದ ಹಣವೆಷ್ಟು ಗೊತ್ತಾ? - Union Budget - UNION BUDGET

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2024-25 ಸಾಲಿನ ಆಯವ್ಯಯದಲ್ಲಿ ರೈಲ್ವೆಗೆ ದಾಖಲೆಯ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಮೊತ್ತದ ಮಾಹಿತಿ ಇಲ್ಲಿದೆ.

Union Budget made a bumper contribution to South Western Railway
ಆನ್‌ಲೈನ್‌ ವೇದಿಕೆ ಮೂಲಕ ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರ ಸಚಿವರು (ETV Bharat)

By ETV Bharat Karnataka Team

Published : Jul 25, 2024, 1:20 PM IST

ಹುಬ್ಬಳ್ಳಿ: 2024-25ನೇ ಸಾಲಿನ ಬಜೆಟ್​​ನಲ್ಲಿ ರೈಲ್ವೆಗೆ 2,62,200 ಲಕ್ಷ ಕೋಟಿ ರೂ.ಗಳ ವಿನಿಯೋಗ ಮಾಡಲಾಗಿದ್ದು, ಇದರಲ್ಲಿ ಭಾರತೀಯ ರೈಲ್ವೆಯ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ 1,09,000 ಕೋಟಿ ರೂ. ಮೀಸಲಿಡಲಾಗಿದೆ. ಈ ಆರ್ಥಿಕ ಸಾಲಿಗೆ 7,559 ಕೋಟಿ ರೂ.ಗಳ ಕಾರ್ಯ ವೆಚ್ಚದ ಅಡಿಯಲ್ಲಿ ಕರ್ನಾಟಕಕ್ಕೆ ಅತ್ಯಧಿಕ ಬಜೆಟ್ ಹಂಚಿಕೆ ಮಾಡಲಾಗಿದೆ. ಇದು 2009-14ನೇ ಸಾಲಿನ ಸರಾಸರಿ ಬಜೆಟ್ ಅನುದಾನ 835 ಕೋಟಿ ರೂ.ಗಳಿಗೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ.

ಈ ಕುರಿತು ಕೇಂದ್ರ ರೈಲ್ವೆ, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್‌ ಸಚಿವ ಅಶ್ವಿನಿ ವೈಷ್ಣವ್‌ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,559 ಕೋಟಿ ರೂ. ಮೀಸಲಿಡಲಾಗಿದೆ. ಈ ಅನುದಾನವು ಯುಪಿಎ ಅವಧಿಯಲ್ಲಿ ನೀಡಿದ್ದಕ್ಕಿಂತ 9 ಪಟ್ಟು ಹೆಚ್ಚು ಇದೆ ಎಂದು ಹೇಳಿದ್ದಾರೆ.

ಆನ್‌ಲೈನ್‌ ವೇದಿಕೆ ಮೂಲಕ ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರ ಸಚಿವರು (ETV Bharat)

ಕರ್ನಾಟಕಕ್ಕೆ ನೀಡಲಾದ ಹಣದ ವಿವರಣೆ ಹೀಗಿದೆ:

