ಬೆಂಗಳೂರು: ಯುಜಿಸಿಇಟಿ-2024ರ ಆನ್ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳಾದ ಬಿ. ಸಿ. ಡಿ. ಐ. ಜೆ. ಕೆ. ಎಲ್. ಎಂ. ಎನ್. ಜೆಡ್. ಈ ಕ್ಲಾಸ್ಗಳನ್ನು ಕ್ಷೇಮ್ ಮಾಡಿರುವ ಹಾಗೂ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ಆಫ್ ಲೈನ್ ದಾಖಲಾತಿ ಪರಿಶೀಲನೆಯು ಜೂನ್ 25 ರಿಂದ 29ರ ವರೆಗೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಸಂಬಂಧಿಸಿದ ಅಭ್ಯರ್ಥಿಗಳಿಗೆ ಖುದ್ದು ಹಾಜರಾಗಲು ಸೂಚಿಸಿದ್ದಾರೆ. "ವೈ" ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ & ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, [ಬಿ.ಎಸ್ಸಿ (ಆನರ್ಸ್) ಕೃಷಿ, ಬಿ.ಎಸ್ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದವು], ಬಿ.ಎಸ್ಸಿ (ನರ್ಸಿಂಗ್), ಬಿ.ಫಾರ್ಮಾ, 2ನೇ ವರ್ಷದ ಬಿ-ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಇದು ಅನ್ವಯವಾಗುತ್ತದೆ.