  • 2024-25ನೇ ಸಾಲಿಗೆ 7,559 ಕೋಟಿ ರೂ.ಗಳ ಕಾರ್ಯ ವೆಚ್ಚದ ಅಡಿಯಲ್ಲಿ ಕರ್ನಾಟಕಕ್ಕೆ ಅತ್ಯಧಿಕ ಬಜೆಟ್ ಹಂಚಿಕೆ ಮಾಡಲಾಗಿದೆ. ಇದು 2009-14ನೇ ಸಾಲಿನ ಸರಾಸರಿ ಬಜೆಟ್ ಅನುದಾನ 835 ಕೋಟಿ ರೂ.ಗಳಿಗೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ.
  • ಪ್ರಸ್ತುತ ಕರ್ನಾಟಕದಲ್ಲಿ 47,016 ಕೋಟಿ ರೂ.ಗಳ ಮೌಲ್ಯದ 3840 ಕಿ.ಮೀ ಉದ್ದದ 31 ಯೋಜನೆಗಳು ಪ್ರಗತಿಯಲ್ಲಿವೆ.
  • ಕಳೆದ 10 ವರ್ಷಗಳಲ್ಲಿ ಕರ್ನಾಟಕದಾದ್ಯಂತ 638 ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇದು ರಸ್ತೆ ಪ್ರಯಾಣಿಕರಿಗೆ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸಿದೆ.
  • 2014 ರಿಂದ 2024ರ ವರೆಗೆ, ಸರಾಸರಿ ವಾರ್ಷಿಕ ಹೊಸ ಮಾರ್ಗವು ಗಮನಾರ್ಹವಾಗಿ 163 ಕಿಲೋ ಮೀಟರ್​​ಗೆ ಹೆಚ್ಚಾಗಿದ್ದು, ಇದು 2009 ರಿಂದ 2014 ರ ವರೆಗೆ ವರ್ಷಕ್ಕೆ ಸರಾಸರಿ 113 ಕಿಲೋ ಮೀಟರ್​ಗೆ ಹೋಲಿಸಿದರೆ 1.4 ಪಟ್ಟು ಹೆಚ್ಚಳ ಕಂಡಿದೆ.
  • ಕರ್ನಾಟಕದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಒಟ್ಟು 59 ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಈ ನಿಲ್ದಾಣಗಳನ್ನು ವಿಶ್ವದರ್ಜೆಯ ಸೌಲಭ್ಯಗಳಾಗಿ ಪರಿವರ್ತಿಸುವುದು, ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವುದು ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು, ಆಧುನೀಕರಿಸುವುದರ ಜೊತೆಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಇದೆ. ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯ ಮತ್ತು ಸೇವೆಗಳನ್ನು ಒದಗಿಸುವ ದೃಷ್ಟಿಕೋನವನ್ನು ಈ ನಿಲ್ದಾಣಗಳು ಹೊಂದಿರಲಿವೆ.
  • 2009-2014ರ ಅವಧಿಯಲ್ಲಿ ವಿದ್ಯುದ್ದೀಕರಣವು ವರ್ಷಕ್ಕೆ ಸರಾಸರಿ 18 ಕಿ.ಮೀ ಆಗಿದ್ದು ಮತ್ತು 2014-2024ರ ಅವಧಿಯಲ್ಲಿ ಸರಾಸರಿ ವಿದ್ಯುದ್ದೀಕರಣವನ್ನು ವರ್ಷಕ್ಕೆ 317 ಕಿ.ಮೀ.ಗೆ ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಇದು ಕಳೆದ 10 ವರ್ಷಗಳಲ್ಲಿ 18 ಪಟ್ಟು ಹೆಚ್ಚಾಗಿದೆ.
    ಆನ್‌ಲೈನ್‌ ವೇದಿಕೆ ಮೂಲಕ ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರ ಸಚಿವರು (ETV Bharat)

ನೈಋತ್ಯ ರೈಲ್ವೆಗಾಗಿ ನೀಡಲಾದ ಹಣದ ವಿವರಣೆ ಹೀಗಿದೆ:

  • ನೈಋತ್ಯ ರೈಲ್ವೆಯಲ್ಲಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 1103 ಕೋಟಿ ರೂ.ಗಳ ವೆಚ್ಚದಲ್ಲಿ 46 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಮತ್ತು 5 ಪ್ರಮುಖ ನಿಲ್ದಾಣಗಳನ್ನು ಸಹ ಪುನರಾಭಿವೃದ್ಧಿ ಮಾಡಲಾಗುತ್ತಿದೆ.
  • ಯಶವಂತಪುರ ನಿಲ್ದಾಣವನ್ನು 367 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಜುಲೈ 2025ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು 484 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅಕ್ಟೋಬರ್ 2025 ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
  • ಪ್ರಸ್ತುತ ಶೇ 88% ಮಾರ್ಗವು ವಿದ್ಯುದ್ದೀಕರಣಗೊಂಡಿದ್ದು ಮಾರ್ಚ್ 2025 ರ ವೇಳೆಗೆ 100% ವಿದ್ಯುದ್ದೀಕರಣದ ಗುರಿಯನ್ನು ಹೊಂದಿದೆ.
    ನೈಋತ್ಯ ರೈಲ್ವೆ ಸಿಬ್ಬಂದಿ (ETV Bharat)

ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ ರೈಲ್ವೆ ಯೋಜನೆಗಳು, ಅಗತ್ಯ ಇರುವ ರೈಲ್ವೆ ಮಾರ್ಗಗಳ ಆಧುನೀಕರಣ, ನಿಲ್ದಾಣಗಳ ಅಭಿವೃದ್ಧಿ, ಸುರಕ್ಷತಾ ಚಟುವಟಿಕೆಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅನುದಾನ ಹಂಚಿಕೆ ಆಗಲಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮುಂದಿನ 5 ವರ್ಷದಲ್ಲಿ 4.1 ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಬಜೆಟ್‌ ಒತ್ತು - Youth Employment And Skilling

ABOUT THE AUTHOR

...view details